ದೇವಾಡಿಗ ಸಂಘ ಮುಂಬೈ: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಮತ್ತು ವಿದ್ಯಾರ್ಥಿ ವೇತನ

0
112

ದೇವಾಡಿಗ ಸಮಾಜದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, 2025ಕ್ಕೆ 100ನೇ ವರುಷದ ಶತಮಾನೋತ್ಸವ ಪೂರ್ವಭಾವಿಯಾಗಿ, UPSC/MPSC/KAS ಅಂತ ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ದೇವಾಡಿಗ ಸಮಾಜದ ಯುವ ಜನರು ಮುಂದೆ ಬರಬೇಕು ಎನ್ನುವ ನಿಟ್ಟಿನಲ್ಲಿ ದೇವಾಡಿಗ ಸಂಘ ಮುಂಬೈ, ಒಂದು ಮಹತ್ವದ ಹೆಜ್ಜೆ ಇಟ್ಟಿದೆ,ದೇವಾಡಿಗ ಸಂಘ ಮುಂಬೈ ವತಿಯಿಂದ: ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಮತ್ತು ವಿದ್ಯಾರ್ಥಿ ವೇತನ

ದೇವಾಡಿಗ ಸಂಘ ಮುಂಬೈ 2025ರಲ್ಲಿ ಶತಮಾನೋತ್ಸವ ಆಚರಿಸುವ ಪೂರ್ವಭಾವಿ ಸಿದ್ಧತೆ ಗಳು ನಡೆಯುತ್ತಿದ್ದು, ಅಧ್ಯಯನ ಮತ್ತು ಸಂಶೋಧನಾ ವೇದಿಕೆಯನ್ನು ಪ್ರಾಯೋಜಿಸಿದೆ. ಈ ವೇದಿಕೆಯಲ್ಲಿ ದೇವಾಡಿಗ ಸಮಾಜದ ಸರ್ವ ಸಂಘ ಸಂಸ್ಥೆಗಳ, ಧಾರ್ಮಿಕ, ಸಾಂಸ್ಕೃತಿಕ ಸಂಸ್ಥೆಗಳ ಹಾಗೂ ಸಮಾಜದಲ್ಲಿನ ಮಹಾದಾನಿಗಳ ಸಂಯೋಜನೆಯಲ್ಲಿ ರಾಷ್ಟ್ರ ಮಟ್ಟದಲ್ಲಿ, ಸಮಾಜದ ವಿದ್ಯಾರ್ಥಿಗಳನ್ನು UPSC/MPSC/KAS ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಲ್ಲಿ ಹುರಿದುಂಬಿಸಲಾಗುವುದು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯವನ್ನೂ ನೀಡಲಾಗುವುದು .

ಆಸಕ್ತ ಪ್ರತಿಭಾವಂತ ಪದವೀಧರ ವಿದ್ಯಾರ್ಥಿಗಳು (ವಯಸ್ಸು 30ಕ್ಕೆ ಮೀರಿರಬಾರದು)ತಮ್ಮ ಹೆಸರು ,ಹೆತ್ತವರ ಹೆಸರು ,ವಿಳಾಸ, ಮತ್ತು ಮೊಬೈಲ್ ನಂಬ್ರ ದೊಂದಿಗೆ 10th,PUC/HSC ಮತ್ತು ಡಿಗ್ರಿ ಕೋರ್ಸಿನಲ್ಲಿ ಪಡೆದಂತಹ ಅಂಕಗಳ ವಿವರಗಳನ್ನು ದೇವಾಡಿಗ ಸಂಘ ಮುಂಬೈಯ ಇಮೇಲ್ devadigasanghamumbai@gmail.com ಗೆ ದಿನಾಂಕ 31 ಆಗಸ್ಟ್ 2021ರ ಒಳಗಾಗಿ ಕಳುಹಿಸಬೇಕು .

ಸ್ಥಳೀಯ ದೇವಾಡಿಗ ಸಂಘಟನೆಗಳೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ. ವಿವರಗಳನ್ನು ಸಂಗ್ರಹಿಸಿ ದೇವಾಡಿಗ ಸಂಘ ಮುಂಬೈಗೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ. ಅವರಲ್ಲದೆ, ಹತ್ತನೇ ತರಗತಿಯಲ್ಲಿ ಮತ್ತು ಪಿಯುಸಿ/ಎಚ್ ಎಸ್ಸ್ಸಿ ಪರೀಕ್ಷೆಗಳ ಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ , ಆಸಕ್ತ ವಿದ್ಯಾರ್ಥಿಗಳಿಗೂ ಪೂರ್ವಭಾವಿ ತಯಾರಿಗಾಗಿ ಪ್ರೋತ್ಸಾ ಹ ನೀಡಲಾಗು ವುದು. ಅಂತಹ ವಿದ್ಯಾರ್ಥಿಗಳ ವಿವರಗಳನ್ನೂ ಕಳುಹಿಸಬೇಕಾಗಿ ವಿನಂತಿ.

ಈ ಅಭಿಯಾನದಲ್ಲಿ ಸಮಾಜದ ಸಂಘಟನೆಗಳು ಮತ್ತು ಸಮಾಜ ಭಾಂಧವರು ಸಕ್ರೀಯರಾಗಿ ಭಾಗವಹಿಸಿ ಸದೃಢ ಮತ್ತು ಪ್ರಬಲ ಶಿಕ್ಷಿತರಾಗಿ ದೇಶದ ಪ್ರಗತಿಯಲ್ಲಿ ಪಾಲುದಾರರಾಗುವಂತೆ ದೇವಾಡಿಗ ಸಂಘ ಮುಂಬೈಯ ಪ್ರಕಟಣೆ ತಿಳಿಸಿದೆ.

For Devadiga Community info update please Open www.facebook.com/groups/devadigaidol

LEAVE A REPLY

Please enter your comment!
Please enter your name here