You are here
Home > Devadiga Portal

ಗೌರವ್ ದೇವಾಡಿಗ ಹೆಬ್ರಿ. ಕರ್ನಾಟಕ ರಾಜ್ಯ ವಾಲಿಬಾಲ್ ತಂಡದಲ್ಲಿ ಆಯ್ಕೆ.

ಗೌರವ್ ದೇವಾಡಿಗ ಹೆಬ್ರಿ. ಕರ್ನಾಟಕ ರಾಜ್ಯವಾಲಿಬಾಲ್ ತಂಡದಲ್ಲಿ ಆಯ್ಕೆ  (17 ನೇ ವಯಸ್ಸಿನಲ್ಲಿ)ಮತ್ತು ಅವರ ಇತರ ಸಾಧನೆಗಳು ಹೀಗಿವೆ.2016-2017 ಜಿಲ್ಲೆಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದರು ಮತ್ತು ವಲಯ ಮಟ್ಟಕ್ಕೆ ಆಯ್ಕೆಯಾದರು 2017-2018 ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದರು ಮತ್ತು ವಲಯ ಮಟ್ಟಕ್ಕೆ ಕ್ಯಾಪ್ಟನ್ ಆಗಿ ಆಯ್ಕೆಯಾದರು ಜಿಲ್ಲಾ ಮಟ್ಟ ಮತ್ತು ವಲಯ ಮಟ್ಟದಲ್ಲಿ 2018-2019 ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿತು .. ಆಂಧ್ರಪ್ರದೇಶದಲ್ಲಿ ರಾಷ್ಟ್ರೀಯ

ಸಭಾಭವನಕ್ಕೆ ಕಾದಿರಿಸಿದ ಸ್ಥ ಳ ಕ್ಕೆ ಮುಂಬಯಿ ಉದ್ಯಮಿ ನಾಗರಾಜ್ ಡಿ ಪಡುಕೋಣೆ ಭೇಟಿ.

ದೇವಾಡಿಗರ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇವರ ಸಭಾಭವನಕ್ಕೆ ಕಾದಿರಿಸಿದ ಸ್ಥ ಳ ಕ್ಕೆ ಮುಂಬಯಿ ಉದ್ಯಮಿ ನಾಗರಾಜ್ ಡಿ ಪಡುಕೋಣೆ ಇಂದು ಭೇಟಿ ನೀಡಿ ಸಭಾ ಭವನ ನಿರ್ಮಾಣ ದ ಬಗ್ಗೆ ಸದಸ್ಯ ರಲ್ಲಿ ಚರ್ಚಿಸಿದರು ಈ ಸಂದರ್ಭದಲ್ಲಿ ಅವರನ್ನು ಸಂಘ ದ ಅಧ್ಯಕ್ಷ ರಾದ ನಾಗರಾಜ್ ರಾಯಪ್ಪನ ಮಠ ಆತ್ಮೀಯ ವಾಗಿ ಬರಮಾಡಿಕೊಂಡರು

ಬೈಂದೂರಿನ ವಿನುತಾ ಎಮ್ ದೇವಾಡಿಗ ಸತತ ಮೂರನೇ ಬಾರಿ ಚದುರಂಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಮಧುಗಿರಿಯಲ್ಲಿ ನಡೆದ ರಾಜ್ಯಮಟ್ಟದ ಚೆಸ್ ನಲ್ಲಿ(CHESS) ಪ್ರೌಢಶಾಲಾ ಮಟ್ಟದ ಬಾಲಕಿಯರ ವಿಭಾಗದಲ್ಲಿ  ಯಡ್ತರೆಯ ವಿನುತಾ ಎಂ.ದೇವಾಡಿಗ ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ, ಡಿಸೆಂಬರ್ ನಲ್ಲಿ ಸಿಕ್ಕಿಂನಲ್ಲಿ ನಡೆಯುವ ಚದುರಂಗ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾಳೆ. ಇವಳು ಬೈಂದೂರಿನ ಮಂಗಳಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕರಾದ ಸುಬಾಸ್ ದೇವಾಡಿಗ  ಹಾಗೂ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಪ್  ಇಂಡಿಯಾ ಪ್ರಬಂಧಕರಾದ ಚಂದ್ರಶೇಖರ್ ದೇವಾಡಿಗರ ಸೊಸೆಯಾದ ಇವಳು

ವೈದ್ಯಕೀಯ ಚಿಕಿತ್ಸಾ ಆಕಾಶ್ ದೇವಾಡಿಗ ಹಾಗೂ ನರಸಿಂಹ ದೇವಾಡಿಗ

ಕಟ್ ಬೆಲ್ತುರು ಗ್ರಾಮದ ಆಕಾಶ್ ದೇವಾಡಿಗ ಹಾಗೂ ಸೇನಾಪುರ ಗ್ರಾಮದ ನರಸಿಂಹ ದೇವಾಡಿಗ ಇವರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಉದ್ಯಮಯಾದ ನಾಗರಾಜ ಡಿ ಪಡುಕೋಣೆ ಇವರ lg ಪೌಂಡೇಶನ್ ಟ್ರಸ್ಟ್ ವತಿಯಿಂದ 10000 ರೂ ಹಸ್ತಾಂತರಿಸಿದರು.

ರಾಧಾ ಅವೆನ್ಯೂ ಹಿಂದ್ ಪ್ಯಾಕ್ ಉದ್ಘಾಟನಾ ಸಮಾರಂಭ

ರಾಧಾ ಅವೆನ್ಯೂ ಹಿಂದ್ ಪ್ಯಾಕ್ ಬೆಂಗಳೂರು ಇದರ ಉದ್ಘಾಟನಾ ಸಮಾರಂಭ ದಿನಾಂಕ 03/11/2018 ಶನಿವಾರ ನೆಡೆಯಿತು. ಪರಮ ಪೂಜ್ಯ ಜಗದ್ಗುರು ಶ್ರೀ ಗುರು ವಿಶ್ವೇಶತೀರ್ಥ ಶ್ರೀ ಪಾದರು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ರೋ ಸುರೇಶ್ ಹರಿ ಎಸ್ ಜಿಲ್ಲಾ ಪಾಲಕರು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ3190 ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಎಂ ವೀರಪ್ಪ ಮೊಯ್ಲಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ರೋಟರಿ ಬೆಂಗಳೂರು ನಾಗರಭಾವಿ ಅಧ್ಯಕ್ಷ, ರೋ. ಎನ್ ರಮೇಶ ದೇವಾಡಿಗ.

ದೇವಾಡಿಗ ನವೋದಯ ಸಂಘ : ಒಂದು ದಿವಸದ ಪಿಕ್ನಿಕ್.

ದೇವಾಡಿಗ ಸಮಾಜವನ್ನು ಬೆಂಗಳೂರು ಅಲ್ಲಿ ಸಂಘಟಿಸುವ ದೃಷ್ಟಿಯಿಂದ,ದೇವಾಡಿಗ ನವೋದಯ ಸಂಘ ಅವರ ಒಂದು ದಿವಸದ ಪಿಕ್ನಿಕ್ ಬೆಂಗಳೂರಿನ ಹೊರವಲಯದ ರಾಮನಗರದ ಶಿಲಾಂದ್ರ ರೆಸಾರ್ಟ್ ಅಲ್ಲಿ ನಡೆಯಿತು, ಬೆಂಗಳೂರಿನ ವಿವಿಧ ಪ್ರದೇಶಗಳಿಂದ ದೇವಾಡಿಗ ಸಮಾಜ ಭಾಂದವರು ಪಿಕ್ನಿಕ್ ಅಲ್ಲಿ ಪಾಲುಗೊಂಡರು. ಬೆಂಗಳೂರು ಅಲ್ಲಿ ದೇವಾಡಿಗ ನವೋದಯ ಸಂಘ ಸೇರಲು ಇರುವ ಆಸಕ್ತ ದೇವಾಡಿಗರು ಶ್ರೀ ಚರಣ್ ಬೈಂದೂರ್ -9964605360 ಶ್ರೀ ಸುಧೀರ್ ಮುದ್ರಾಡಿ -9886640428 ಶ್ರೀ ವಿಜಯ್ ದೇವಾಡಿಗ ಕಾಪಿಕಾಡ್ -9108162914

ದೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿ ವತಿಯಿಂದ ದೇವಾಡಿಗ ಫುಟ್ಬಾಲ್ ಲೀಗ್ 2018.

ಫುಟ್ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇವಾಡಿಗ ಸಂಘ ಮುಂಬೈ ಹಾಗೂ ದೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿ ವತಿಯಿಂದ ದೇವಾಡಿಗ ಫುಟ್ಬಾಲ್ ಲೀಗ್ 2018 ,ದೊಂಬಿವಿಲಿ ಪೂರ್ವ ವಲಯದ ಪಲವ ಪೂಟ್ಬಾಲ್ ಗ್ರೌಂಡ್ ಅಲ್ಲಿ ಸೆಪ್ಟೆಂಬರ್ 2 ರಂದುಅಯೋಜಿಸಲಾಯಿತು,, ಮೀರಾ ರೋಡ್ ಪ್ರಾದೇಶಿಕ ಸಮನ್ವಯ ಸಮಿತಿಯ ತಂಡ, ಟೀಮ್ ಮೀರಾ ರೋಡ್ ಚಾಂಪಿಯನ್ ಹಾಗೂ ಅಸಲ್ಫಾದ ಅನುಧ್ಯ ತಂಡ ರನ್ನರ್ ಅಪ್ ಆಗಿ ಮೂಡಿ ಬಂತು , ಒಟ್ಟು ಹತ್ತು ತಂಡಗಳು

ಬಾಲ ಕಲಾವಿದ ಶ್ರೀ ಪವನ್ ಕುಮಾರ್ : ಯಕ್ಷಗಾನ ಕ್ಷೇತ್ರದ ಸಾಧನೆ.

ಯಕ್ಷಗಾನ ಕ್ಷೇತ್ರದ ಸಾಧನೆಗೆ ಹಾಗೂ ಪ್ರತಿಭೆಗೆ ಬಾಲ ಕಲಾವಿದ ಶ್ರೀ ಪವನ್ ಕುಮಾರ್ ಅವರಿಗೆ ಶ್ರೀ ಯಕ್ಷನಿಧಿ ಮೂಡಬಿದ್ರಿ ಆವರಿಂದ ಪ್ರತಿಭಾ ಪುರಸ್ಕಾರ,ಇವರು ಮೂಡಬಿದ್ರಿ ಕಾಶಿಪಟ್ಣ ಶ್ರೀ ಪುರಂದರ ದೇವಾಡಿಗ ಹಾಗೂ ರೇವತಿ ದೇವಾಡಿಗ ಅವರ ಪುತ್ರ

ದೇವಾಡಿಗ ಸಂಘ ಮುಂಬೈ : ದಿನಾಂಕ ೩೦-೦೯-೨೦೧೮ ತುಳು ನಾಟಕ “ಏರೆಗಾವುಯೆ ಕಿರಿ ಕಿರಿ “

ದೇವಾಡಿಗ ಸಂಘ ಮುಂಬೈ ಇದರ ಪ್ರಾದೇಶಿಕ ಸಮಿತಿ ವತಿಯಿಂದ ದಿನಾಂಕ ೩೦-೦೯-೨೦೧೮ ರಮೇಶ್ ದೇವಾಡಿಗ ಅವರ ನಿರ್ದೇಶನದಲ್ಲಿ , ತುಳು ನಾಟಕ "ಏರೆಗಾವುಯೆ ಕಿರಿ ಕಿರಿ " ಪ್ರದರ್ಶನ. ಸ್ಥಳ : ದೇವಾಡಿಗ ಭವನ ನೆರೂಲ್ . ಸರ್ವರಿಗೂ ಆದರದ ಸ್ವಾಗತ.  

Top