You are here
Home > Ekanateshwari Temple

ಶ್ರೀ ಏಕನಾಥೇಶ್ವರಿ ದೇವಸ್ಥಾನ ಪ್ರಥಮ ವಾರ್ಷಿಕ ವರ್ದ್ಯುಂತ್ಸವ.

ದಿನಾಂಕ 17/02/2019 ರಿಂದ 19/02/2019 ರವರೆಗೆ ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ನೆಡೆಯುವ ಪ್ರಥಮ ವಾರ್ಷಿಕ ವರ್ದ್ಯುಂತ್ಸವದ ಅಂಗವಾಗಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ ನರಸಿಂಹ ದೇವಾಡಿಗ ಹಾಗೂ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಗಣೇಶ್ ಶೇರಿಗಾರ್ ಅವರು ಉಪ್ಪುಂದಕ್ಕೆ ಆಗಮಿಸಿ ದೇವಾಡಿಗ ಸಮಾಜ ಭಾಂಧವರನ್ನು ಕರೆತರುವಂತೆ ಉಪ್ಪುಂದ ದೇವಾಡಿಗರ ಸಂಘದ ಅಧ್ಯಕ್ಷರಿಗೆ ಆಮಂತ್ರಣ ಪತ್ರಿಕೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಏಕನಾಥೇಶ್ವರೀ ದೇವಾಲಯದಲ್ಲಿ ಸೋಣೆ ಆರತಿ.

ಸೋಣೆ ಆರತಿ ಪ್ರಯುಕ್ತ ಶ್ರೀ ಏಕನಾಥೇಶ್ವರೀ ದೇವಾಲಯದಲ್ಲಿ ನೀಲಾವರ ನಮೃತಾ ದೇವಾಡಿಗ, ವಿಜೇತ ದೇವಾಡಿಗ ಮತ್ತು ರಾಜೇಶ್ ದೇವಾಡಿಗ ಇವರಿಂದ ಸೆಕ್ಸಾಫೋನ್ ವಾದನ ನೆಡೆಯಿತು ಗೋಪಾಲ್ ದೇವಾಡಿಗ ಮೂಕಾಂಬಿಕಾ ಫ್ಲವರ್ ಸ್ಟಾಲ್ ಬ್ರಹ್ಮಾವರ ಇವರು ಸೋಣೆ ಆರತಿ ಸೇವಾದಾರರು.

ಶ್ರೀ ಎಕನಾಥೇಶ್ವರಿ ದೇವಸ್ಥಾನ : ವ್ಯವಸ್ಥಾಪಕ ಸದಸ್ಯರ ಸಭೆ

ಶ್ರೀ ಎಕನಾಥೇಶ್ವರಿ ದೇವಸ್ಥಾನದಲ್ಲಿ ವ್ಯವಸ್ಥಾಪಕ ಸದಸ್ಯರ ಸಭೆಯು ನಡೆಯಿತು ಮತ್ತು ವಿವಿಧ ಪೂಜೆಗಳ ಪ್ರಾಮುಖ್ಯತೆಯ ಕುರಿತು ಅರ್ಚ್ಕರು ವಿವರವಾಗಿ ಸಭೆಗೆ ತಿಳಿಸಿದರು..

ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಸೆಕ್ಸಾಫೋನ್ ವಾದನ.

ಉದಯ ದೇವಾಡಿಗ  ಶಿವಪುರ, ಚಂದ್ರಶೇಖರ್ ದೇವಾಡಿಗ ಮುದ್ರಾಡಿ, ಪ್ರದೀಪ್ ದೇವಾಡಿಗ ಕಾರ್ಕಳ್, ಶಂಕರ್ ದೇವಾಡಿಗ ಶಿವಪುರ, ಅಜಯ್ ದೇವಾಡಿಗ  ಇವರ ಬಳಗ ದಿಂದ ಇಂದು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಸೆಕ್ಸಾಫೋನ್ ವಾದನ ನೆಡೆಯಿತು

Top