fbpx

ಗ್ರೀನ್ ಟೀ- ಯಾವ ಸಮಯದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?

ಹಸಿರು ಟೀ ಅಥವಾ ಗ್ರೀನ್ ಟೀ ಸೇವನೆಯ ಹಲವಾರು ಪ್ರಯೋಜನಗಳಿಂದಾಗಿ ಇತ್ತೀಚೆಗೆ ಹೆಚ್ಚಿನ ಜನಪ್ರಿಯಗೊಂಡಿದೆ. ಖ್ಯಾತ ಚಲನಚಿಇತ್ರ ತಾರೆಯರಾದ ಕರೀನಾ ಕಪೂರ್, ಅನೂಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೊದಲಾದವರೆಲ್ಲಾ ಹಸಿರು ಟೀ ಸೇವನೆಯನ್ನು ಬಹುವಾಗಿ ಅವಲಂಬಿಸಿದ್ದು ತಮ್ಮ ತೂಕವನ್ನು ಏರದಂತೆ ತಡೆಯಲು ಹಾಗೂ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಟೀ ಸೇವನೆಯ ಪ್ರಯೋಜನಗಳನ್ನು ಪಡೆಯಲು ಇದರ ಸೇವನೆಯ ಸಮಯವೂ ಮುಖ್ಯವಾಗಿದೆ.

ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮವನ್ನು ನಿತ್ಯದ ಅಭ್ಯಾಸವಾಗಿಸಿಕೊಂಡಿರುವ ವ್ಯಕ್ತಿಗಳು ಸಹಾ ಹಸಿರು ಟೀ ಯನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಂಡಿರುವುದಾಗಿ ತಿಳಿಸುತ್ತಾರೆ. ಹಸಿರು ಟೀ ಯಲ್ಲಿ ವಿವಿಧ ಖನಿಜಗಳು, ವಿಟಮಿನ್ನುಗಳು ಸಮೃದ್ಧವಾಗಿದ್ದು ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳನ್ನೂ ಹೊಂದಿದೆ. ಇದರ ಸೇವನೆಯಿಂದ ಹೃದಯರೋಗಗಳ ಸಾಧ್ಯತೆ ಕಡಿಮೆಯಾಗುವ ಜೊತೆಗೇ ಹಲವಾರು ಬಗೆಯ ಕ್ಯಾನ್ಸರ್ ಗಳಿಂದಲೂ ರಕ್ಷಣೆ ಒದಗಿಸುತ್ತದೆ.

ಅಷ್ಟಕ್ಕೂ, ಹಸಿರು ಟೀ ಆರೋಗ್ಯಕ್ಕೆ ಹೇಗೆ ಉತ್ತಮ? ಭಾರತದ ಅತ್ಯಂತ ಜನಪ್ರಿಯ ಪೇಯವಾಗಿರುವ ಟೀ ಹಲವು ಬಗೆಗಳಲ್ಲಿ ದೊರಕುತ್ತದೆ. ಆದರೆ ಹಸಿರು ಟೀ ತಯಾರಿಸುವಾಗ ಇದನ್ನು ಆಮ್ಲಜನೀಕರಣ ಪ್ರಕ್ರಿಯೆಗೆ (oxidation process) ಒಳಗಾಗಿಸದೇ ಇರುವ ಕಾರಣ ಈ ಟೀ ಉಳಿದ ಬಗೆಯ ಟೀಗಳಿಗಿಂತ ಹೆಚ್ಚು ಆರೋಗ್ಯಕರವಾಗಿದೆ. ಕಪ್ಪು ಟೀ ಹಾಗೂ ಇತರ ಬಗೆಯ ಆಯುರ್ವೇದೀಯ ಹಸಿರು ಟೀ ಗಳಿಗಿಂತ ಅಪ್ಪಟ ಹಸಿರು ಟೀ ಆರೋಗ್ಯಕರವಾಗಿದ್ದು ನೂರಾರು ವರ್ಷಗಳಿಂದ ಹಲವಾರು ದೇಶಗಳಲ್ಲಿ ನಿತ್ಯದ ಪೇಯದ ರೂಪದಲ್ಲಿ ಸೇವಿಸುತ್ತಾ ಬರಲಾಗಿದೆ. ಹಸಿರು ಟೀಯಲ್ಲಿರುವ ಪ್ರಬಲ ಗುಣಗಳು ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ಸ್ ಗಳ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಪಾಲಿಫೆನಾಲ್ ಮತ್ತು ಫ್ಲೇವನಾಯ್ಡುಗಳಂತಹ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ವೈರಸ್ ಮೂಲಕ ಎದುರಾಗುವ ಶೀತ ಮತ್ತು ಫ್ಲೂ ಮೊದಲಾದ ಸಾಮಾನ್ಯ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಈ ಆಂಟಿ ಆಕ್ಸಿಡೆಂಟುಗಳು ತ್ವಚೆ ಮತ್ತು ಕೂದಲನ್ನೂ ಆರೋಗ್ಯಕರವಾಗಿರಿಸುತ್ತವೆ.

ಹಾಗಾದರೆ, ಹಸಿರು ಟೀ ಕುಡಿಯಲು ಸೂಕ್ತ ಸಮಯ ಯಾವುದು? ಹಸಿರು ಟೀಯನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಹಸಿರು ಟೀ ಸೇವಿಸಿದರೆ ಕೆಲವಾರು ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ. ವಿಶೇಷವಾಗಿ ಇದರಲ್ಲಿರುವ ಹೆಚ್ಚಿನ ಕೆಫೇನ್ ಯಕೃತ್ ಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಖಾಲಿಹೊಟ್ಟೆಯಲ್ಲಿ ಹಸಿರು ಟೀ ಯಲ್ಲಿರುವಂತಹದ್ದೇ ಹೆಚ್ಚುವರಿ ಆಹಾರಗಳ ಸೇವನೆಯ ಪರಿಣಾಮವನ್ನು ಕಂಡುಕೊಳ್ಳಲು ನಡೆಸಲಾದ ಸಂಶೋಧನೆಯಲ್ಲಿ ಯಕೃತ್ ನ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿರುವುದು ಕಂಡುಬಂದಿದೆ. ಹಸಿರು ಟೀ ಯಲ್ಲಿ ಕ್ಯಾಟೆಚಿನ್ ಗಳೆಂಬ ಪೋಷಕಾಂಶಗಳಿವೆ. ಈ ಕಣಗಳ ಸಾಂದ್ರತೆ ಹೆಚ್ಚಿದರೆ ಯಕೃತ್ ನ ಮೇಲೆ ಹೆಚ್ಚಿನ ಅಪಾಯವುಂಟಾಗುತ್ತದೆ. ಒಂದು ವೇಳೆ ಸಾಂದ್ರತೆ ಒಂದು ಮಟ್ಟ ಮೀರಿದರೆ ಯಕೃತ್ ವೈಫಲ್ಯವೂ ಎದುರಾಗಬಹುದು. ಹಾಗಾಗಿ ಯಕೃತ್ ನ ಕಾರ್ಯಕ್ಷಮತೆ ಹೆಚ್ಚಿರುವ ಸಮಯವಾದ ಬೆಳಗ್ಗಿನ ಹತ್ತರಿಂದ ಹನ್ನೊಂದು ಘಂಟೆಯ ನಡುವೆ ಹಾಗೂ ಸಂಜೆಯಾಗುವುದಕ್ಕಿಂತಲೂ ಮುನ್ನಾ ಸಮಯದಲ್ಲಿ ಕುಡಿಯುವುದು ಉತ್ತಮವಾಗಿದ್ದು ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಎರಡು ಊಟಗಳ ನಡುವಣ ಅವಧಿಯಲ್ಲಿ ಸೇವಿಸಿ ಹಸಿರು ಟೀಯನ್ನು ಎರಡು ಪ್ರಮುಖ ಊಟಗಳ ಮಧ್ಯಂತರ ಅವಧಿಯಲ್ಲಿ ಸೇವಿಸಿ, ಅಂದರೆ ಊಟದ ಬಳಿಕ ಎರಡು ಗಂಟೆಗಳ ಮೊದಲು ಅಥವಾ ನಂತರ ಸೇವಿಸುವುದು ಉತ್ತಮ ಎಂದು ನ್ಯಾಶನಲ್ ಕ್ಯಾನ್ಸರ್ ಅಧ್ಯಯನ ಕೇಂದ್ರ ತಿಳಿಸಿದೆ. ಒಂದು ವೇಳೆ ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ನಿಮಗೆ ಊಟಗಳ ನಡುವಣ ಅವಧಿಯಲ್ಲಿ ಹಸಿರು ಟೀ ಸೇವಿಸುವುದು ಒಳ್ಳೆಯದಲ್ಲ! ನ್ಯಾಷನಲ್ ಕ್ಯಾನ್ಸರ್ ಅಧ್ಯಯನ ಕೇಂದ್ರದ ಪ್ರಕಾರ, ಹಸಿರು ಟೀಯಲ್ಲಿರುವ ಕ್ಯಾಟೆಚಿನ್ ಗಳು ಜೀರ್ಣಕ್ರಿಯೆಯನ್ನು ಬಾಧೆಗೊಳಿಸುತ್ತವೆ ಹಾಗೂ ಆಹಾರದಲ್ಲಿರುವ ಕಬ್ಬಿಣವನ್ನು ದೇಹ ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ.

ವ್ಯಾಯಾಮಕ್ಕೂ ಮುನ್ನ ಸೇವಿಸುವ ಹಸಿರು ಟೀ ವ್ಯಾಯಾಮಕ್ಕೂ ಮುನ್ನ ಹಸಿರು ಟೀ ಸೇವಿಸಿ ವ್ಯಾಯಾಮ ಪ್ರಾರಂಭಿಸಿದರೆ ಇದರಲ್ಲಿರುವ ಕೆಫೀನ್ ದೇಹದಿಂದ ಹೆಚ್ಚಿನ ಕ್ಯಾಲೋರಿಗಳು ಬಳಸಲ್ಪಡಲು ನೆರವಾಗುತ್ತದೆ. ಕೆಫೇನ್ ದೇಹದಲ್ಲಿ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಹಾಗೂ ವ್ಯಾಯಾಮವನ್ನು ಹೆಚ್ಚಿನ ಸಮಯದವರೆಗೆ ಮುಂದುವರೆಸಲು ನೆರವಾಗುತ್ತದೆ.

ಹಸಿರು ಟೀ ರಾತ್ರಿ ಮಲಗುವ ಎರಡು ಗಂಟೆಗಳ ಮುನ್ನ ಸೇವಿಸಿ ಒಂದು ವೇಳೆ ರಾತ್ರಿ ಮಲಗುವ ಮುನ್ನ ಹಸಿರು ಟೀ ಸೇವನೆಯನ್ನು ಪರಿಗಣಿಸುವುದಿದ್ದರೆ ಇದು ರಾತ್ರಿ ಮಲಗುವ ಮುನ್ನ ಕುಡಿಯಬಾರದು! ಏಕೆಂದರೆ ಇದರಲ್ಲಿರುವ ಕೆಫೇನ್ ದೇಹದಲ್ಲಿ ಕೆಲವು ಬಗೆಯ ಪ್ರಚೋದನೆಗಳ ಮೂಲಕ ನಿದ್ದೆಯನ್ನು ಭಂಗಗೊಳಿಸಬಹುದು. ಅಲ್ಲದೇ ಇದರಲ್ಲಿರುವ ಎಲ್-ಥಿಯೋನೈನ್ ಎಂಬ ಅಮೈನೋ ಆಮ್ಲ ಮೆದುಳು ಎಚ್ಚರವಾಗಿರಲು ಹಾಗೂ ಹೆಚ್ಚಿನ ಏಕಾಗ್ರತೆ ಪಡೆಯಲು ಕಾರಣವಾಗುತ್ತವೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಹಸಿರು ಟೀ ಸೇವನೆ ಒಳ್ಳೆಯದಲ್ಲ. ಹಾಗಾಗಿ ಹಸಿರು ಟೀ ಸೇವಿಸಬೇಕೆಂದಿದ್ದರೆ ಮಲಗುವುದಕ್ಕೂ ಕನಿಷ್ಟ ಎರಡು ಘಂಟೆಗೂ ಮುನ್ನ ಸೇವಿಸುವುದು ಉತ್ತಮ.

ದಿನಕ್ಕೆಷ್ಟು ಕಪ್ ಹಸಿರು ಟೀ ಸೇವಿಸಬೇಕು? ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ಪ್ರಕಾರ ದಿನಕ್ಕೆ ಎರಡರಿಂದ ಮೂರು ಕಪ್ ಹಸಿರು ಟೀ (ಸುಮಾರು 100 ರಿಂದ 750 ಮಿಲಿಗ್ರಾಂ ನಷ್ಟು ಹಸಿರು ಟೀ ಯ ಸತ್ವವುಳ್ಳ ಆಹಾರ) ಸೇವಿಸುವ ಮೂಲಕ ಆರೋಗ್ಯ ಉತ್ತಮವಾಗಿರಿಸಬಹುದು. ಒಂದು ವೇಳೆ ಈ ಪ್ರಮಾಣ ಹೆಚ್ಚಿದರೆ ಇದು ದೇಹಕ್ಕೆ ಒಳ್ಳೆಯದು ಮಾಡುವ ಬದಲು ದೇಹದಿಂದ ಅಗತ್ಯ ಪೋಷಕಾಂಶಗಳನ್ನು ನಿವಾರಿಸುವ ಮೂಲಕ ಅನಾರೋಗ್ಯವನ್ನು ಆಹ್ವಾನಿಸಬಹುದು. ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *