ಸೆಕ್ಸ್ ಬಳಿಕ ಒಳಉಡುಪು ಹಾಕಬೇಡಿ! ಇಲ್ಲಾಂದ್ರೆ ಸೋಂಕು ಮತ್ತು ತುರಿಕೆ ಕಾಡಬಹುದು.

ನಾಲ್ಕು ಗೋಡೆಗಳ ಮಧ್ಯೆ ಕಂಬಳಿಯೊಳಗಡೆ ಏನು ನಡೆಯುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದರೆ ಸೆಕ್ಸ್ ಬಗ್ಗೆ ಸ್ವಲ್ಪ ಮೆತ್ತಗೆ ಮಾತನಾಡುವಂತಹ ಸುಸಂಸ್ಕೃತವಾಗಿರುವ ನಮ್ಮ ದೇಶದಲ್ಲಿ ಕೆಲವೊಂದು ಕಾರಣಗಳಿಂದಾಗಿ ಲೈಂಗಿಕ ರೋಗಗಳು ಬರುತ್ತಲೇ ಇರುವುದು.

ಇದಕ್ಕೆ ಸೂಕ್ತ ಲೈಂಗಿಕ ಶಿಕ್ಷಣವೂ ಕಾರಣವಾಗಿದೆ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಸೆಕ್ಸ್ ಬಳಿಕ ಮಹಿಳೆಯರು ಅನುಸರಿಸಲೇಬೇಕಾದ ಕೆಲವೊಂದು ಕ್ರಮಗಳನ್ನು ತಿಳಿಸಿಕೊಡಲಿದೆ. ಇದನ್ನು ನೀವು ಅನುಸರಿಸಿಕೊಂಡು ಹೋದರೆ ನಿಮ್ಮ ಲೈಂಗಿಕ ಆರೋಗ್ಯವು ಚೆನ್ನಾಗಿರುವುದು. ಆ ಕ್ರಮಗಳು ಯಾವುದು ಎಂದು ನೀವು ಈ ಲೇಖನವನ್ನು ಮುಂದೆ ಓದುತ್ತಾ ತಿಳಿಯಬಹುದು.

ಒಳಉಡುಪು ತೆಗೆಯಿರಿ ಲೈಂಗಿಕ ಕ್ರಿಯೆ ಬಳಿಕ ನೀವು ಬಳಲಿರುವಿರಿ ಮತ್ತು ವಿಶ್ರಾಂತಿ ಬಯಸುವಿರಿ. ಈ ವೇಳೆ ನೀವು ಒಳಉಡುಪನ್ನು ತೆಗೆಯಿರಿ. ನಿಮ್ಮ ಯೋನಿಯು ಉಸಿರಾಡುವಂತೆ ಆಗಲು ದೊಡ್ಡ ಒಳಚಡ್ಡಿ ಧರಿಸಿ ಅಥವಾ ಹಾಗೆ ಬಿಡಿ. ಯೋನಿಯು ಕಠಿಣ ಕೆಲಸ ಮಾಡಿರುವ ಕಾರಣದಿಂದಾಗಿ ನೀವು ಅದಕ್ಕೆ ಉಸಿರಾಡಿ ಆರಾಮ ನೀಡಬೇಕು. ಹೀಗೆ ಮಾಡುವುದರಿಂದ ಸೋಂಕು, ಶಿಲೀಂಧ್ರ ಸೋಂಕು ಮತ್ತು ತುರಿಕೆ ನಿವಾರಣೆಯಾಗುವುದು.

ಶೌಚಾಲಯಕ್ಕೆ ಹೋಗಿ ನಿಮ್ಮ ಮೂತ್ರಕೋಶವು ತುಂಬಿದ್ದರೆ ಆಗ ನೀವು ಆದಷ್ಟು ಬೇಗ ಮೂತ್ರವಿಸರ್ಜನೆ ಮಾಡಬೇಕು. ಯಾಕೆಂದರೆ ನಿಮ್ಮ ಮೂತ್ರ ವಿಸರ್ಜನಾ ನಾಳದಲ್ಲಿರುವಂತಹ ಬ್ಯಾಕ್ಟೀರಿಯಾವನ್ನು ಇದು ಹೊರಹಾಕುವುದು ಎಂದು ಡಾ. ಟೂಗುಡ್ ಹೇಳಿದ್ದಾರೆ. ಯೋನಿಯಲ್ಲಿ ಬ್ಯಾಕ್ಟೀರಿಯಾವು ನೆಲೆನಿಂತರೆ ಆಗ ಯುಟಿಐ ಬರುವುದು. ಲೈಂಗಿಕ ಚಟುವಟಿಕೆ ವೇಳೆ ಮೂತ್ರವಿಸರ್ಜನಾ ನಾಳವನ್ನು ಕರುಳು ಮುಂದಕ್ಕೆ ದೂಡುವುದು. ಹಲವಾರು ಮಹಿಳೆಯರಲ್ಲಿ ಇರುವಂತಹ ಯುಟಿಐ ಸಮಸ್ಯೆಯು ನಿಮ್ಮಲ್ಲಿ ಇದ್ದರೆ ಆಗ ಸೆಕ್ಸ್ ಗೆ ಮೊದಲು ಮೂತ್ರವಿಸರ್ಜನೆ ಮಾಡುವುದು ಅತೀ ಅಗತ್ಯ. ಅದೃಷ್ಟದಿಂದ ಇಂತಹ ಸಮಸ್ಯೆಯು ನಿಮ್ಮಲ್ಲಿ ಇಲ್ಲದೆ ಇದ್ದರೆ ಆಗ ನೀವು ಸೆಕ್ಸ್ ಬಳಿಕ ಶೌಚಾಲಯಕ್ಕೆ ಹೋಗಿ ಮೂತ್ರವಿಸರ್ಜನೆ ಮಾಡುವುದನ್ನು ಮರೆಯಬೇಡಿ. ಯುಟಿಐನ ಕೆಲವೊಂದು ಸಮಸ್ಯೆಗಳಾಗಿರುವ ನೋವು ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದಕ್ಕಿಂತ ನೀವು ಮುಂಜಾಗ್ರತೆ ತೆಗೆದುಕೊಂಡು ಸೆಕ್ಸ್ ಬಳಿಕ ಎರಡು ನಿಮಿಷ ಕಾಲ ಶೌಚಾಲಯಕ್ಕೆ ಹೋಗಿ ಬನ್ನಿ.

ಕೆಳಗಡೆ ಟವೆಲ್ ಇಟ್ಟುಕೊಳ್ಳಿ ಸೆಕ್ಸ್ ಅಂದರೆ ಅದೊಂದು ರೀತಿಯ ಕೊಳಚೆ ಎಂದರೂ ತಪ್ಪಾಗದು. ಯಾಕೆಂದರೆ ವೀರ್ಯ, ಬೆವರು, ಲ್ಯೂಬ್ರಿಕೆಂಟ್ ಮತ್ತು ಯೋನಿಯ ದ್ರವವು ಮಹಿಳೆಯ ಮೇಲೆ ಮತ್ತು ಹಾಸಿಗೆ ಮೇಲೆ ಬೀಳಬಹುದು. ಆದರೆ ಈವು ಒಂದು ಟವೆಲ್ ಅಥವಾ ಟಾಯ್ಲೆಟ್ ಪೇಪರ್ ನ್ನು ಇಟ್ಟುಕೊಂಡು ಒದ್ದೆಯಾಗದಂತೆ ನೋಡಬಹುದು. ಒದ್ದೆಯಾಗಿರುವ ಸ್ಥಳದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಬೆಳವಣಿಗೆಯಾಗುವುದು. ಒಣಗಿಸದೆ ಇದ್ದರೆ ಆಗ ಶಿಲೀಂಧ್ರ ಸೋಂಕಿಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿರುವುದು ಎಂದು ವೈದ್ಯರು ತಿಳಿಸುತ್ತಾರೆ.

ಕೆಳಗಡೆ ಟವೆಲ್ ಇಟ್ಟುಕೊಳ್ಳಿ ಸೆಕ್ಸ್ ಅಂದರೆ ಅದೊಂದು ರೀತಿಯ ಕೊಳಚೆ ಎಂದರೂ ತಪ್ಪಾಗದು. ಯಾಕೆಂದರೆ ವೀರ್ಯ, ಬೆವರು, ಲ್ಯೂಬ್ರಿಕೆಂಟ್ ಮತ್ತು ಯೋನಿಯ ದ್ರವವು ಮಹಿಳೆಯ ಮೇಲೆ ಮತ್ತು ಹಾಸಿಗೆ ಮೇಲೆ ಬೀಳಬಹುದು. ಆದರೆ ಈವು ಒಂದು ಟವೆಲ್ ಅಥವಾ ಟಾಯ್ಲೆಟ್ ಪೇಪರ್ ನ್ನು ಇಟ್ಟುಕೊಂಡು ಒದ್ದೆಯಾಗದಂತೆ ನೋಡಬಹುದು. ಒದ್ದೆಯಾಗಿರುವ ಸ್ಥಳದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಬೆಳವಣಿಗೆಯಾಗುವುದು. ಒಣಗಿಸದೆ ಇದ್ದರೆ ಆಗ ಶಿಲೀಂಧ್ರ ಸೋಂಕಿಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿರುವುದು ಎಂದು ವೈದ್ಯರು ತಿಳಿಸುತ್ತಾರೆ.

ಮೂತ್ರವಿಸರ್ಜನೆ

ಲೈಂಗಿಕ ಕ್ರಿಯೆ ಬಳಿಕ ನೀವು ಮತ್ತೆ ಹಾಸಿಗೆ ಮೇಲೆ ಮಲಗುವುದನ್ನು ಬಿಟ್ಟು ನೇರವಾಗಿ ಶೌಚಾಲಯಕ್ಕೆ ಹೋಗಿ. ನಿಮಗೆ ಮೂತ್ರವಿಸರ್ಜನೆ ಮಾಡಲು ಮನಸ್ಸು ಇಲ್ಲದೆ ಇದ್ದರೂ ನೀವು ಮೂತ್ರನಾಳವನ್ನು ಖಾಲಿ ಮಾಡಬೇಕು. ಇದರಿಂದ ಮೂತ್ರನಾಳದ ಬ್ಯಾಕ್ಟೀರಿಯಾ ಹೋಗುವುದು. ಮೂತ್ರನಾಳದ ಸೋಂಕಿಗೆ ಒಳಗಾಗಿದ್ದರೆ ಆಗ ಇದನ್ನು ನೀವು ಪಾಲಿಸಲೇಬೇಕು.

ಟವೆಲ್ ಅಥವಾ ಟಾಯ್ಲೆಟ್ ಪೇಪರ್ ಬಳಸಿ

ಲೈಂಗಿಕ ಕ್ರಿಯೆ ಬಳಿಕ ನೀವು ಒಣಗಿಸಿಕೊಳ್ಳಿ. ಯಾಕೆಂದರೆ ಸೆಕ್ಸ್ ಬಳಿಕ ಹಾಸಿಗೆಯಲ್ಲಿ ದ್ರವವು ಚೆಲ್ಲಿರುವುದು. ನೀವು ಯೋನಿಯನ್ನು ಸ್ವಚ್ಛಗೊಳಿಸುವುದು ಅತೀ ಅಗತ್ಯ. ಟವೆಲ್ ಅಥವಾ ಟಾಯ್ಲೆಟ್ ಪೇಪರ್ ಬಳಸಿಕೊಂಡು ಹೆಚ್ಚು ಗಡಸುತನವಿಲ್ಲದೆ ಒರೆಸಿಕೊಳ್ಳಿ. ಇನ್ನು ಹೆಚ್ಚು ಬೇಕಿದ್ದರೆ ನೀವು ಸುಗಂಧಿತವಲ್ಲದೆ ಇರುವ ಸೋಪ್ ಬಳಸಿಕೊಂಡು ತೊಳೆಯಬಹುದು.

ಋತುಬಂಧಕ್ಕೆ ಒಳಗಾಗುತ್ತಿದ್ದೀರಾ?

ನೀವು ಋತುಬಂಧಕ್ಕೆ ಒಳಗಾಗುತ್ತಲಿದ್ದರೆ ಅಥವಾ ಈಗಾಗಲೇ ಋತುಬಂಧಕ್ಕೆ ಒಳಗಾಗಿದ್ದರೆ ಆಗ ನಿಮ್ಮ ಯೋನಿಯು ತುರಿಕೆ, ಕಿರಿಕಿರಿ ಮತ್ತು ಚರ್ಮದ ಸೋಂಕಿಗೆ ಒಳಗಾಗುವುದು ಸಾಮಾನ್ಯ. ಮೇಲಿನ ಎಲ್ಲಾ ಕ್ರಮಗಳನ್ನು ನೀವು ಶಿಸ್ತುಬದ್ಧವಾಗಿ ಪಾಲಿಸಿಕೊಂಡು ಹೋದರೆ ಆಗ ಸೋಂಕು ಬರುವುದನ್ನು ತಡೆಯಬಹುದು ಮತ್ತು ಒಳ್ಳೆಯ ಲೈಂಗಿಕ ಜೀವನ ಕಾಪಾಡಬಹುದು.

ಆರೋಗ್ಯಕರ ಯೋನಿಯು ರೋಗಗಳನ್ನು ತಡೆಯುವುದು

ಯೋನಿಯ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದು ಅತೀ ಅಗತ್ಯವಾಗಿರುವುದು. ಯಾಕೆಂದರೆ ಯೋನಿಯು ಆರೋಗ್ಯವಾಗಿ, ಅದರ ಸ್ವಚ್ಛತೆ ಹಾಗೂ ಆರೈಕೆ ಮಾಡಿದರೆ ಹಲವಾರು ರೀತಿಯ ಕಾಯಿಲೆಗಳಾಗಿರುವ ಮೂತ್ರನಾಳದ ಸೋಂಕು ಮತ್ತು ಶಿಲೀಂಧ್ರ ಸೋಂಕು ತಡೆಯಬಹುದು. ತುರಿಕೆ, ಉರಿ ಮತ್ತು ವಾಸನೆ ಕಂಡುಬಂದರೆ ಇದನ್ನು ಕಡೆಗಣಿಸದೆ ನೀವು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

Leave a Reply

Your email address will not be published. Required fields are marked *