You are here
Home > Devadiga Portal > ಬೈಂದೂರು: ವಾಸುದೇವ ಬಿ.ದೇವಾಡಿಗ ರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ

ಬೈಂದೂರು: ವಾಸುದೇವ ಬಿ.ದೇವಾಡಿಗ ರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ

ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ(ರಿ) ಬೆಂಗಳೂರು ಬೆಳಗಾಂ ಹಾಗೂ ಆಲ್ ಇಂಡಿಯಾ ಕಲ್ಚರ್ & ಹೆರಿಟೇಜ್ ಡೆವಲಪ್ ಮೆಂಟ್ ಸೆಂಟರ್ ನ್ಯೂ ಡೆಲ್ಲಿ ಸಹಯೋಗದೊಂದಿಗೆ ಕೊಡಲ್ಪಡುವ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಬೈಂದೂರಿನ ವಾಸುದೇವ ಬಿ.ದೇವಾಡಿಗ  ಆಯ್ಕೆಯಾಗಿದ್ದಾರೆ.

ಇವರು ಮಾತೃಶ್ರೀ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್(ರಿ), ಮಾತೃಶ್ರೀ ಕ್ರೆಡಿಟ್ ಕೋ ಓಪರೇಟಿವ್  ಸೊಸೈಟಿ(ನಿ)ಹಾಗೂ ಮಾತೃಶ್ರೀ ಶೈಕ್ಷಣಿಕ/ ಸಾಮಾಜಿಕ ಸೇವಾ ಸಂಸ್ಥೆ ಬೈಂದೂರು/ಕುಂದಾಪುರ ಇದರ ಸ್ಥಾಪಕರಾಗಿದ್ದಾರೆ. ಈ ಮೂಲಕ ಸಾಮಾಜಿಕ/ ಶೈಕ್ಷಣಿಕ/ಧಾರ್ಮಿಕ ಕ್ಷೇತ್ರದಲ್ಲಿ ಇವರ ಸೇವೆಯು ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲ ನೆರೆಯ ಜಿಲ್ಲೆಯಾದ ಬೆಳಗಾಂ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲೂ ಇವರ ಕಾರ್ಯ ಸೇವೆ ನಿರಂತರವಾಗಿದೆ.

ಪ್ರಶಸ್ತಿ ಪ್ರಧಾನ ಸಮಾರಂಭ ಸೋಮವಾರ ಜುಲೈ 30 2018 ರಂದು ನಯನ ರಂಗಮಂದಿರ ಕನ್ನಡಭವನ ರವೀಂದ್ರ ಕಲಾಕ್ಷೇತ್ರ ಎಡಬದಿಗೆ ಕೆ ಜಿ ರಸ್ತೆ ಬೆಂಗಳೂರು ಇಲ್ಲಿ ನೆಡೆಯಲಿರುವುದು.

Leave a Reply

Top