Health Tips

ನರದ ಒಂದು ಭಾಗ ಗಟ್ಟಿಯಾಗಿ ಬಿಡುವ ಕಾಯಿಲೆ! ಇದರ ಏಳು ಲಕ್ಷಣಗಳು.

ಶೀತ, ಫ್ಲೂ ಮೊದಲಾದ ವೈರಸ್ ಧಾಳಿಯ ಮೂಲಕ ಎದುರಾಗುವ ಕಾಯಿಲೆಗಳು (ವಾಸ್ತವವಾಗಿ ಇವು ಕಾಯಿಲೆಗಳಲ್ಲ, ಬದಲಿಗೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮ) ಮೈಬೆಚ್ಚಗಾಗಿಸುವುದು, ಸೋರುವ ಮೂಗು ಮೊದಲಾದ ಕೆಲವು ಸೂಚನೆಗಳನ್ನು ನೀಡಿ ಈ ಬಗ್ಗೆ ಎಚ್ಚರಾಗಿರಲು ಸೂಚಿಸುತ್ತವೆ. ವೈದ್ಯರು ಪ್ರಾಥಮಿಕ ತಪಾಸಣೆಯಲ್ಲಿ ಹುಡುಕುವುದೇ ಈ ಸೂಚನೆಗಳನ್ನು! ಆದರೆ ಕೆಲವು ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ, ಮೂತ್ರಪಿಂಡದ ಕಲ್ಲು ಮೊದಲಾದ ಕೆಲವಾರು ಕಾಯಿಲೆಗಳು ದೇಹದೊಳಗೆ ಅವ್ಯಕ್ತವಾಗಿ ಅಡಗಿದ್ದು ಯಾವುದೇ ಮುನ್ಸೂಚನೆಯಿಲ್ಲದೇ ಹಠಾತ್ತಾಗಿ ತನ್ನ ಪ್ರಕೋಪವನ್ನು ತೋರಬಹುದು.

ಹಾಗಾಗಿ ಈ ಅವ್ಯಕ್ತ ಕಾಯಿಲೆಗಳ ಇರುವಿಕೆಯನ್ನು ಆದಷ್ಟೂ ಬೇಗನೇ ಕಂಡುಕೊಳ್ಳಲು ಹಾಗೂ ಚಿಕಿತ್ಸೆಯನ್ನು ಪ್ರಾರಂಭಿಸಲು ದೇಹ ಸೂಕ್ಷ್ಮವಾಗಿ ನೀಡುವ ಕೆಲವು ಸೂಚನೆಗಳನ್ನು ಗಮನಿಸಬೇಕಾದುದು ಅಗತ್ಯವಾಗಿದೆ. ಸಾಮಾನ್ಯವಾಗಿ ಆರೋಗ್ಯ ಚೆನ್ನಾಗಿದ್ದರೆ ನಡು ನಡುವೆ ದೇಹ ನೀಡುವ ಈ ಸೂಚನೆಗಳನ್ನು ನಾವು ಕಡೆಗಣಿಸಿಬಿಡುತ್ತೇವೆ. ಅಥವಾ ಈ ಸೂಚನೆ ನೀಡಲು ಅಗತ್ಯವಿರುವ ಸಂದರ್ಭವೇ ಬಾರದೇ ಇದ್ದು ಎಂದಾದರೊಮ್ಮೆ ಬಂದಾಗಲಾದರೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಉದಾಹರಣೆಗೆ ಹೃದಯದ ಕಾಯಿಲೆ ಪ್ರಾಥಮಿಕ ಹಂತದಲ್ಲಿರುವವರಿಗೆ ಸಾಮಾನ್ಯ ಆರೋಗ್ಯ ಹಾಗೂ ನಿತ್ಯದ ಸಾಮಾನ್ಯ ಚಟುವಟಿಕೆಯಿಂದಿದ್ದಷ್ಟೂ ಇದರ ಇರುವಿಕೆ ಗೊತ್ತಾವುವುದೇ ಇಲ್ಲ. ಇದರ ಇರುವಿಕೆ ಗೊತ್ತಾಗುವುದು ಒಂದು ಬಾರಿಯಾದರೂ ಸುಮಾರು ಐವತ್ತು ಮೀಟರ್ ಓಡಿದಾಗಲೇ! ಹೃದಯಭಾಗದಲ್ಲಿ ಚಿಕ್ಕದಾಗಿ ಮೀಟಿದಂತಹ ನೋವಾಗಲು ತೊಡಗುತ್ತದೆ. ತಕ್ಷಣವೇ ವೈದ್ಯರಲ್ಲಿ ತಪಾಸಣೆ ಮಾಡಿಸಿದರೆ ಈ ತೊಂದರೆ ಬೆಳಕಿಗೆ ಬರುತ್ತದೆ. ನಮ್ಮಲ್ಲಿ ಅಧಿಕ ಜನರು ಹಠಾತ್ತಾಗಿ ಹೃದಯಾಘಾತಕ್ಕೆ ಒಳಗಾಗಲು ಈ ಮುನ್ಸೂಚನೆಯನ್ನು ಎಂದಿಗೂ ಪಡೆಯದೇ ಇದ್ದುದೇ ಪ್ರಮುಖ ಕಾರಣವಾಗಿದೆ.

ನಮ್ಮ ದೇಹದ ಪ್ರತಿ ಜೋವಕೋಶಕ್ಕೂ ಶಕ್ತಿ ಪೋಷಕಾಂಶದ ಅಗತ್ಯವಿದ್ದು ಇದನ್ನು ರಕ್ತ ಪೂರೈಸುತ್ತದೆ ಹಾಗೂ ರಕ್ತವನ್ನು ದೇಹದ ಎಲ್ಲೆಡೆ ಸಂಚಿಸುವಂತೆ ಮಾಡುವುದೇ ನರವ್ಯವಸ್ಥೆ. ಬರೆಯ ರಕ್ತಸಂಚಾರ ಮಾತ್ರವಲ್ಲ, ಮೆದುಳಿನ ಸಂಕೇತಗಳನ್ನು ದೇಹದ ಎಲ್ಲಾ ಕಡೆ ಮಿಂಚಿನಂತೆ ಹರಿಸಲೂ ನರವ್ಯವಸ್ಥೆಯ ಅಗತ್ಯವಿದೆ.

ನರಗಳಿಗೂ ಕೆಲವಾರು ಅನಾರೋಗ್ಯಗಳು ಬಾಧಿಸಬಹುದು. ತನ್ಮೂಲಕ ರಕ್ತಪರಿಚಲನೆ ಹಾಗೂ ಸಂವಹನವ್ಯವಸ್ಥೆಯನ್ನು ಬಾಧಿಸಬಹುದು. ಇದರಲ್ಲೊಂದು ರೋಗವೆಂದರೆ ನರಗಳ ಘನೀಭವನ ಅಥವಾ deep vein thrombosis. (deep ಎಂದರೆ ಇಲ್ಲಿ ಆಳ ಎನ್ನುವುದಕ್ಕಿಂತಲೂ ತೀವ್ರ ಎಂಬ ಅರ್ಥವಿದೆ). ಈ ರೋಗ ಈಗಾಗಲೇ ಆವರಿಸಿದ್ದು ನಿಧಾನವಾಗಿ ಉಲ್ಬಣಗೊಳ್ಳುತ್ತಿದ್ದರೆ ಈ ಬಗ್ಗೆ ದೇಹ ಕೆಲವು ಸೂಕ್ಷ್ಮ ಸೂಚನೆಗಳನ್ನು ನೀಡುತ್ತದೆ. ಇವುಗಳಲ್ಲಿ ಒಂದಾದರೂ ನಿಮಗೆ ಕೊಂಚವೂ ಅನುಭವವಾಗಿದ್ದರೆ ತಕ್ಷಣವೇ ವೈದ್ಯರಲ್ಲಿ ಸೂಕ್ತ ತಪಾಸಣೆಗೊಳಗೊಂಡು ಚಿಕಿತ್ಸೆ ಪಡೆಯುವುದು ಅನಿವಾರ್ಯ.

ನರಗಳ ಘನೀಭವನ ಎಂದರೇನು?

ಹೆಸರೇ ಸೂಚಿಸುವಂತೆ ನರದ ಒಂದು ಭಾಗ ಗಟ್ಟಿಯಾಗಿಬಿಡುವುದು. ಸ್ನಾಯುಗಳ ಸಾಂದ್ರತೆ ಹೆಚ್ಚಿರುವ ಮತ್ತು ಆಳದಲ್ಲಿರುವ ಭಾಗಗಳಲ್ಲಿ, ಹೆಚ್ಚಾಗಿ ಕಾಲುಗಳಲ್ಲಿರುವ ಊಂದು ಅಥವಾ ಹೆಚ್ಚಿನ ನರಗಳಲ್ಲಿ ಯಾವುದೋ ಕಾರಣದಿಂದ ರಕ್ತ ಹೆಪ್ಪುಗಟ್ಟಿದರೆ ಆ ಭಾಗದ ನರ ನಿಧಾನವಾಗಿ ಗಟ್ಟಿಯಾಗುತ್ತಾ ಹೋಗುತ್ತದೆ ಇದೇ ನರಗಳ ಘನೀಭವನ. ಒಂದು ವೇಳೆ ಇತರ ಕಾಯಿಲೆಯ ಪರಿಣಾಮದಿಂದ ರಕ್ತ ಹೆಪ್ಪುಗಟ್ಟುವ ಸಂಭವವಿದ್ದರೂ ಈ ಕಾಯಿಲೆ ಎದುರಾಗಬಹುದು. ಸ್ಥೂಲಕಾಯ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮೊದಲಾದ ಸ್ಥಿತಿಗಳು ಈ ತೊಂದರೆ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ವಿಶೇಷವಾಗಿ, ಒಂದೇ ಭಂಗಿಯಲ್ಲಿ ಹೆಚ್ಚಿನ ಹೊತ್ತು ಕುಳಿತೇ ಇರುವ ವ್ಯಕ್ತಿಗಳಲ್ಲಿಯೂ ಈ ಸ್ಥಿತಿ ಕಾಣಬರುತ್ತದೆ. ಈ ಸ್ಥಿತಿ ಅಪಾಯಕರ! ಏಕೆಂದರೆ ಒಂದು ವೇಳೆ ರಕ್ತದ ಒತ್ತಡದ ಕಾರಣ ಈ ಹೆಪ್ಪುಗಟ್ಟಿರುವ ರಕ್ತದ ಗಡ್ಡೆ ಸಡಿಲಗೊಂಡು ಪ್ರತ್ಯೇಕಗೊಂಡು ನರಗಳ ಒಳಗೆ ಸಂಚರಿಸತೊಡಗಿದರೆ ಇದು ಹೃದಯ, ಶ್ವಾಸಕೋಶ ಮೊದಲಾದ ಪ್ರಮುಖ ಅಂಗಗಳ ಒಳಗೆ ಆಗಮಿಸಿ ಸೂಕ್ಷ್ಮಭಾಗದಲ್ಲಿ ಸಿಲುಕಿ ಭಾರೀ ಅಪಾಯಕ್ಕೆ ಕಾರಣವಾಗಬಹುದು.

ನರಗಳ ಘನೀಭವನಕ್ಕೆ ಸಂಭವನೀಯ ಕಾರಣಗಳು

* ಅನುವಂಶಿಕ ಹಾಗೂ ರಕ್ತಕ್ಕ್ತೆಸಂಬಂಧಿಸಿದ ಕಾಯಿಲೆಗಳು

* ಅತಿ ಕಾಳಜಿಯ ಹೆರಿಗೆ, ಪಾರ್ಶ್ವವಾಯು ಅಥವಾ ಇತರ ಕಾಯಿಲೆಗಳಿಗೆ ಅಲ್ಲಾಡದೇ ಬಹುಕಾಲ ಆಸ್ಪತ್ರೆಯ ಹಾಸಿಗೆಯಲ್ಲಿ ಬಹುಕಾಲ ಇರುವುದು

* ದೇಹದ ಆಳಭಾಗದಲ್ಲಿರುವ ನರಗಳಿಗೆ ಆದ ಪೆಟ್ಟು, ವಿಶೇಷವಾಗಿ ಕಾಲುಗಳಿಗೆ ಆದ ಪೆಟ್ಟು

* ಕಾಲುಗಳಿಗೆ ಆದ ಶಸ್ತ್ರಚಿಕಿತ್ಸೆ

* ಸಾಮಾನ್ಯಕ್ಕಿಂತಲೂ ಹೆಚ್ಚು ತೂಕ ಇರುವ ಗರ್ಭಿಣಿಯರು, ಹೆಚ್ಚಿನ ತೂಕ ಪರಿಣಾಮವಾಗಿ ಕಾಲುಗಳ ಮೇಲೆ ಬೀಳುವ ಹೆಚ್ಚುವರಿ ಒತ್ತಡ, ತನ್ಮೂಲಕ ಎದುರಾಗುವ ಕಾಲುಗಳ ಒಳಭಾಗದ ನರಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ

* ಗರ್ಭ ನಿರೋಧಕ ಗುಳಿಗೆಗಳು ಅಥವಾ ರಸದೂತಗಳ ಬದಲಾವಣೆಯ ಚಿಕಿತ್ಸೆಗಳೂ ರಕ್ತ ಹೆಪ್ಪುಗಟ್ಟುವಿಕೆಗೆ ಪ್ರಾರಂಭ ನೀಡಬಹುದು

* ಅತಿಯಾದ ಸ್ಥೂಲಕಾಯ

* ಧೂಮಪಾನ, ತಂಬಾಕು ಸೇವನೆ ಮೊದಲಾದ ದುರಭ್ಯಾಸಗಳಿಂದಲೂ ರಕ್ತ ಹೆಪ್ಪುಗಟ್ಟಬಹುದು.

* ಕೆಲವು ಬಗೆಯ ಕ್ಯಾನ್ಸರ್, ಉದಾಹರಣೆಗೆ adenocarcinomas (ಮೇದೋಜೀರಕ ಗ್ರಂಥಿಯ ಕ್ಯಾನ್ಸರ್) ಕಾಯಿಲೆ ಇರುವ ವ್ಯಕ್ತಿಗಳ ನರಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು

* ವಯೋಸಹಜ ಕಾರಣಗಳು, ಸಾಮಾನ್ಯವಾಗಿ ಅರವತ್ತು ದಾಟಿದ ಬಳಿಕ ನರಗಳು ಶಿಥಿಲವಾಗುತ್ತಾ ಹೋಗುವುದರಿಂದಲೂ ಈ ಸ್ಥಿತಿ ಎದುರಾಗಬಹುದು.

* ಉದ್ಯೋಗ ನಿಮಿತ್ತ ಒಂದೇ ಭಂಗಿಯಲ್ಲಿ ದಿನದ ಬಹುತೇಕ ಸಮಯವನ್ನು ಕಳೆಯಲೇಬೇಕಾದ ಅನಿವಾರ್ಯತೆ ಇರುವ ವ್ಯಕ್ತಿಗಳು. ಉದಾಹರಣೆಗೆ ವಾಹನ ಚಾಲಕ, ದರ್ಜಿ, ಕಂಪ್ಯೂಟರ್ ಎದುರು ಕುಳಿತೇ ಕಾರ್ಯನಿರ್ವಹಿಸಬೇಕಾದ ಉದ್ಯೋಗಿಗಳು ಇತ್ಯಾದಿ.

ನರಗಳ ಘನೀಭವನದ ಇರುವಿಕೆಯನ್ನು ದೇಹ ನೀಡುವ ಸೂಕ್ಷ್ಮ ಸಂಜ್ಞೆಗಳು

*ಸೆಡೆತ

*ಬಣ್ಣದ ಬದಲಾವಣೆ

*ಉಳಿದ ಭಾಗಕ್ಕಿಂತ ಒಂದು ಭಾಗ ಕೊಂಚವೇ ಹೆಚ್ಚು ಬೆಚ್ಚಗಿರುವುದು

*ಕಾಲಿನ ಮೀನಖಂಡದ ಒಳಭಾಗದಲ್ಲಿ ನೂಲಿನಿಂದ ಎಳೆದಂತಹ ನೋವು

*ಬಾವು

* ಉಸಿರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ ಹೋಗುವುದು

*.ಪಾದಗಳ ಅಡಿಭಾಗದಲ್ಲಿ ನೋವು

1. ಸೆಡೆತ

ಒಂದು ವೇಳೆ ಯಾವುದೇ ವ್ಯಾಯಾಮ ಮಾಡದೇ ಅಥವಾ ಕಾಲಿಗೆ ಯಾವ ಪೆಟ್ಟೂ ಆಗದೇ ಸ್ನಾಯುಗಳ ಸೆಡೆತ, ವಿಶೇಷವಾಗಿ ಕಾಲುಗಳ ಮೀನಖಂಡಗಳ ಸೆಡೆತ ಸತತವಾಗಿ ಎದುರಾದರೆ, (ಅಂದರೆ ಯಾವುದೋ ಅವ್ಯಕ್ತ ಶಕ್ತಿ ನಿಮ್ಮ ಕಾಲನ್ನು ಸೆಳೆದು ಮಡಚಿದ್ದು ಕಾಲನ್ನು ನೇರವಾಗಿಸುವುದು ಭಾರೀ ಕಷ್ಟಕರ ಹಾಗೂ ನೋವಿನಿಂದ ಕೂಡಿದ್ದರೆ) ಇದಕ್ಕೆ ರಕ್ತದ ಘನೀಭವನ ಕಾರಣವಾಗಿರಬಹುದು.

2. ಬಣ್ಣದ ಬದಲಾವಣೆ

ಒಂದು ವೇಳೆ ನಿಮ್ಮ ಕಾಲಿನ, ವಿಶೇಷವಾಗಿ ಮೀನಖಂಡ ಹಾಗೂ ಮೊಣಕಾಲಿನ ಹಿಂಭಾಗದ ಕೆಳಭಾಗದಲ್ಲಿ ನೀಲಿಮಿಶ್ರಿತ ನೇರಳೆ ಬಣ್ಣದ ಮಚ್ಚೆಯಂತೆ ಕಂಡುಬಂದಿದ್ದರೆ ಹಾಗೂ ಬಹುಕಾಲದಿಂದ ಹಾಗೇ ಇದ್ದು ಇದುವರೆಗೆ ಯಾವುದೇ ತೊಂದರೆ ಇಲ್ಲ ಎನಿಸಿದರೂ ಇದು ಕಾಲುಗಳ ಆಳದ ನರಗಳಲ್ಲಿ ಎದುರಾಗುವ ಘನೀಭವನದ ಕಾರಣವೇ ಇರಬಹುದು.

3. ಉಳಿದ ಭಾಗಕ್ಕಿಂತ ಒಂದು ಭಾಗ ಕೊಂಚವೇ ಹೆಚ್ಚು ಬೆಚ್ಚಗಿರುವುದು

ಒಂದು ವೇಳೆ ಕಾಲಿನ ಒಂದು ಭಾಗದಲ್ಲಿ, ಅಥವಾ ಮೊಣಕಾಲಿನಿಂದ ಪಾದದವರೆಗಿನ ಕಾಲಿನ ಭಾಗದ ತಾಪಮಾನ ದೇಹದ ಉಳಿದ ಭಾಗದ ತಾಪಮಾನಕ್ಕಿಂತ ಕೊಂಚ ಹೆಚ್ಚಿದ್ದರೆ ಇದು ಆ ಕಾಲಿನ ಆಳದ ನರಗಳಲ್ಲಿ ಎದುರಾಗಿರುವ ಹಲವಾರು ಕಡೆಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯ ಸೂಚನೆಯಾಗಿದೆ. ಈ ಸ್ಥಿತಿ ಸಾಕುಪ್ರಾಣಿಗಳನ್ನು ಮನೆಯೊಳಗೇ ಸಾಕಿಕೊಂಡಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಕೊಂಡಿರುವುದು ಅಚ್ಚರಿಯಾಗಿದ್ದು ಅಕಸ್ಮಾತ್ತಾಗಿ ಊಟದಲ್ಲಿ ಪ್ರಾಣಿಗಳ (ವಿಶೇಷವಾಗಿ ಬೆಕ್ಕು ಮತ್ತು ನಾಯಿ) ಕೂದಲು ಹೊಟ್ಟೆಗೆ ಹೋದಾಗ ಈ ಸ್ಥಿತಿ ಎದುರಾಗಿರುವುದು ಕಂಡುಬಂದಿದೆ.

4. ಕಾಲಿನ ಮೀನಖಂಡದ ಒಳಭಾಗದಲ್ಲಿ ನೂಲಿನಿಂದ ಎಳೆದಂತಹ ನೋವು

ಒಂದು ವೇಳೆ ಯಾವುದೇ ಬಗೆಯ ತೀವ್ರ ವ್ಯಾಯಾಮದ ಹೊರತಾಗಿಯೂ ಮೀನಖಂಡವನ್ನು ಆಳದ ಭಾಗದಿಂದ ನೂಲಿನಿಂದ ಎಳೆದು ಜಗ್ಗುವಂತೆ ಮಾಡಿದರೆ ಆಗುವಂತಹ ತೀಕ್ಷ್ಣವಾದ ಹಾಗೂ ಒಂದು ಭಾಗದಲ್ಲಿ ನೋವು ಕೇಂದ್ರೀಕೃತವಾದಂತೆ ಅನ್ನಿಸುವಂತಹ ನೋವು ಎದುರಾದರೆ ಇದಕ್ಕೆ ಕೆಲವಾರು ಕಾರಣಗಳಿರಬಹುದು. ಕ್ಯಾಲ್ಸಿಯಂ ಕೊರತೆ, ಮೂಳೆಗಳ ಟೊಳ್ಳಾಗುವಿಕೆ (osteoporosis) ಹಾಗೂ ನರಗಳ ಘನೀಭವನವೂ ಕಾರಣವಾಗಿರಬಹುದು.

5. ಬಾವು

ಒಂದು ವೇಳೆ ಒಂದೇ ಕಾಲಿನಲ್ಲಿ ಅಥವಾ ಎರಡೂ ಕಾಲುಗಳಲ್ಲಿ ಎಲ್ಲೋ ಒಂದು ಭಾಗದಲ್ಲಿ ಕೊಂಚವೇ ಬಾವು ಕಂಡು ಬಂದಿದ್ದು ಇದಕ್ಕೆ ಯಾವುದೇ ಬಗೆಯ ಪೆಟ್ಟು ಅಥವಾ ಸೋಂಕು ಕಾರಣವಲ್ಲದಿದ್ದರೆ ನರಗಳ ಘನೀಭವನವೂ ಕಾರಣವಾಗಿರಬಹುದು. ಆದರೆ ಈ ಸೂಚನೆ ತೀರಾ ಸೂಕ್ಷ್ಮವಾಗಿದ್ದು ಕೇವಲ ವೈದ್ಯರ ಪರೀಕ್ಷೆ ಮಾತ್ರವೇ ಈ ಕಾರಣವೇ ಹೌದು ಎಂದು ದೃಢೀಕರಿಸಬಹುದು.

6. ಉಸಿರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ ಹೋಗುವುದು

ನರಗಳ ಘನೀಭವನದ ಇನ್ನೊಂದು ಸೂಕ್ಷ್ಮ ಸೂಚನೆ ಇದಾಗಿದೆ. ಒಂದು ವೇಳೆ ದೇಹದ ಕೆಳಭಾಗದಲ್ಲಿ ನರಗಳ ಹೆಪ್ಪುಗಟ್ಟುವಿಕೆ ಹಿಂದೆಂದೋ ಪ್ರಾರಂಭವಾಗಿದ್ದು ಈಗ ಒಂದು ಅಥವಾ ಇದಕ್ಕೂ ಹೆಚ್ಚಿನ ರಕ್ತದ ಗಡ್ಡೆಗಳು ಸಡಿಲವಾಗಿ ರಕ್ತನಾಳಗಳ ಒಳಗೇ ಚಲಿಸುತ್ತಾ ಶ್ವಾಸಕೋಶಕ್ಕೆ ಆಗಮಿಸುತ್ತವೆ ಹಾಗೂ ಶ್ವಾಸಕೋಶದ ಒಳಗೆ ಈ ಮುಖ್ಯ ನರಗಳು ಕವಲೊಡೆದು ಕಿರಿದಾಗುತ್ತಾ ಹೋದಂತೆ ಹೆಪ್ಪುಗಟ್ಟಿದ್ದ ರಕ್ತ ಈ ಕವಲಿನಲ್ಲಿ ಮುಂದುವರೆಯಲಾಗದೇ ಅಲ್ಲೇ ನಿಂತು ಅಷ್ಟು ಮಟ್ಟಿನ ಶ್ವಾಸಕೋಶದ ನರಗಳ ಮೂಲಕ ರಕ್ತದ ಹರಿವನ್ನೇ ನಿಲ್ಲಿಸಿಬಿಡುತ್ತದೆ. ಈ ಸ್ಥಿತಿಗೆ pulmonary embolism ಎಂದು ಕರೆಯುತ್ತಾರೆ. ಹೆಚ್ಚು ಹೆಚ್ಚು ರಕ್ತದ ಹೆಪ್ಪುಗಳು ಶ್ವಾಸಕೋಶಕ್ಕೆ ಧಾವಿಸುತ್ತಿದ್ದಂತೆಯೇ ಶ್ವಾಸಕೋಶದ ಹೆಚ್ಚು ಹೆಚ್ಚು ಭಾಗ ಇವುಗಳಿಂದ ಬಾಧಿತಗೊಳ್ಳುತ್ತಾ ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಪರಿಣಾಮವಾಗಿ ತನ್ನ ಪೂರ್ಣಸಾಮರ್ಥ್ಯದಲ್ಲಿ ಆಮ್ಲಜನಕವನ್ನು ಒದಗಿಸಲು ಸಾಧ್ಯವಾಗದೇ ಹೋಗುತ್ತದೆ. ಹಾಗಾಗಿ ಆಗಾಗ, ಕೊಂಚ ಹೆಚ್ಚು ನಡೆದಾಡಿದರೂ ಉಸಿರೇ ಸಿಗದಂತಾದರೆ ಹಾಗೂ ಈ ಸ್ಥಿತಿ ಸತತವಾಗಿದ್ದರೆ ರಕ್ತದ ಘನೀಭವನದ ಇರುವಿಕೆ ಹಾಗೂ ಇತರ ಸಾಧ್ಯತೆಗಳ ಬಗ್ಗೆ ವೈದ್ಯರಿಂದ ತಪಾಸಣೆಗೊಳಗಾಗಬೇಕು.

7. ಪಾದಗಳ ಅಡಿಭಾಗದಲ್ಲಿ ನೋವು

ಒಂದು ವೇಳೆ ಪಾದಗಳನ್ನು ಬರೆಯ ನೆಲದ ಮೇಲಿಟ್ಟಾಗ ಪಾದ ಹಾಗೂ ಕಣಕಾಲು ಅಥವಾ ಪಾದದ ಕೀಲುಭಾಗದಲ್ಲಿ ಅಪಾರ ನೋವುಂಟಾಗುತ್ತಿದ್ದದೂ ಇದಕ್ಕೆ ರಕ್ತದ ಘನೀಭವನದ ತೊಂದರೆ ಕಾರಣವಾಗಿರಬಹುದು.

Comment here