ಭ್ರಷ್ಟಾಚಾರ ಮೌಢ್ಯ ಮತ್ತು ಜಾತೀಯತೆಯನ್ನು ಅಳಿಸಬೇಕು.

ಶಿಕ್ಷಣ ಸಂಘಟನೆ ಹೋರಾಟ ಎನ್ನುವ ಮೂರು ಧ್ಯೇಯಗಳ ಪರವಾಗಿ ನಮ್ಮ ಕಾರ್ಯಕ್ರಮ ಇರುವ ಹಾಗೆಯೇ
ಭ್ರಷ್ಟಾಚಾರ ಮೌಢ್ಯ ಮತ್ತು ಜಾತೀಯತೆಯನ್ನು ಅಳಿಸಬೇಕು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ತರಬೇಕೆಂಬ ಆಶಯಗಳನ್ನು
ಒಂದು ಬೃಹತ್ ವೇದಿಕೆಗೆ ತಂದು ಜನರಿಗೆ ಜಾಗೃತಿಯನ್ನು ಮೂಡಿಸಬೇಕು.

ಒಂದು ನೂರು ಜನ ಸೇರಿರುವ (ಸೇರಿಸಲಾಗಿರುವ) ಗ್ರೂಪ್ ನಲ್ಲಿ ಅದೇ ರಾಗ ಅದೇ ತಾಳ ಅಂತ ಅದೇ ವಿಷಯಗಳನ್ನು ಫಾರ್ವರ್ಡ್ ಮಾಡುತ್ತಲೇ ಇರುತ್ತೇವೆ ಕುಮಾರಸ್ವಾಮಿ ಪೇಪರ್ ಓದಿದರು, ಅವರ ಅಣ್ಣ ನಾಯಿಗಳಿಗೆ ಎಸೆದಂತೆ ಬಿಸ್ಕತ್ ಎಸೆದರು ” ಅವರು ಹಾಗೆ ಇವರು ಹೀಗೆ ” ಅಂತ ತೆಗಳುವುದೇ ಒಂದು ಕೆಲಸ ಮತ್ತು ಹವ್ಯಾಸವಾಗಿದೆ.

ಈ ನೂರು ಜನರ ವಾಟ್ಸಾಪ್ ಲೋಕದಲ್ಲಿ ಕೆಲವರು ನೋಡ್ತಾರೆ ಕೆಲವರು ನೋಡುವುದೇ ಇಲ್ಲ ಶೇಕಡಾ 80 ರಿಂದ 90 ಜನ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈಗ ಜನರಿಗೆ ಯೋಚನಾ ಶಕ್ತಿ ಇದೆ ವಿಮರ್ಶೆ ಮಾಡುವ ಶಕ್ತಿ ಇದೆ ಯಾರು ಏನು ಅಂತ ತೀರ್ಮಾನಿಸುವ ಶಕ್ತಿ ಇದೆಯೆಂದು ನಾವು ಮೊದಲು ಅರ್ಥ ಮಾಡಿ ಮಾಡಿಕೊಳ್ಳಬೇಕು

ಈಗಿನ ವಿದ್ಯಾಭ್ಯಾಸ ಪದ್ಧತಿ ಅಷ್ಟೇನು ಸರಿಯಾಗಿಲ್ಲ ಎಂದು ನಮಗೆ ಗೊತ್ತಿದೆ ಕಾಲೇಜು ಶಿಕ್ಷಣ ಮುಗಿಸಿ ಕೆಲಸವಿಲ್ಲದೆ ಯುವಕ-ಯುವತಿಯರು ತಮ್ಮ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸವೆಸಿ ಕೊಂಡು ವ್ಯಸನಿಗಳಾಗುತ್ತಿದ್ದಾರೆ ಹಾಗೂ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ.ಶಿಕ್ಷಣ ಮುಗಿಸಿದ ಕೂಡಲೇ ಯುವಕ-ಯುವತಿಯರಿಗೆ ಅವರು ಕಲಿತ ವಿಷಯಕ್ಕೆ ಸಂಬಂಧಿಸಿದಂತೆ
ಸರ್ಕಾರದ ವತಿಯಿಂದ ಕೌಶಲ್ಯ ತರಬೇತಿ ಪಡೆದು , ಖಾಸಗಿ ಅಥವಾ ಸರ್ಕಾರಿ ಕೆಲಸ ಸಿಗುವಂತಾಗಬೇಕು ಅಥವಾ ಸ್ವಂತ ಉದ್ಯೋಗ ಮಾಡಿಕೊಳ್ಳಲು ಪ್ರೋತ್ಸಾಹ ಮತ್ತು ಧನಸಹಾಯ ಲಭಿಸಬೇಕು

ನಮ್ಮ ಮಾಧ್ಯಮಗಳು(trp friends) ಧನಾತ್ಮಕವಾಗಿ ಕೆಲಸ ಮಾಡುತ್ತಿಲ್ಲ,ಮೌಢ್ಯ ಪ್ರಚಾರ ಮಾಡುತ್ತಿವೆ ರಾಜಕೀಯ ಪಕ್ಷಗಳ ಪರವಾಗಿ ಅಥವಾ ವಿರೋಧವಾಗಿ ನಿಂತಿವೆ ಜನರನ್ನು ಹಾಳು ಮಾಡಲಿಕ್ಕೆ , ಕೆಟ್ಟ ಪ್ರವೃತ್ತಿ ಹಿಡಿಯಲು ಪ್ರಚೋದಿಸುವಂತಹ, ಖಾಸಗಿ ವಿಷಯಗಳನ್ನು ಎಳೆದು ಎಳೆದು ತೋರಿಸುವಂತಹ, ಹೆಚ್ಚಿನ ಕಾರ್ಯಕ್ರಮಗಳು ನಮಗೆ ಕಾಣಸಿಗುತ್ತವೆ. ಇವರನ್ನು ಜನರೇ ಸರಿ ದಾರಿಗೆ ತರಬೇಕು

1.ನೀರು 2.ವಸತಿ 3.ವಿದ್ಯುತ್ 4.ಶಿಕ್ಷಣ 5.ಆರೋಗ್ಯ 6.ಉದ್ಯೋಗ 7.ಭ್ರಷ್ಟಾಚಾರ 8.ಮೌಢ್ಯ
9. ಜಾತೀಯತೆ
ಕೆಳವರ್ಗ ಮತ್ತು ಮಧ್ಯಮ ವರ್ಗದವರಿಗೆ ನಿಜವಾಗಿ ಕಾಡುವ 9 ಗ್ರಹಗಳು. ಜ್ಯೋತಿಷಿಗಳು ಹೇಳುವ 9 ಗ್ರಹಗಳಿಂದ ಮನುಷ್ಯನಿಗೆ ಯಾವುದೇ ತೊಂದರೆ ಇಲ್ಲ ಅವು ತಮ್ಮ ಪಾಡಿಗೆ ಸೂರ್ಯನನ್ನು ಸುತ್ತುತ್ತಿವೆ

ಇಷ್ಟೊಂದು ಜನ ಸಂಖ್ಯೆ ಇರುವ ರಾಷ್ಟ್ರದಲ್ಲಿ ಜಾತಿ, ಧರ್ಮ, ಭಾಷೆ, ಆಚರಣೆ ಮತ್ತು ನಂಬಿಕೆಗಳು ಬೇರೆ ಬೇರೆಯಾಗಿದ್ದರೂ ಆಯಾ ಕಾಲಘಟ್ಟದಲ್ಲಿದ್ದ ಸರ್ಕಾರಗಳು ಸಾಧನೆಗಳನ್ನು ಮಾಡಿರುವುದರಿಂದಲೇ ಭಾರತ ಇಂದು ವಿಶ್ವದಲ್ಲಿ ಆರ್ಥಿಕವಾಗಿ ಆರನೇ ದೊಡ್ಡ ದೇಶವಾಗಿದೆ. ಒಂದು ಸರ್ಕಾರ ಮಾಡಿದ ಕೆಲಸಗಳನ್ನು ಟೀಕಿಸುವ ಮೊದಲು, ಅರ್ಹತೆ ಯೋಗ್ಯತೆ ಇದೆಯೇ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ

ಮೇಲಿನ ಒಂಬತ್ತು ಗ್ರಹಗಳನ್ನು ಸರ್ಕಾರಗಳು ಹೇಗೆ ನಿಭಾಯಿಸಿವೆ, ತೆಗೆದುಕೊಂಡ ಕ್ರಮಗಳು ಮತ್ತು ಪರಿಣಾಮಗಳು ಏನೆಂಬುದರ ಬಗ್ಗೆ ಸರ್ಕಾರದ ಹಸ್ತಕ್ಷೇಪ ಇಲ್ಲದಂತಹ ಸಮಿತಿ/ಸಂಸ್ಥೆಯಿಂದ/ ತಜ್ಞರಿಂದ ಮೌಲ್ಯಮಾಪನವಾಗಬೇಕು

ಆ ಮಾಹಿತಿ ಜನರಿಗೆ ಮತ್ತು ಸರ್ಕಾರಕ್ಕೆ ಕೈಗನ್ನಡಿ ಯಾಗಿರಬೇಕು. ಸರಿಯಾಗಿ ಕೆಲಸ ಮಾಡದ ಸರ್ಕಾರಗಳನ್ನು ಅಧಿಕಾರಕ್ಕೆ ತರಬಾರದು. ಜಗತ್ತಿನ ಬಹುತೇಕ ರಾಷ್ಟ್ರಗಳು ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿವೆ ನಾವು ಇನ್ನೂ ಪರಸ್ಪರ ಕೆಸರು ಎರಚಿಕೊಂಡು ಕುಣಿಯುತ್ತಿರುವುದು ಎಷ್ಟು ಸಮಂಜಸ.ಸ್ವಾರ್ಥಕ್ಕಾಗಿ ದೇಶವನ್ನು ಹಾಳು ಮಾಡ ಬಾರದು. ಬಾಬಾ ಸಾಹೇಬರು ಹೇಳಿದ್ದೇ ಬೇರೆ ನಾವು ಮಾಡುತ್ತಿರುವುದೇ ಬೇರೆ. ಈ ದೇಶವನ್ನು ಜಾತಿವಾದಿಗಳ, ಬ್ರಷ್ಟಾಚಾರಿಗಳ , ಕಳ್ಳರ ರೌಡಿಗಳ ಅಯೋಗ್ಯರ ಪಾಲಾಗಲು ಬಿಡಬಾರದು.

:-ಗಣೇಶ್ ಬ್ರಹ್ಮಾವರ :

Leave a Reply

Your email address will not be published. Required fields are marked *