ಸ್ನೇಹಿತರ ದಿನ ಆಚರಣೆ ಆರಂಭ ಎಲ್ಲಿಂದ?

ಸ್ನೇಹ ಎನ್ನುವುದು ಎಲ್ಲವನ್ನು ಮೀರಿ ನಿಲ್ಲುವಂತಹ ಸಂಬಂಧ. ಇಲ್ಲಿ ಕಪಟವಿಲ್ಲ, ಸ್ವಾರ್ಥವಿಲ್ಲ… ಭೂಮಿ ಮೇಲೆ ಸ್ನೇಹ ಹಾಗೂ ಪ್ರೀತಿಯ ಮೇಲೆ ಎಲ್ಲವೂ ಅವಲಂಬಿಸಿದೆ. ಸ್ನೇಹವಿಲ್ಲದ ಜೀವವಿಲ್ಲವೆನ್ನಬಹುದು. ಅದರಲ್ಲೂ ಭಾರತೀಯರು ವಿಶ್ವಕ್ಕೆ ವಸುದೈವ ಕುಟುಂಬ’ ಎಂದರೆ ವಿಶ್ವವೇ ಒಂದು ಕುಟುಂಬವಿದ್ದಂತೆ ಎಂದು ಹೇಳಿದವರು. ಭಾರತೀಯರು ಸ್ನೇಹಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟವರು.

ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ ಬರುತ್ತಾರೆ. ಬ್ಯಾಲದಿಂದ ಹಿಡಿದು ವೃದ್ಧಾಪ್ಯದ ತನಕ ಸ್ನೇಹವೆನ್ನುವುದು ಸಿಗುವುದು. ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾದರೆ, ಇನ್ನು ಕೆಲವರು ಹಾಗೆ ಸ್ನೇಹಿತರಾಗಿ ಉಳಿಯುವರು. ಸ್ನೇಹವು ಗಡಿ, ಭಾಷೆ, ಜಾತಿ ಧರ್ಮ ಎಲ್ಲವನ್ನು ಮೀರಿ ನಿಲ್ಲುವಂತಹದ್ದಾಗಿದೆ. ವಿಶ್ವದೆಲ್ಲೆಡೆಯಲ್ಲಿ ಅಗಸ್ಟ್ ಮೊದಲ ವಾರದಲ್ಲಿ ಸ್ನೇಹಿತರ ದಿನವನ್ನು ಆಚರಿಸುವರು. ಈ ಲೇಖನದಲ್ಲಿ ಇದರ ಬಗ್ಗೆ ನಿಮಗೆ ಮಾಹಿತಿ ನೀಡಲಾಗುತ್ತಿದೆ.

ಸ್ನೇಹಿತರ ದಿನ ಎಂದರೇನು?

ಈ ದಿನವನ್ನು ವಿಶ್ವದೆಲ್ಲೆಡೆಯಲ್ಲಿ ಸ್ನೇಹಿತರ ದಿನವಾಗಿ ಆಚರಿಸಲಾಗುತ್ತದೆ. ಹೆಚ್ಚಿನ ರಾಷ್ಟ್ರಗಳಲ್ಲಿ ಇದು ಆಚರಿಸಲ್ಪಡುತ್ತದೆ. ವಿವಿಧತೆಯಲ್ಲಿ ಏಕತೆಯೇ ಸ್ನೇಹದ ಸಂಕೇತ. ಇದು ಯಾವುದೇ ಪರಿಸ್ಥಿತಿಯಲ್ಲಿ ಎರಡು ಜೀವಗಳ ನಡುವಿನ ಭಾಂದವ್ಯವೆನ್ನಬಹುದು.

ಆಚರಣೆ ಹಿಂದಿನ ಇತಿಹಾಸವೇನು?

1930ರ ಬಳಿಕ ಸ್ನೇಹಿತರ ದಿನವೆನ್ನುವುದು ಆಚರಣೆಗೆ ಬಂದಿದೆ. ಮೊದಲ ವಿಶ್ವಯುದ್ಧದ ಬಳಿಕ ಶಾಂತಿ ಅಭಿಯಾನ ಮತ್ತು ಜನರು ಪರಸ್ಪರ ಬೆರೆಯುವುದು ಬೇಕಾಗಿತ್ತು. ಹಾಲ್ ಮಾರ್ಕ್ ಕಾರ್ಡ್ ತಯಾರಕರಾಗಿದ್ದ ಜೊಯ್ಸ್ ಹಾಲ್ ಎಂಬವರು ಸ್ನೇಹಿತರ ದಿನ ಆರಂಭಿಸಿದರು. ಆಗಸ್ಟ್ 2ರಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.

1935ರಲ್ಲಿ ಅಮೆರಿಕಾದಲ್ಲಿ ಸ್ನೇಹಿತರ ದಿನ ಆಚರಣೆಯು ಆರಂಭವಾಯಿತು. ಅಗಸ್ಟ್ ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಬೇಕೆಂದು ಅಮೆರಿಕಾ ಕಾಂಗ್ರೆಸ್ ನಿರ್ಧರಿಸಿತು. ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ನೀಡಲು ಇದನ್ನು ಆಚರಿಸಲಾಯಿತು.

ಯುವ ಜನಾಂಗವು ತಮ್ಮ ಸ್ನೇಹವನ್ನು ತುಂಬಾ ಸಂಭ್ರಮದಿಂದ ಆಚರಿಸಲು ಆರಂಭಿಸಿದಾಗ ಇದು ಒಂದು ರಾಷ್ಟ್ರೀಯ ಹಬ್ಬವಾಯಿತು. ಸ್ನೇಹಿತರು ಮತ್ತು ಸ್ನೇಹವನ್ನು ಈ ದಿನ ಗೌರವಿಸಲಾಗುತ್ತದೆ. ಇದರಿಂದ ಅಮೆರಿಕಾದಲ್ಲಿ ಸ್ನೇಹಿತರ ದಿನವು ಒಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಮೆರಿಕಾದಲ್ಲಿ ಯುವಜನಾಂಗದ ಸಂಭ್ರಮಾಚರಣೆಯನ್ನು ನೋಡಿದ ದಕ್ಷಿಣ ಅಮೆರಿಕಾದ ಮತ್ತು ಇತರ ಕೆಲವು ರಾಷ್ಟ್ರಗಳು ಕೂಡ ಇದನ್ನು ಆಚರಿಸಲು ಆರಂಭಿಸಿದವು. 1958ರಲ್ಲಿ ಪರಾಗ್ವೆಯು ತನ್ನದೇ ಆಗಿರುವ ರಾಷ್ಟ್ರೀಯ ಸ್ನೇಹಿತರ ದಿನವನ್ನು ಜುಲೈ 30ರಂದು ಆಚರಿಸಲು ಆರಂಭಿಸಿತು.

ದಕ್ಷಿಣ ಏಶ್ಯಾದ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ನ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ ನಲ್ಲಿ ಇದನ್ನು ಜುಲೈ 20ರಂದು ಆಚರಿಸಲ್ಪಡುವುದು. ಫಿನ್ ಲ್ಯಾಂಡ್ ಮತ್ತು ಇಸ್ಟೊನಿಯಾದಲ್ಲಿ ಸ್ನೇಹಿತರ ದಿನದಂದೇ ಪ್ರೇಮಿಗಳ ದಿನ ಕೂಡ ಆಚರಿಸಲಾಗುತ್ತದೆ.

ಈ ದಿನ ಏನು ಮಾಡಬೇಕು?

ಸ್ನೇಹಿತರ ದಿನ ಸ್ನೇಹಿತರು ಪರಸ್ಪರ ಉಡುಗೊರೆ ಮತ್ತು ಕಾರ್ಡ್ ಗಳನ್ನು ಹಂಚಿಕೊಳ್ಳುವರು. ಈ ದಿನ ಯಾವುದೇ ಜಾತಿ, ಧರ್ಮ, ವರ್ಣ, ಲಿಂಗ ಭೇದವಿಲ್ಲದೆ ಶುಭಾಶಯ ವಿನಿಮಯವಾಗುವುದು. ಕೆಲವರು ತಾವೇ ಗ್ರೀಟಿಂಗ್ ಕಾರ್ಡ್ ಗಳನ್ನು ತಯಾರಿಸಿದರೆ, ಇನ್ನು ಕೆಲವರು ಇದನ್ನು ಖರೀದಿಸಿ ಸ್ನೇಹಿತರಿಗೆ ನೀಡಿ ತಮ್ಮ ಸ್ನೇಹ ತೋರಿಸಿಕೊಳ್ಳುವರು.

ಯುವಜನರೇ ಹೆಚ್ಚಾಗಿರುವಂತಹ ಭಾರತದಲ್ಲಿ ಸ್ನೇಹಿತರ ದಿನಕ್ಕಾಗಿ ಒಂದು ವಾರಕ್ಕೆ ಮೊದಲೇ ತಯಾರಿಗಳು ಆರಂಭವಾಗುವುದು. ರೆಸ್ಟೋರೆಂಟ್ ಮತ್ತು ಪಬ್ ಗಳಲ್ಲಿ ಟೇಬಲ್ ಗಳನ್ನು ಕಾದಿರಿಸಲಾಗುತ್ತದೆ. ಸ್ನೇಹಿತರಿಗೆ ಉಡುಗೊರೆ ನೀಡಲು ಕೆಲವರು ಉತ್ಸಾಹ ತೋರಿಸಿದರೆ, ಇನ್ನು ಕೆಲವರು ಗ್ರೀಟಿಂಗ್ ಖರೀದಿಸಿ ತಮ್ಮ ಸ್ನೇಹಿತರಿಗೆ ನೀಡುವರು. ಭಾರತದಲ್ಲಿ ಸ್ನೇಹಿತರ ದಿನವು ಅತ್ಯುತ್ಸಾಹದಿಂದ ಆಚರಿಸಲಾಗುತ್ತದೆ ಮತ್ತು ಇದು ಸ್ನೇಹಿತರಿಬ್ಬರ ಭಾಂದವ್ಯ ತೋರಿಸುವ ದಿನವಾಗಿದೆ.

ಸ್ನೇಹಿತರ ದಿನ ಯಾಕೆ ಆಚರಿಸಬೇಕು?

ಆರಂಭದಲ್ಲಿ ಇದು ಸ್ನೇಹಿತರು ಮತ್ತು ಸ್ನೇಹಕ್ಕೆ ಗೌರವಾರ್ಥವಾಗಿ ಈ ದಿನ ಆಚರಿಸಲ್ಪಡುತ್ತಿತ್ತು. ಆದರೆ ಇದು ಇಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆ ಆಚರಿಸಲ್ಪಡುವ ಕಾರಣದಿಂದ ಇದು ಸ್ನೇಹಿತರ ನಡುವಿನ ಆಚರಣೆಯಾಗಿ ಹೋಗಿದೆ. ಕೆಲವರು ಈ ದಿನ ಹಲವಾರು ಮಂದಿಯನ್ನು ಸ್ನೇಹಿತರನ್ನಾಗಿ ಮಾಡಿದ್ದಾರೆ. ಇನ್ನು ಕೆಲವರು ಈ ದಿನ ತಮ್ಮ ಸ್ನೇಹಿತರ ಕಾಳಜಿ, ಗೌರವ ಮತ್ತು ನಂಬಿಕೆಯನ್ನು ನೆನಪಿಸಿಕೊಳ್ಳುವರು. ಇದು ಸ್ನೇಹಿತರ ನಡುವಿನ ಭಾಂದವ್ಯ ಉತ್ತಮಪಡಿಸಲು ಆಚರಿಸಲಾಗುತ್ತದೆ. ಇದರಿಂದ ಸ್ನೇಹಿತರ ನಡುವಿನ ಪ್ರೀತಿ ಹಾಗೂ ಸಂಬಂಧ ಬಲಗೊಳ್ಳುವುದು.

ನಮ್ಮ ಆಪ್ತ ಹಾಗೂ ದೂರದಲ್ಲಿರುವ ಸ್ನೇಹಿತರನ್ನು ನೆನಪಿಸಿಕೊಳ್ಳಲು ಈ ದಿನವು ತುಂಬಾ ಸೂಕ್ತ. ನಮ್ಮ ಪ್ರೀತಿಯನ್ನು ಅವರಿಗೆ ತೋರಿಸಿ, ಸ್ನೇಹದ ಮಹತ್ವ ಏನು ಎಂದು ಸಾರಿ ಹೇಳುವುದು ಇಂದಿನ ದಿನಗಳಲ್ಲಿ ಸಂಪ್ರದಾಯವಾಗಿದೆ. ಆಗಸ್ಟ್ ನ ಮೊದಲ ಭಾನುವಾರವು ಬಂದೇ ಬಿಟ್ಟಿದೆ. ಬೋಲ್ಡ್ ಸ್ಕೈನ ಓದುಗರಿಗೆಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು. ಸ್ನೇಹಿತರ ದಿನಾಚರಣೆ ಬಗ್ಗೆ ಮತ್ತಷ್ಟು ತಿಳಿಯಲು ಇದೇ ಸೆಕ್ಷನ್ ನಲ್ಲಿ ಓದುತ್ತಲಿರಿ.

ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಇದನ್ನು ಶೇರ್ ಮಾಡಲು ಮರೆಯಬೇಡಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.

Leave a Reply

Your email address will not be published. Required fields are marked *