ಪ್ಯಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಆಗಿರುವುದನ್ನು ಪರಿಶಿಲಿಸುವುದು ಹೇಗೆ?

ಪ್ಯಾನ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಅವಧಿ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದೆ. 31 ರ ಡಿಸೆಂಬರ್ 2017 ರಂದು ಕೊನೆಗೊಳ್ಳಬೇಕಿದ್ದ ಅವಧಿ ಮುಂದೂಡಿಸಿ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಅಂತಿಮ ನೀತಿಯನ್ನು ನಿರ್ಧರಿಸುವ ನೇರ ತೆರಿಗೆಯ ಕೇಂದ್ರಿಯ ಮಂಡಳಿ (CBDT) ಇಲಾಖೆಯು, ಈ ಹಿಂದೆಯೇ ಕೆಲವು ಆಧಾರ್ ಗೆ ಪ್ಯಾನ್ ಲಿಂಕ್ ಮಾಡದ ತೆರಿಗೆದಾರರನ್ನು ಗುರುತಿಸಿತ್ತು. ಆದರಿಂದ ತೆರಿಗೆದಾರರಿಗೆ ಇದರ ಲಾಭವನ್ನು ಮುಟ್ಟಿಸಲು ತೆರಿಗೆ ಇಲಾಖೆ ಕೆಲ ಲಾಭಗಳನ್ನು ಮುಂದಿಡುತ್ತಿದೆ. ಅದೇನೆಂದರೆ, ಪ್ಯಾನ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡಿಸಿದ್ದಲ್ಲಿ, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಅತ್ಯಂತ ವೇಗವಾಗಿ ಮತ್ತು ಸರಳವಾಗಿ ಫೈಲ್ ಮಾಡಬಹುದಾಗಿದೆ ಮತ್ತು ನಿಮ್ಮ ಕೆಲಸವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ಮೂಲಕ ಹಂಚಿಕೊಂಡಿದೆ. 2029 ರವರೆಗೆ ಮೋದಿ ಆಳ್ವಿಕೆ ನಡೆಸುತ್ತಾರೆ! ವಿಶ್ವದ ಯಾವ ನಾಯಕ ಹೆಚ್ಚು ವರ್ಷ ಉಳಿಯುತ್ತಾರೆ?

ಪ್ಯಾನ್ ಲಿಂಕ್ ಮಾಡಿರುವುದು ಸರಿಯಾಗಿದೆಯೇ? ಈಗಾಗಲೇ, ನೀವು ಪ್ಯಾನ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡಲು ಮುಂದಾಗಿರುತ್ತೀರಿ. ಆದರೆ, ನೀವು ಲಿಂಕ್ ಮಾಡಿರುವುದು ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಂಡಿದ್ದೀರಾ? ಈ ಬಗ್ಗೆ ನಿಮ್ಮಲ್ಲಿ ಗೊಂದಲವಿದ್ದಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಜೋಡಣೆಯನ್ನು ಪರಿಶೀಲಿಸುವುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಆನ್ಲೈನ್ ಮೂಲಕ ಆದಾಯ ತೆರಿಗೆ ಫೈಲಿಂಗ್ ವೆಬ್ಸೈಟ್ – incometaxindiafiling.gov.in ಈ ಮೇಲೆ ತಿಳಿಸಿರುವ ಆದಾಯ ತೆರಿಗೆ ವೆಬ್ಸೈಟ್ ಗೆ ತೆರಳಿ, ‘Link Aadhaar’ ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಪರದೆಯ ಮೇಲೆ ಒಂದು Form ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಮೂದಿಸಬೇಕಾದ ಎಲ್ಲಾ ಮಾಹಿತಿಗಳ ಜೊತೆಗೆ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಸರಿಯಾಗಿ ತುಂಬಿಸಿ, ‘Link Aadhaar’ ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮಗೆ ಕಾಣುವ ಪರದೆಯ ಮೇಲೆ ಪಾನ್ ಸಂಖ್ಯೆಯನ್ನು ಆದಾಯ ತೆರಿಗೆ ಫೈಲಿಂಗ್ ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳುವವರಿಗೆ ಒಂದು ಸಂದೇಶ ಕಾಣಿಸಿಕೊಳ್ಳುತ್ತದೆ. ಅದರಲ್ಲಿ, ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರುವ ಬಗ್ಗೆ ಮಾಹಿತಿ ಇರುತ್ತದೆ. ಇದರ ಪ್ರಕಾರ ಲಿಂಕ್ ಆಗಿದೆ ಎಂದಾದರೆ, ಆದಾಯ ತೆರಿಗೆ ಫೈಲಿಂಗ್ ಸೈಟ್ ನಲ್ಲಿ ಲಾಗಿನ್ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ, ನಿಮ್ಮ User ID ಮತ್ತು Password ಗಳನ್ನು ಬಳಸಿ ಲಾಗಿನ್ ಮಾಡಿಕೊಳ್ಳಿ. ನಂತರ ‘Profile Setting’ ಎಂಬಲ್ಲಿ ಕ್ಲಿಕ್ ಮಾಡಿ, ಅದರಲ್ಲಿ ‘Link Aadhaar’ ಎಂಬಲ್ಲಿ ಪುನಃ ಕ್ಲಿಕ್ ಮಾಡಿ. ಈಗ ಪಾನ್ ಮತ್ತು ಆಧಾರ್ ಯಶಸ್ವಿಯಾಗಿರುವ ಬಗ್ಗೆ ಒಂದು ಸಂದೇಶವು ನಿಮ್ಮ ಪರದೆಯ ಮೇಲೆ ಬರುತ್ತದೆ.

ತೆರಿಗೆ ಇಲಾಖೆಯ ಎಸ್ಎಂಎಸ್ ಸೌಲಭ್ಯದ ಮೂಲಕ ನಿಮ್ಮ ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆಯು ತಮ್ಮ ಎಸ್ಎಂಎಸ್ ಸೌಲಭ್ಯದ ಮೂಲಕ ಅವಕಾಶ ನೀಡುತ್ತಿದೆ. ಅದಕ್ಕಾಗಿ ಬಳಕೆದಾರರು ಈ ಕೆಳಗೆ ತಿಳಿಸಿರುವ ಮಾದರಿಯ ಪ್ರಕಾರ 567678 ಅಥವಾ 56161 ಕ್ಕೆ ಎಸ್ಎಂಎಸ್ ಕಳುಹಿಸಬೇಕಾಗುತ್ತದೆ. UIDPAN <12 digit Aadhaar no> <10 digit PAN no> ಉದಾಹರಣೆಗೆ: UIDPAN 111122223333 AAAPA9999Q ಈ ಮಾದರಿಯಲ್ಲಿ ಎಸ್ಎಂಎಸ್ ಕಳುಹಿಸಿ ಲಿಂಕ್ ಮಾಡಿಕೊಳ್ಳಬಹುದು. ಇದು ಯಶಸ್ವಿಯಾದ ತಕ್ಷಣ “ನಿಮ್ಮ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಆದಾಯ ತೆರಿಗೆಯ ಮಾಹಿತಿ ಪ್ರಕಾರ ಸಂಬಂಧಿಸಲಾಗಿದೆ. ನಮ್ಮ ಸೇವೆಯನ್ನು ಬಳಸಿದ್ದಕ್ಕೆ ಧನ್ಯವಾದಗಳು” ಎಂಬ ಸಂದೇಶ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ. ಇಲ್ಲಿ ನಿಮ್ಮ ಪ್ರಕ್ರಿಯೆಗಳು ಯಶಸ್ವಿಯಾಗಿ ಮುಗಿದಿರುತ್ತದೆ.

ಕೊನೆ ಮಾತು ಒಂದು ವೇಳೆ, ನಿಮ್ಮ ಪ್ಯಾನ್ ಸಂಖ್ಯೆಯು ಆಧಾರ್ ಲಿಂಕ್ ಆಗಿದೆ ಎಂದಾದರೆ, ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಆಧಾರ್ OTP ಯನ್ನು ಬಳಸಿ ಆನ್ಲೈನ್ ಮೂಲಕ ಸಲ್ಲಿಸಬಹುದು. ಹಾಗೆಯೇ ಆಧಾರ್ ನಲ್ಲಿರುವ ನಿಮ್ಮ ಡಿಜಿಟಲ್ ಸಹಿಯನ್ನು ಬಳಸಿ ಕ್ಷಣಾರ್ಧದಲ್ಲಿ ಈ ಪ್ರಕ್ರಿಯೆಯನ್ನು ಮುಗಿಸಬಹುದು ಎಂದು ಆಧಾರ್ ನಿಯಂತ್ರಿಸುವ ಪ್ರಾಧಿಕಾರ UIDAI ವಿವರಿಸಿದೆ. ಹೀಗೆ ಆನ್ಲೈನ್ ಮೂಲಕ ಸಲ್ಲಿಸುವ ಬಳಕೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಮೇಲ್ (mail) ಮೂಲಕ ಕಳುಹಿಸುವ ಅಗತ್ಯವಿಲ್ಲ. ಹಾಗಾಗಿ ಆಧಾರ್ ಮತ್ತು ಪ್ಯಾನ್ ಖಾತೆಯನ್ನು ಲಿಂಕ್ ಮಾಡಿ. ಅದರಿಂದ ಸಿಗುವ ಹಲವು ಪ್ರಯೋಜನವನ್ನು ಸ್ವೀಕರಿಸಿ ಮತ್ತು ನಿಮ್ಮ ಕೆಲಸವನ್ನು ಕಡಿಮೆ ಮಾಡಿಕೊಳ್ಳಿ.

Leave a Reply

Your email address will not be published. Required fields are marked *