ಅರೇಂಜ್ಡ್ ಮ್ಯಾರೇಜ್ ಬಗ್ಗೆ ಕೆಲವು ಸಲಹೆಗಳು.

ಬಾಲ್ಯ, ಯೌವನದ ಬಳಿಕ ಮದುವೆ ಎನ್ನುವ ಬಂಧನಕ್ಕೆ ಒಳಗಾಗುವುದು ಪ್ರತಿಯೊಬ್ಬ ಮನುಷ್ಯನ ಧರ್ಮ. ಇದರಿಂದ ಕೆಲವು ಮಂದಿ ನುಣುಚಿಕೊಳ್ಳಬಹುದು. ಆದರೆ ಈ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡು ಜೀವನ ಸಾಗಿಸುವುದು ಅತೀ ಮುಖ್ಯ. ಹಿಂದಿನ ಕಾಲದಿಂದಲೂ ಪ್ರೇಮ ವಿವಾಹ ಮತ್ತು ಗುರುಹಿರಿಯರಿದ್ದು ನಿಶ್ಚಿಯಿಸಿದ ಮದುವೆ ಎನ್ನುವುದು ಇತ್ತು. ಪ್ರೇಮ ವಿವಾಹವಾದರೆ ಅದು ಕೇವಲ ಇಬ್ಬರ ನಿರ್ಧಾರ ವಾಗುವುದು. ಆದರೆ ಅರೇಂಜ್ಡ್ ಮ್ಯಾರೇಜ್(ನಿಶ್ಚಯಿಸಿದ ಮದುವೆ) ಎನ್ನುವುದು ಹಾಗಲ್ಲ. ಇದರಲ್ಲಿ ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆ ಸೂಚಿಸಿ, ಮದುವೆಯಾಗುವುದು. ಅದರಲ್ಲೂ ಮದುವೆ ಎನ್ನುವುದು ವ್ಯಕ್ತಿಯೊಬ್ಬನ ಜೀವನದಲ್ಲಿ ತುಂಬಾ ಮಹತ್ವದ ನಿರ್ಧಾರವಾಗಿದೆ. ಇದಕ್ಕೆ ನಿಮಗೆ ಹಲವಾರು ಸಲಹೆಗಳು ಕೂಡ ನೀಡಲಾಗುತ್ತದೆ. ಈ ಲೇಖನದಲ್ಲಿ ಅರೇಂಜ್ಡ್ ಮ್ಯಾರೇಜ್ ಯಶಸ್ವಿಯಾಗಿ, ಸಂತೋಷವಾಗಿರಲು ನಿಮಗೆ ಕೆಲವು ಸಲಹೆಗಳನ್ನು ನೀಡಲಾಗುವುದು.

*ಮದುವೆ ಎಂದರೇನು? ಮದುವೆ ಎನ್ನುವುದು ಸಂಬಂಧವನ್ನು ಸಾರ್ವಜನಿಕ, ಕಾನೂನುಬದ್ಧ ಮತ್ತು ಶಾಶ್ವತವಾಗಿಸುವುದು. ಮದುವೆಯಲ್ಲಿ ಶ್ವಾಶತ ಎನ್ನುವುದು ಯಾವುದು ಇಲ್ಲ. ಆದರೆ ಸಾರ್ವಜನಿಕ ಮತ್ತು ಕಾನೂನುಬದ್ಧವೆನ್ನುವುದು ಇದೆ. ಮದುವೆ ಅನ್ನುವುದು ಎರಡು ಕುಟುಂಬಗಳು, ಅದೇ ರೀತಿ ಎರಡು ವ್ಯಕ್ತಿಗಳು ಒಂದಾಗುವುದು.

*ಮದುವೆಯ ವಿಧಗಳು ಮದುವೆಯಲ್ಲಿ ಎರಡು ವಿಧಗಳಿವೆ. ಒಂದು ಸಿವಿಲ್(ನಾಗರಿಕ) ಮದುವೆ ಮತ್ತು ಮತ್ತೊಂದು ಧಾರ್ಮಿಕ ಮದುವೆ. ಇತರ ವಿಧಗಳೆಂದರೆ ಪ್ರೇಮ ವಿವಾಹ, ಅರೇಂಜ್ಡ್ ಮ್ಯಾರೇಜ್ ಮತ್ತು ಪ್ರೀತಿಸಿ, ಅರೇಂಜ್ಡ್ ಮದುವೆಯಾಗುವುದು. *ಅರೇಂಜ್ಡ್ ಮದುವೆ ಎಂದರೇನು? ಅರೇಂಜ್ಡ್ ಮದುವೆಯಲ್ಲಿ ವಧು ಅಥವಾ ವರನನ್ನು ಕುಟುಂಬ ಸದಸ್ಯರು ನಿರ್ಧಾರ ಮಾಡುವರು. ಎರಡು ಕುಟುಂಬಗಳ ಸದಸ್ಯರು ಇದನ್ನು ನಿರ್ಧಾರ ಮಾಡುವರು ಮತ್ತು ಮದುವೆಗೆ ದಿನಾಂಕ ನಿಗದಿ ಮಾಡುವರು. ಪರಸ್ಪರರನ್ನು ಮದುವೆಯಾಗುವುದನ್ನು ಹೊರತುಪಡಿಸಿ, ಇಲ್ಲಿ ವರ ಅಥವಾ ವಧುವಿಗೆ ಯಾವುದೇ ಪಾತ್ರವಿರುವುದಿಲ್ಲ. *ಮದುವೆ ಸಲಹೆಗಳು: ಅರೇಂಜ್ಡ್ ಮದುವೆ ವೇಳೆ ಪಾಲಿಸಬೇಕಾದ ಸಲಹೆಗಳು ಪ್ರಾಮಾಣಿಕವಾಗಿ ಹೇಳುವುದಾದರೆ ಅರೇಂಜ್ಡ್ ಮ್ಯಾರೇಜ್ ಎನ್ನುವುದು ಬೇಸರ ಮೂಡಿಸುವುದಿಲ್ಲ. ಇದನ್ನು ನೀವು ಮತ್ತು ನಿಮ್ಮ ಸಂಗಾತಿಯು ಹೇಗೆ ಬಯಸುತ್ತೀರಿ ಎನ್ನುವುದರ ಮೇಲೆ ಇದು ತುಂಬಾ ಆಸಕ್ತಿದಾಯಕವಾಗಿರುವುದು. ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಾಗ ಕೆಲವು ಸಲಹೆಗಳು ನಿಮಗೆ ತುಂಬಾ ಉಪಯೋಗಕ್ಕೆ ಬರಬಹುದು. ಅರೇಂಜ್ಡ್ ಮ್ಯಾರೇಜ್ ತುಂಬಾ ಖುಷಿ ನೀಡುವುದು. ಈ ಸಲಹೆಗಳು ನಿಮ್ಮ ಅರೇಂಜ್ಡ್ ಮ್ಯಾರೇಜ್ ನ್ನು ಖಂಡಿತವಾಗಿಯೂ ಉತ್ತಮಪಡಿಸುವುದು.

1. ಸಂಗಾತಿಯ ಬದಲಾಯಿಸಲು ಯಾವತ್ತೂ ಪ್ರಯತ್ನಿಸಬೇಡಿ ನಿಮ್ಮ ಸಂಗಾತಿಯನ್ನು ಬದಿಗೆ ಸರಿಸಬೇಡಿ, ಅವರೊಂದಿಗೆ ಹೊಂದಿಕೊಳ್ಳಿ. ವೈವಾಹಿಕ ಜೀವನದ ದೃಷ್ಟಿಯಿಂದಾದರೂ ನಿಮ್ಮ ಸಂಗಾತಿಯ ಬದಲಾಯಿಸಬೇಕೆಂಬ ಒತ್ತಡಕ್ಕೆ ಬೀಳಬೇಡಿ. ಪ್ರಾಮಾಣಿಕವಾಗಿ ಹೇಳುವುದಾದರೆ ನಿಮಗೆ ಇದರಿಂದ ಏನು ಒಳ್ಳೆಯದು ಆಗಲ್ಲ ಮತ್ತು ಸಮಸ್ಯೆ ಉಂಟಾಗುವುದು. ಮದುವೆಗೆ ಕೆಲವು ಸಮಯ ನೀಡಿ ಮತ್ತು ಸಂತೋಷವಾಗಲು ಜಾಗ ಕೊಡಿ. ಅರೇಂಜ್ಡ್ ಮ್ಯಾರೇಜ್ ನಲ್ಲಿ ಇಬ್ಬರನ್ನು ಅರಿತುಕೊಳ್ಳಲು ಸಮಯ ಬೇಕಾಗುವುದು ಮತ್ತು ಸಮಯ ಸಾಗಿದಂತೆ ನಿಮ್ಮಿಬ್ಬರಲ್ಲಿ ಅನ್ಯೋನ್ಯತೆ ಬೆಳೆಯುವುದು..

2. ಮದುವೆಗೆ ಸ್ವಲ್ಪ ಸಮಯ ಕೊಡಿ ಇಂತಹ ಮದುವೆಗಳಲ್ಲಿ ತಾಳ್ಮೆ ಕಲಿಯುವುದು ತುಂಬಾ ನೆರವಾಗುವುದು. ನೀವಿಬ್ಬರು ಪರಸ್ಪರ ಅರ್ಥಮಾಡಿಕೊಳ್ಳಲು, ನಿಮ್ಮ ಹಾಗೂ ನಿಮ್ಮ ಸಂಗಾತಿಯ ಸಾಮರ್ಥ್ಯ ಅರಿತುಕೊಳ್ಳಲು ಸಮಯ ತೆಗೆದುಕೊಳ್ಳಿ. ಮದುವೆಯಲ್ಲಿ ನಂಬಿಕೆಯನ್ನಿರಿಸಿ ಮತ್ತು ಪ್ರೀತಿ ಹೇಗೆ ಬೆಸೆಯುವುದು ಎಂದು ನೋಡಿ.

3. ಪರಸ್ಪರರಿಗೆ ಕೃತಜ್ಞರಾಗಿರಿ ಅರೇಂಜ್ಡ್ ಮದುವೆಗಳಲ್ಲಿ ನಿಮ್ಮ ಸಂಗಾತಿಗಿ ಕೃತಜ್ಞರಾಗಿರಬೇಕು. ಇದರಿಂದ ನಿಮ್ಮಿಬ್ಬರ ಮಧ್ಯೆ ಅನ್ಯೋನ್ಯತೆ ಹೆಚ್ಚಾಗುವುದು. ಮದುವೆಯ ಆರಂಭದಲ್ಲಿ ನೀವಿಬ್ಬರು ಪರಸ್ಪರರಿಗೆ ತುಂಬಾ ಹೊಸಬರು. ಕೃತಜ್ಞರಾಗಿರುವ ಕಾರಣದಿಂದ ನಿಮ್ಮಿಬ್ಬರ ನಡುವಿನ ಅಂತರವು ಕಡಿಮೆಯಾಗುವುದು. ನಿಮ್ಮ ಸಂಗಾತಿಗೆ ತೋರಿಸುವ ಪ್ರೀತಿ, ಅದೇ ರೀತಿ ಸಂಗಾತಿಯು ತೋರುವ ಪ್ರೀತಿ ಪರಸ್ಪರ ಕೃತಜ್ಞತರಾಗಿರುವುದನ್ನು ತೋರಿಸುವುದು.

4. ಜತೆಯಾಗಿ ತಮಾಷೆಯಲ್ಲಿ ತೊಡಗಿ ನೀವು ಮತ್ತು ಸಂಗಾತಿಯು ಜತೆಯಾಗಿ ಹೆಚ್ಚು ಮಾತನಾಡುವುದರಿಂದ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ತಮಾಷೆಯ ವಿಷಯಗಳನ್ನು ಮಾತನಾಡಿ. ಸಂಗಾತಿ ಜತೆಗೆ ಮಾತನಾಡಲು ಏನಾದರೂ ವಿಷಯವನ್ನು ನೀವು ಆಯ್ಕೆ ಮಾಡಿಕೊಳ್ಳಿ. ಎಲ್ಲಾ ಹಿಂಜರಿಕೆ ಬಿಟ್ಟು, ನೀವು ಸಂಗಾತಿ ಜತೆಗೆ ತುಂಬಾ ತಮಾಷೆ ಹಾಗೂ ತುಂಟಾಟದಲ್ಲಿ ತೊಡಗಿ.

5. ಪ್ರಶಂಸೆ ಮಾಡಲು ಕಲಿಯಿರಿ ನೀವು ಮತ್ತು ನಿಮ್ಮ ಸಂಗಾತಿಯು ಪರಸ್ಪರ ಪ್ರಶಂಸೆ ಮಾಡಲು ಕಲಿಯಿರಿ. ಇದರಿಂದ ನಿಮ್ಮಿಬ್ಬರ ಮಧ್ಯೆ ಹೆಚ್ಚಿನ ಆತ್ಮವಿಶ್ವಾಸ ಬರುವುದು ಮತ್ತು ಸಂಬಂಧದಲ್ಲಿ ಸಂತೋಷ ಕಾಣಿಸಿಕೊಳ್ಳುವುದು. ವೈವಾಹಿಕ ಜೀವನದಲ್ಲಿ ಪ್ರಶಂಸೆಯು ಕಿಡಿ ಹಬ್ಬಿಸುವುದು.

6. ಪರಸ್ಪರ ಗೌರವಿಸಿ ನೀವು ಪರಸ್ಪರರನ್ನು ಗೌರವಿಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು. ನೀವು ಸಂಗಾತಿಗೆ ಗೌರವ ನೀಡದೇ ಇದ್ದರೆ ಆಗ ನಿಮಗೆ ಮದುವೆಯ ಮಹತ್ವ ಗೊತ್ತಾಗಲ್ಲ. ಇಬ್ಬರು ಕೂಡ ಗೌರವದ ನಿರೀಕ್ಷೆಯಲ್ಲಿರುವರು ಮತ್ತು ಪರಸ್ಪರರಿಗೆ ಇದನ್ನು ನೀಡುವುದು ನಿಮ್ಮಿಬ್ಬರ ಜವಾಬ್ದಾರಿಯಾಗಿದೆ. ಸಂಗಾತಿಯನ್ನು ಗೌರವಿಸಿ, ಪ್ರೀತಿಸಲು ಕಲಿಯಿರಿ.

7. ಸಂಗಾತಿಯ ಆತ್ಮದಲ್ಲಿ ಸ್ಥಾನ ಪಡೆಯಿರಿ ನಿಮ್ಮ ಸಂಗಾತಿಯ ದೃಷ್ಟಿಕೋನದಿಂದ ಕೂಡ ಕೆಲವೊಂದು ಸಲ ಚಿಂತಿಸಬೇಕು. ನೀವು ಸಂಗಾತಿಯ ಆತ್ಮದಲ್ಲಿರಬೇಕು ಮತ್ತು ಅದರಂತೆ ಚಿಂತಿಸಬೇಕು. ಇದರಿಂದ ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವುದು ಮತ್ತು ಇದರಿಂದ ನಿಮ್ಮಿಬ್ಬರ ನಡುವಿನ ಸಣ್ಣ ಜಗಳಗಳು ಬಗೆಹರಿಯುವುದು.

8. ಡೇಟಿಂಗ್ ಮುಖ್ಯ ನೀವು ಅಥವಾ ನಿಮ್ಮ ಸಂಗಾತಿಯು ಅರೇಂಜ್ಡ್ ಮ್ಯಾರೇಜ್ ನಲ್ಲಿ ಇದ್ದಾರೆಯಾ ಎನ್ನುವುದು ಮುಖ್ಯವಲ್ಲ. ಡೇಟಿಂಗ್ ಗೆ ಹೋಗುವುದರಿಂದ ನೀವು ಮತ್ತು ಸಂಗಾತಿಯು ಚೆನ್ನಾಗಿ ಅರಿತುಕೊಂಡು, ಪ್ರೀತಿಯು ಹೆಚ್ಚಾಗುವುದು. ರೋಮ್ಯಾಂಟಿಕ್ ಆಗಿರುವುದು ತಪ್ಪಲ್ಲ. ಡೇಟಿಂಗ್ ನಿಂದ ನೀವು ಮತ್ತು ಸಂಗಾತಿಯು ಹತ್ತಿರವಾಗುವಿರಿ.

9. ನಿಮ್ಮ ಕಾಳಜಿ ತೋರಿಸಿ ಪ್ರೀತಿಗೆ ಮುಖ್ಯ ದಾರಿ ಕಾಳಜಿ ಮತ್ತು ಇದನ್ನು ನಿಮ್ಮ ಸಂಗಾತಿಗೆ ತೋರಿಸಬೇಕು. ನೀವಿಬ್ಬರು ಪರಸ್ಪರ ಕಾಳಜಿ ವಹಿಸಿಕೊಳ್ಳಬೇಕು. ಇದರಿಂದ ವೈವಾಹಿಕ ಜೀವನವು ಸುಖಕರವಾಗಿರುವುದು. ಪರಸ್ಪರರ ಬಗ್ಗೆ ಸಣ್ಣ ವಿಚಾರಕ್ಕೂ ಕಾಳಜಿ ತೋರಿಸಿ. ಸಂಗಾತಿಗೋಸ್ಕರ ಯಾವ ಭಾವನೆ ಇದೆ ಎಂದು ತೋರಿಸಲು ಸಮಯ ನೀಡಿ.

10. ನಂಬಿಕೆ ನೀವು ಮತ್ತು ನಿಮ್ಮ ಸಂಗಾತಿಯು ಪರಸ್ಪರ ನಂಬಿಕೆಯನ್ನಿಟ್ಟುಕೊಳ್ಳಬೇಕು ಮತ್ತು ಯಾವತ್ತೂ ಸಂಶಯ ಪಡಬಾರದು. ನಿಮ್ಮಿಬ್ಬರ ಪ್ರೀತಿಯಲ್ಲಿ ನಂಬಿಕೆಯಿರಬೇಕು ಮತ್ತು ಈ ಮೂಲಕ ಸಂಬಂಧದಲ್ಲಿ ಪ್ರೀತಿಯ ಕಿಚ್ಚನ್ನು ಹೆಚ್ಚಿಸಬಹುದು.

11. ಸಂವೇದನೆಯಿಂದ ಇರಿ ಕೆಲವು ಸಂವೇದನೆಗಳು ನಿಮ್ಮಲ್ಲಿ ಮತ್ತು ಸಂಗಾತಿಯಲ್ಲಿ ಪ್ರೀತಿಯ ಆಕಾಂಕ್ಷೆಯನ್ನು ಹೆಚ್ಚಿಸುವುದು. ಇದರಿಂದ ದೈಹಿಕವಾಗಿಯೂ ನೀವು ಹೆಚ್ಚು ಹತ್ತಿರವಾಗುವಿರಿ.

12. ಪ್ರೀತಿ ಬಿಂಬಿಸಿ ಕೆಲವೊಂದು ಸಂದರ್ಭಗಳಲ್ಲಿ ಉಡುಗೊರೆಗಳನ್ನು ಕೊಟ್ಟು ಮತ್ತು ಇನ್ನು ಕೆಲವೊಮ್ಮೆ ಪರಸ್ಪರ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಪ್ರೀತಿ ತೋರಿಸಬೇಕು. ಪ್ರೀತಿ ತೋರಿಸುವ ಮೂಲಕವಾಗಿ ನಿಮ್ಮ ಹಾಗೂ ಸಂಗಾತಿಯ ಮಧ್ಯೆ ರೋಮ್ಯಾನ್ಸ್ ತೀವ್ರವಾಗುವುದು. ಇದು ನೀವು ಪಾಲಿಸಬೇಕಾದ 12 ಸಲಹೆಗಳೂ. ಕೆಲವೊಂದು ಸಂದರ್ಭದಲ್ಲಿ ಇದು ನಿಮಗೆ ತುಂಬಾ ತಮಾಷೆಯೆಂದು ಭಾವಿಸಬಹುದು. ಆದರೆ ಅರೇಂಜ್ಡ್ ಮ್ಯಾರೇಜ್ ನಲ್ಲಿ ಇದು ನಿಜವಾಗಿಯೂ ನಿಮಗೆ ನೆರವಾಗುವುದು. ಇದರಿಂದ ನೀವು ಈ ಸಲಹೆಗಳನ್ನು ಪಾಲಿಸಬೇಕು ಮತ್ತು ಅರೇಂಜ್ಡ್ ಮ್ಯಾರೇಜ್ ನೀವು ಯೋಚಿಸಿರುವುದಕ್ಕಿಂತ ತುಂಬಾ ಒಳ್ಳೆಯದಾಗಿದೆ. ನೀವು ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಇದಕ್ಕೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.

Leave a Reply

Your email address will not be published. Required fields are marked *