ದೇವಾಡಿಗ ನವೋದಯ ಸಂಘ ®ಬೆಂಗಳೂರು ಇದರ ವಾರ್ಷಿಕ ಕ್ರೀಡೋತ್ಸವ ಚಾಲನೆ.

ಬೆಂಗಳೂರು: ದೇವಾಡಿಗ ಸಮಾಜ ಭಾಂದವರಲ್ಲಿ ಕ್ರೀಡಾ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇವಾಡಿಗ ನವೋದಯ ಸಂಘ ®ಬೆಂಗಳೂರು ಇದರ ವಾರ್ಷಿಕ ಕ್ರೀಡೋತ್ಸವವನ್ನು ದಿನಾಂಕ 03/02/2019 ರಂದು ಬೆಂಗಳೂರಿನ ವಿಶ್ವವಿದ್ಯಾನಿಲಯ ದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಈ ಕ್ರೀಡೋತ್ಸವ ದಲ್ಲಿ 250 ಕ್ಕೂ ಹೆಚ್ಚು ಸ್ಪರ್ಧಿಗಳು ಹಾಗೂ ಸಮಾಜ ಭಾಂಧವರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜ ಭಾಂಧವರ ಸಮಾಕ್ಷಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ರವರು ಮತ್ತು

ದೇವಾಡಿಗ ವೆಲ್ಫೇರ್ ಅಸ್ಸೋಸ್ಸಿಯೇಶನ್ ಮುಂಬೈ ಇದರ 31 ನೇ ವಾರ್ಷಿಕೋತ್ಸವ ಸಮಾರಂಭ ಅಣ್ಣಯ್ಯ ಶೇರಿಗಾರ್ ಇವರಿಗೆ ದೇವಾಡಿಗ ರತ್ನ ಪ್ರಶಸ್ತಿ ಪ್ರಧಾನ.

ಮುಂಬಯಿ – ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲೊಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ ಇದರ 31 ನೇ ವಾರ್ಷಿಕೋತ್ಸವವು ವಡಾಲದ ಎನ್.ಕೆ.ಇ.ಎಸ್ ಹೈಸ್ಕೂಲ್ ಸಭಾಗ್ರಹದಲ್ಲಿ ಜನವರಿ 20 ರಂದು ವಿಜೃಂಭಣೆಯಿಂದ ನೆರವೇರಿತು.ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸುರೇಶ್ ಡಿ. ಪಡುಕೋಣೆ, ಮುಖ್ಯ ಅತಿಥಿಯಾಗಿ ಆಗಮಿಸಿದ ಸುರೇಶ್ ಪೂಜಾರಿ (ಮಾಲಕರು ಸುಖಸಾಗರ ಗ್ರೂಫ್ ಆಫ್ ಹೊಟೇಲ್ಸ್), ಸಂಘದ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ, ಶ್ರೀ ಏಕನಥೇಶ್ವೇರಿ ದೇವಸ್ಥಾನ ಕಟ್ಟಡ ಸಮಿತಿಯ

ಕುಂದಾಪುರ ವಾದ್ಯ ಕಲಾವಿದರ ಸಂಘ : ಅಣ್ಣಯ್ಯ ಶೇರಿಗಾರ್ ಅವರಿಗೆ ಸನ್ಮಾನ.

ಕುಂದಾಪುರ ವಾದ್ಯ ಕಲಾವಿದರ ಸಂಘ ಕೋಟೇಶ್ವರ ಇವರ ವತಿಯಿಂದ ಶ್ರೀ ಏಕನಾಥೇಶ್ವರಿ ದೇವಾಸ್ಥಾನ ಅಧ್ಯಕ್ಷರಾಗಿವ ಅಣ್ಣಯ್ಯ ಶೇರಿಗಾರ್ ಅವರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ವಾದ್ಯ ಕಲಾವಿದರ ಸಂಘ ಅಧ್ಯಕ್ಷರಾಗಿವ ರಾಘವೇಂದ್ರ ದೇವಾಡಿಗ ಹೆಮ್ಮಾಡಿ, ಗೌರವ ಅಧ್ಯಕ್ಷರಾಗಿವ ಭಾಸ್ಕರ್ ದೇವಾಡಿಗ ಕೋಟೇಶ್ವರ, ಕಾರ್ಯದರ್ಶಿ ರಾಜೇಶ್ ದೇವಾಡಿಗ ತ್ರಾಸಿ ,ನಿತ್ಯಾನಂದ ಕುಂದಾಪುರ, ರವಿ ದೇವಾಡಿಗ ಸಪ್ತ ಸ್ವರ ತಲೂರು,ನಿತೇಶ್ ಕೋಟೇಶ್ವರ ಉಪಸ್ಥಿತರಿದ್ದರು.

24ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ನಾಗೂರು ದೀಕ್ಷಾ ಜಿ ದೇವಾಡಿಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.

ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನವರು ಬೆಂಗಳೂರಿನಲ್ಲಿ ನೆಡೆಸಿರುವ 24ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ನಾಗೂರು ಸಂದೀಪ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ದೀಕ್ಷಾ ಜಿ ದೇವಾಡಿಗ ಮರವಂತೆ ದ್ವಿತೀಯ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.ಇವಳು ಮರವಂತೆ ಗುಂಡು ದೇವಾಡಿಗ ಮತ್ತು ಗೀತಾ ದೇವಾಡಿಗ ದಂಪತಿಯ ಪುತ್ರಿ.

ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಾಲಿಮಕ್ಕಿ ಬಿಜೂರಿನ ಚಂದ್ರ ದೇವಾಡಿಗ ತೇರ್ಗಡೆ.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನೆಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಾಲಿಮಕ್ಕಿ ಬಿಜೂರಿನ ಚಂದ್ರ ದೇವಾಡಿಗ ತೇರ್ಗಡೆಯಾಗಿರುತ್ತಾರೆ. ಇವರು ಬಿಜೂರಿನ ಸಾಲಿಮಕ್ಕಿಯ ಓಣಿಮನೆ ನಾರಾಯಣ ದೇವಾಡಿಗ ಹಾಗೂ ನಾಗಮ್ಮ ದೇವಾಡಿಗ ದಂಪತಿಯ ಪುತ್ರ. ಇವರು ಪ್ರಾಥಮಿಕ ಶಿಕ್ಷಣವನ್ನು ಸಾಲಿಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜ್ ಉಪ್ಪುಂದದಲ್ಲಿ ಮುಗಿಸಿರುತ್ತಾರೆ ಇವರು ಪದವಿಯನ್ನು ಭಂಡಾರ್ಕಾರ್ಸ್ ಕಾಲೇಜ್ ಕುಂದಾಪುರದಲ್ಲಿ

ಸಪ್ತಸ್ವರಸಹಕಾರಿ ಸಂಘ : ನಾರಾಯಣ ದೇವಾಡಿಗ ತಲ್ಲೂರು ಇವರಿಗೆ 7500ರೂ ವೈದ್ಯಕೀಯ ನೆರವು ನೀಡಲಾಯಿತು.

ಸಪ್ತಸ್ವರಸಹಕಾರಿ ಸಂಘ ತಲ್ಲೂರು ಇದರ ಅಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಸಹಕಾರದಿಂದ ಸದಸ್ಯರಾದ ನಾರಾಯಣ ದೇವಾಡಿಗ ತಲ್ಲೂರು ಇವರಿಗೆ 7500ರೂ ವೈದ್ಯಕೀಯ ನೆರವು ನೀಡಲಾಯಿತು. ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ನೀಡಿದರು. ಈ ಸಂಧರ್ಭದಲ್ಲಿ ರವಿ ದೇವಾಡಿಗ ತಲ್ಲೂರು, ನಿರ್ದೇಶಕರಾದ ಸುಶೀಲಾ ದೇವಾಡಿಗ ಉಪಸ್ಥಿತರಿದ್ದರು.

ದೇವಾಡಿಗ ಅಕ್ಷಯ ಕಿರಣ : ರೀತೇಶ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 20,000/- ವೈದ್ಯಕೀಯ ನೆರವು.

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಇಂದು ವಾಹನ ಅಫಘಾತಕ್ಕಿಡಾದ ಉಡುಪಿ ಬಡಗು ಬೆಟ್ಟು ಶ್ರೀಮತಿ ಶಾಂತ ದೇವಾಡಿಗರ ಮಗ ರೀತೇಶ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 20,000/- ವೈದ್ಯಕೀಯ ನೆರವು ನೀಡಿ 25 ನೇ ಸೇವಾಯಜ್ಣವನ್ನು ಪೂರೈಸಿದರು. ಸೇವಾದಾರರು ಆದ ಶ್ರೀ ಹರಿಶ್ಚಂದ್ರ ದೇವಾಡಿಗ ಮುOಬೈ, ಶ್ರೀ ಶಂಕರ ದೇವಾಡಿಗ ಅಂಕದಕಟ್ಟೆ, ಶ್ರೀ ಸತೀಶ ದೇವಾಡಿಗ ಕಾರ್ಕಡ ಕೋಟ ,

ಉತ್ತಮ ಕಾರ್ಯಕ್ಕೆ ಧರ್ಮಸ್ಥಳದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಧರ್ಮಸ್ಥಳದಲ್ಲಿ ಇಂದು ತೆಕ್ಕಟ್ಟೆ ಸುರೇಂದ್ರ ದೇವಾಡಿಗರವರಿಗೆ ಹಿಂದು ರುದ್ರಭೂಮಿ ಅಬಿವ್ರದ್ದಿ ಮತ್ತು ನಿರ್ವಹಣೆ ಮಾಡಿಸಿದ ಉತ್ತಮ ಕಾರ್ಯಕ್ಕೆ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಎರಡು ತಾಲೂಕಿಗೆ ಕಾರ್ಕಳ ಮತ್ತು ಕುಂದಾಪುರ ಕ್ಕೆ ಕುಂದಾಪುರದಿಂದ ತೆಕ್ಕಟ್ಟೆ ಸುರೇಂದ್ರ ದೇವಾಡಿಗರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪುಂಜಾ,ಮಂಗಳೂರು ಜಿಲ್ಲಾ ಪಂಚಾಯತ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು,ಡಾ:ಎಲ್.ಎಚ್ ಮಂಜುನಾಥ,ಬಿ.ಜಯರಾಮ ನೆಲ್ಲಿತ್ತಾಯ ಇವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ದೇವಾಡಿಗ ಅಕ್ಷಯ ಕಿರಣ : ಹೇಮ್ಮಾಡಿ ಅಟಬೇಲ್ಟುರು ಆಕಾಶ ದೇವಾಡಿಗ ಮತ್ತು ಕುಂದಾಪುರ ದ ಸಿಂಚನ ದೇವಾಡಿಗರಿಗೇ ವೈದ್ಯಕೀಯ ನೇರವು ನೀಡಿದರು.

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಆದ ಶ್ರೀ ಜಗದೀಶ ದೇವಾಡಿಗ ಮುಳ್ಳಿಕಟ್ಟೇಯವರ ಮನವಿಯ ಮೇರೇಗೇ ಇಸ್ರೇಲಿನ ಸಿ ಎಮ್ ಆರ್ ಮಿತ್ರ ಬಳಗದವರು ಇಂದು ಕಣ್ಣಿನ ಶಸ್ತ್ರ ಚಿಕಿತ್ಸೇ ಗಾಗಿ ಹೇಮ್ಮಾಡಿ ಅಟಬೇಲ್ಟುರು ಆಕಾಶ ದೇವಾಡಿಗರಿಗೇ ರೂ 15,000/ ಮತ್ತು ಕುಂದಾಪುರ ದ ಸಿಂಚನ ದೇವಾಡಿಗರಿಗೇ ರೂ 15,000/ (ಹ್ರದಯ ಸಂಬOದಿ ಶಸ್ತ್ರ ಚಿಕಿತ್ಸೇ ) ಇಂದು ಅವರ ಮನೇಗೇ ತೇರಳಿ ವೈದ್ಯಕೀಯ ನೇರವು ನೀಡಿದರು.

ಶ್ರೀಮತಿ। ಮಲ್ಲಿಕಾ: ಅತ್ಯುತ್ತಮ ಎನ್ಎಸ್ಎಸ್ ಅಧಿಕಾರಿ ಪ್ರಶಸ್ತಿ.

ಶ್ರೀಮತಿ। ಮಲ್ಲಿಕಾ ಇವರು ಶ್ರೀ ಪೂರ್ಣ ಪ್ರಜನಾ ಈವ್ನಿಂಗ್ ಕಾಲೇಜ್ ಉಡುಪಿ। ಯುನಿವರ್ಸಿಟಿಯವರು ಅತ್ಯುತ್ತಮ ಎನ್ಎಸ್ಎಸ್ ಅಧಿಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ। ಅವರು ಶ್ರೀ ಸುಂದರಾ ಶೇರಿಗರ ಮತ್ತು ಕಡಿಯಾಳಿ ಶ್ರೀಮತಿ ಸುನಂದಾ ಅವರ ಮಗಳು ಮತ್ತು ಶ್ರೀ ಚರಣ್ ಕುಮಾರ್ ಎ ಅಲೆವೂರ್ ಅವರ ಬಾಳಸಂಗಾತಿ ।

Top