ಸಣ್ಣ-ಪುಟ್ಟ ವಿಷಯಕ್ಕೆ ಅಳುವಂತಹ ವ್ಯಕ್ತಿಗಳಲ್ಲಿರುವ ಐದು ಗುಣಗಳು!

ಯಾವುದೇ ಪರಿಸ್ಥಿತಿಯಲ್ಲಿ ಅತ್ತರೆ ಆಗ ನೀವು ತುಂಬಾ ತುಂಬಾ ದುರ್ಬಲ ಮನಸ್ಸಿನವರು ಎನ್ನುವ ಪಟ್ಟವನ್ನು ಕಟ್ಟಿಬಿಡುವರು. ನೀವು ಎಷ್ಟೇ ಜನಪ್ರಿಯ ಅಥವಾ ಸಾಮಾನ್ಯ ವ್ಯಕ್ತಿಯಾಗಿದ್ದರೂ ಅಳುವುದಕ್ಕೆ ಮಾತ್ರ ಅಘೋಷಿತ ನಿರ್ಬಂಧವಿದೆ! ರಾಜ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ್ದಾರೆ.

ಆದರೆ ಅವರನ್ನು ದುರ್ಬಲರು ಎಂದು ಹೇಳಲು ಆಗಲ್ಲ. ಯಾಕೆಂದರೆ ಭಾವನಾತ್ಮಕವಾಗಿ ಕೆಲವೊಂದು ಸಲ ಕಣ್ಣೀರು ಬಂದೇ ಬರುವುದು. ಅಂತಹ ಕಲ್ಲು ಮನಸ್ಸಿನವರಿಗೆ ಮಾತ್ರ ಅಳು ಬರುವುದಿಲ್ಲವೆಂದು ಹೇಳಬಹುದು. ಅಳುವಂತಹ ಜನರು ಬೇರೆಯವರಿಗಿಂತ ಹೆಚ್ಚು ಭಾವನಾತ್ಮಕವಾಗಿ ಸುಸಜ್ಜಿತರಾಗಿರುವರು ಎಂದು ಹೇಳಲಾಗುತ್ತದೆ. ಅಳುವಂತಹ ವ್ಯಕ್ತಿಗಳಲ್ಲಿ ಇರುವಂತಹ ಐದು ಗುಣಗಳನ್ನು ನಾವಿಲ್ಲಿ ನಿಮ್ಮ ಮುಂದಿಟ್ಟಿದ್ದೇವೆ.

ಇವರ ಒತ್ತಡದ ಅಂಕವು ಕಡಿಮೆಯಾಗಿರುವುದು

ಒತ್ತಡದಿಂದ ಹೊರಬರಲು ಅಳುವುದು ಅತ್ಯುತ್ತಮ ವಿಧಾನವಾಗಿದೆ. ಅತ್ಯಂತ ವ್ಯಸ್ತ ವೇಳಾಪಟ್ಟಿಗಳು ಮತ್ತು ಕೆಲವೊಂದು ಗುರಿಗಳಿಂದ ಅತಿಯಾದ ಒತ್ತಡ ಬೀರುವುದು. ನೀವು ಅಳುವುದನ್ನು ತಡೆದುಕೊಂಡರೆ ಆಗ ದೇಹದಲ್ಲಿ ಆಯಾಸ ಹಾಗೂ ನಕಾರಾತ್ಮಕತೆಯು ತುಂಬುವುದು. ಇದರಿಂದಾಗಿ ನಿಮಗೆ ಜೀವನವಿಡಿ ಜತೆಗೆ ಕೊಂಡೊಹೋಗಬಹುದಾದ ಹೃದಯದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಬರಬಹುದು. ಇದರ ಬದಲಿಗೆ ಅಳುವುದು ಒಳ್ಳೆಯದಲ್ಲವೇ?

ದುರ್ಬಲರೆಂದು ಕರೆಸಿಕೊಳ್ಳಲು ಹಿಂಜರಿಯಲ್ಲ

ಇಂತಹ ವ್ಯಕ್ತಿಗಳು ತಮ್ಮನ್ನು ದುರ್ಬಲರೆಂದು ಕರೆಸಿಕೊಳ್ಳಲು ಯಾವುದೇ ರೀತಿಯ ಹಿಂಜರಿಕೆ ಮಾಡಲ್ಲ. ನಾವೆಲ್ಲರೂ ದುರ್ಬಲರು ಅಥವಾ ಮುಕ್ತವಾಗಿ ವ್ಯಕ್ತಪಡಿಸಲು ತುಂಬಾ ಹೆದರುತ್ತಿರುತ್ತೇವೆ. ಆದರೆ ಬೇರೆಯವರ ಮುಂದೆ ಅಳುವವರು ಖಂಡಿತವಾಗಿಯೂ ಇಂತಹ ಭೀತಿ ಹೊಂದಿರಲ್ಲ. ಅತಿಯಾಗಿ ದುರ್ಬಲರಾಗುವುದು ಕೆಟ್ಟದು. ಆದರೆ ದುರ್ಬಲರೆಂದು ಪರಿಗಣಿಸದೆ ಇರುವುದು ಒಳ್ಳೆಯ ವಿಚಾರ. ತಮ್ಮ ಬಗ್ಗೆ ಏನು ತೀರ್ಪು ನೀಡುತ್ತಾರೆ ಎನ್ನುವ ಬಗ್ಗೆ ಲೆಕ್ಕಿಸದೆ ಇರುವಂತಹ ಬಲವು ಇರುವುದು.

ಇವರ ಭಾವನಾತ್ಮಕ ಬುದ್ಧಿವಂತಿಕೆ ಇತರರಿಗಿಂತ ಉತ್ತಮ

ಭಾವನಾತ್ಮಕ ಬುದ್ಧಿವಂತಿಕೆ ಅಥವಾ ಭಾವನಾತ್ಮಕ ಅಂಶ(ಈಕ್ಯೂ) ಇಂದಿನ ದಿನಗಳಲ್ಲಿ ತುಂಬಾ ಮುಖ್ಯ ತುಲನಾತ್ಮಕ ನಿಯತಾಂಕವಾಗಿದೆ. ನೀವು ಅಳುತ್ತಲಿದ್ದರೆ ಆಗ ನೀವು ಅಳದೆ ಇರುವವರಿಗಿಂತ ಹೆಚ್ಚಿನ ಭಾವನಾತ್ಮಕ ಬುದ್ಧಿವಂತೆ ಹೊಂದಿದವರು. ಇದರರ್ಥ ನೀವು ಭಾವನೆಗಳೊಂದಿಗೆ ಸಂಪರ್ಕದಲ್ಲಿದ್ದೀರಿ, ಅವುಗಳಿಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿದ್ದೀರಿ ಎಂದಾಗಿದೆ. ಅದುಮಿಟ್ಟುಕೊಂಡಿರುವ ಭಾವನೆಗಳಿಗೆ ಜಾಗ ಬಿಟ್ಟುಕೊಡಲ್ಲ.

ಇವರು ಒಳ್ಳೆಯ ಸ್ನೇಹಿತರು

ಸ್ನೇಹ ಎನ್ನುವುದು ತುಂಬಾ ಭಾವನಾತ್ಮಕವಾಗಿರುವಂತಹ ಸಂಬಂಧವಾಗಿದೆ. ಇಲ್ಲಿ ಮುಖ್ಯವಾಗಿ ಭಾವನೆಗಳನ್ನು ವ್ಯಕ್ತಪಡಿಸಬೇಕಾಗುತ್ತದೆ. ಯಾಕೆಂದರೆ ಅಳುವವರ ಭಾವನಾತ್ಮಕ ನಿಯತಾಂಕವು ಉತ್ತಮವಾಗಿರುವ ಕಾರಣದಿಂದಾಗಿ ಅವರು ಭಾವನೆಗಳಿಂದ ಬೇರೆಯವರನ್ನು ಬಂಧಿಯಾಗಿಸುವರು. ಬೇರೆಯವರ ಭಾವನೆಗಳನ್ನು ಬೇಗನೆ ಗ್ರಹಿಸಬಲ್ಲರು.

ಸಮಾಜದ ನಿರೀಕ್ಷೆಗಳ ಬಗ್ಗೆ ಕ್ಯಾರ್ ಮಾಡಲ್ಲ

ಸಾರ್ವಜನಿಕವಾಗಿ ಅಳುವುದು ದೊಡ್ಡ ತಪ್ಪು ಎಂದು ಪರಿಗಣಿಸಲಾಗುವುದು. ಅದರಲ್ಲೂ ಪುರುಷರು ಅತ್ತರೆ ಹೇಳುವುದೇ ಬೇಡ. ಈಗಲೂ ನಾವು ಲಿಂಗಭೇದ ಮಾಡುತ್ತಿದ್ದೇವೆ ಮತ್ತು ಅಳುವುದು ಕೇವಲ ಮಹಿಳೆಯರ ಹಕ್ಕು ಎಂದು ಪರಿಗಣಿಸಿದ್ದೇವೆ. ಪುರುಷನು ಅಳುತ್ತಲಿದ್ದರೆ ಆಗ ಆತನು ಬೇರೆಯವರಿಗಿಂತ ಒಳ್ಳೆಯ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸುತ್ತಿದ್ದಾನೆ ಎಂದು ಹೇಳಬಹುದು.

ಗೆರೆ ಎಳೆಯಿರಿ

ಆದರೆ ಅತಿಯಾಗಿ ಅಳುವುದು ಕೂಡ ಒಳ್ಳೆಯದು ಅಲ್ಲವೆಂದು ಪರಿಗಣಿಸಲಾಗಿದೆ. ನೀವು ಪದೇ ಪದೇ ಸಣ್ಣ ವಿಚಾರಕ್ಕೂ ಅಳುತ್ತಲಿದ್ದರೆ ಆಗ ಇದು ಗಂಭೀರ ಸಮಸ್ಯೆಯ ಸೂಚನೆಯಾಗಿದೆ. ನೀವು ಸಣ್ಣ ವಿಚಾರಕ್ಕೂ ಅಳುತ್ತಲಿದ್ದರೆ ಆಗ ತಜ್ಞರ ಸಲಹೆ ಪಡೆಯುವುದು ಅತೀ ಅಗತ್ಯ. ಇನ್ನೊಂದು ವಿಷಯ ಏನೆಂದರೆ, ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವ ಹಾಗೇ ತುಂಬಾ ಬೇಸರವಾದಾಗ, ದುಃಖವಾದಾಗ ಕಣ್ಣೀರು ಸುರಿಯುವುದು ಇದೆ. ಕೆಲವೊಮ್ಮೆ ಹೆಚ್ಚು ಸಂತೋಷವಾದಾಗಲೂ ಕಣ್ಣೀರು ಬರುವುದಿದೆ. ಇದನ್ನು ಆನಂದ ಬಾಷ್ಪವೆನ್ನುತ್ತಾರೆ. ಮನಸ್ಸಿನಲ್ಲಿರುವ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗದೆ ಇರುವಾಗ ಅದು ಕಣ್ಣೀರಿನ ರೂಪದಲ್ಲಿ ಹೊರಬರುತ್ತದೆ. ಅಳುವುದನ್ನು ನಕಾರಾತ್ಮಕವೆಂದು ಬಿಂಬಿಸಲಾಗಿದೆ. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ನಿಮಗೆ ತಿಳಿದಿದೆಯಾ? ಹೌದು, ಅಳುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆಯಂತೆ! ಅಚ್ಚರಿಯಾಯಿತೇ? ಹಾಗಾದರೆ ಮುಂದೆ ಓದಿ…

ಒತ್ತಡ ಕಡಿಮೆ ಮಾಡುವುದು

ಮನಸ್ಸು ಹೋರಾಟ ಹಾಗೂ ಹಾರಾಟದ ಮಧ್ಯೆ ಗೊಂದಲದಲ್ಲಿ ಸಿಲುಕಿದ್ದಾಗ ಬರುವಂತಹ ಅಳು ದೈಹಿಕ ಹಾಗೂ ಮಾನಸಿಕವಾಗಿ ನಮ್ಮನ್ನು ಸಹಜ ಸ್ಥಿತಿಗೆ ತರುತ್ತದೆ. ಇದರಿಂದ ನಮಗೆ ಒತ್ತಡದಿಂದ ಸ್ವಲ್ಪ ವಿರಾಮ ಸಿಗುವುದು ಎಂದು ವೈಜ್ಞಾನಿಕ ಅಧ್ಯಯನಗಳು ಹೇಳಿವೆ.

ದೇಹವನ್ನು ನಿರ್ವಿಷಗೊಳಿಸುವುದು

ಕೆಲವೊಂದು ಸಂಶೋಧನೆಗಳ ಪ್ರಕಾರ ಭಾವನಾತ್ಮಕವಾಗಿ ಬರುವಂತಹ ಕಣ್ಣೀರಿನಲ್ಲಿ ಕೆಲವೊಂದು ವಿಷಕಾರಿ ಅಂಶಗಳು ಇರುತ್ತದೆ. ಇದು ದೇಹದಲ್ಲಿರುವ ಒತ್ತಡದ ಹಾರ್ಮೋನುಗಳ ಸಹ ಉತ್ಪನ್ನವಾಗಿದೆ. ಇದರಿಂದ ಅಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.

ನೈಸರ್ಗಿಕವಾಗಿ ಶುದ್ಧೀಕರಿಸುವುದು

ಭಾವನಾತ್ಮಕವಾಗಿ ಬರುವಂತಹ ಕಣ್ಣೀರಿನಲ್ಲಿ ಲೈಸೋಝೈಂ ಎನ್ನುವಂತಹ ಕಿಣ್ವವಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೈಸರ್ಗಿಕ ಶುದ್ಧೀಕರಣವಾಗಿ ಕೆಲಸ ಮಾಡುತ್ತವೆ.

ಒಣ ಕಣ್ಣುಗಳ ಚಿಕಿತ್ಸೆ

ಅಳುವ ಮತ್ತೊಂದು ಆರೋಗ್ಯ ಲಾಭವೆಂದರೆ ಅದು ಕಣ್ಣಿಗೆ ತೇವಾಂಶವನ್ನು ನೀಡುತ್ತದೆ. ಅಳುವುದರಿಂದ ಕಣ್ಣು ಒಣಗುವುದು, ಕೆಂಪಾಗುವುದು ಮತ್ತು ತುರಿಕೆಯನ್ನು ತಡೆಯುವುದು

ಮನಸ್ಥಿತಿ ಸುಧಾರಣೆ

ಅಳುವುದರಿಂದ ಮೆದುಳಿನಲ್ಲಿ ಉತ್ಪತ್ತಿಯಾಗುವಂತಹ ಎಂಡೋರ್ಫಿನ್ ಅಥವಾ ಉತ್ತಮ ಭಾವನೆಯ ಹಾರ್ಮೋನುಗಳು ಮನಸ್ಸನ್ನು ಹಗುರಗೊಳಿಸಿ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಖಿನ್ನತೆ ನಿವಾರಣೆ ಅಳುವ ಮತ್ತೊಂದು ಆರೋಗ್ಯ ಲಾಭವೆಂದರೆ ಇದರಿಂದ ಖಿನ್ನತೆಯನ್ನು ನಿವಾರಿಸಬಹುದು. ಅಳುವುದರಿಂದ ನಕಾರಾತ್ಮಕ ಭಾವನೆಗಳು ಹೊರಹೋಗುವುದರಿಂದ ವ್ಯಕ್ತಿಗೆ ಮಾನಸಿಕವಾಗಿ ಪರಿಹಾರ ಸಿಗುವುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ದೃಷ್ಟಿ ಸುಧಾರಿಸುತ್ತದೆ ಕಣ್ಣೀರು ನಿಮ್ಮ ದೃಷ್ಟಿಯನ್ನು ಸುಧಾರಿಸಲು ನೆರವಾಗುತ್ತದೆ. ಕೆಲವೊಮ್ಮೆ ಕಣ್ಣಿನ ನಿರ್ಜಲೀಕರಣವಾದ ಪೊರೆಗಳಿಂದಾಗಿ ದೃಷ್ಟಿ ಸ್ವಲ್ಪ ಮಂದವಾದಂತಾಗಬಹುದು. ನೀವು ಅತ್ತಾಗ ಕಣ್ಣೀರು ಪೊರೆಗಳಿಗೆ ನೀರನ್ನು ಒದಗಿಸುತ್ತದೆ ಮತ್ತು ಇದರಿಂದ ಸಂಪೂರ್ಣ ದೃಷ್ಟಿ ಸುಧಾರಿಸಲು ನೆರವಾಗುತ್ತದೆ.

ಕಣ್ಣನ್ನು ಶುಭ್ರಗೊಳಿಸುತ್ತದೆ ದೇಹದ ಇತರ ಭಾಗಗಳಂತೆ ಕಣ್ಣಿನಲ್ಲಿಯೂ ಬ್ಯಾಕ್ಟೀರಿಯಾ ಕಂಡುಬರುತ್ತದೆ. ಕಣ್ಣೀರು ಎನ್ನುವುದು ನೈಸರ್ಗಿಕ ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಕಣ್ಣೀರಿನಲ್ಲಿ ಲಿಸೊಝೊಮ್ ಎನ್ನುವ ದ್ರವವಿದ್ದು, ಇದು ಕಣ್ಣಿನಲ್ಲಿರುವ ಶೇ. 90ರಿಂದ 95ರಷ್ಟು ಬ್ಯಾಕ್ಟೀರಿಯಾಗಳನ್ನು ಕೇವಲ ಐದು ನಿಮಿಷದಲ್ಲಿ ಕೊಲ್ಲುತ್ತದೆ.

ಒತ್ತಡದಿಂದ ಮುಕ್ತಿ ಆಘಾತ ಅಥವಾ ಒತ್ತಡಕ್ಕೊಳಗಾದಾಗ ದೇಹದಲ್ಲಿ ಅಸಮತೋಲನ ಮತ್ತು ರಾಸಾಯನಿಕ ಜಮಾವಣೆಯಾಗುತ್ತದೆ. ಇದನ್ನು ಕಡಿಮೆ ಮಾಡಲು ಕಣ್ಣೀರು ನೆರವಾಗುತ್ತದೆ. ಒತ್ತಡದ ಪರಿಸ್ಥಿತಿಯಲ್ಲಿ ಅಳುವ ವ್ಯಕ್ತಿಯ ಖಿನ್ನತೆ ಮಟ್ಟ ಕಡಿಮೆಯಿರುತ್ತದೆ ಎಂದು ಹೇಳಲಾಗುತ್ತಿದೆ. ಭಾವನಾತ್ಮಕ ಕಣ್ಣೀರಿನಿಂದ ಆಂಡ್ರೆನೊಕೊರ್ಟಿಕೊಟ್ರೊಪಿಕ್ ಮತ್ತು ಲ್ಯೂಸಿನ್ ಎನ್ಕೆಫಾಲಿನ್ ನಂತಹ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ದೇಹದಲ್ಲಿನ ಒತ್ತಡ ನಿವಾರಿಸುತ್ತದೆ.

ಸಂಪೂರ್ಣ ಆರೋಗ್ಯಕ್ಕಾಗಿ ರೋದಿಸಿ! ಭಾವನಾತ್ಮಕ ಕಾರಣಗಳಿಂದ ಬಿಡುಗಡೆಯಾಗುವ ಕಣ್ಣೀರಿನಲ್ಲಿ ಶೇ. 24ರಷ್ಟು ಆಲ್ಬುಮಿನ್ ಪ್ರೊಟೀನ್ ಒಳಗೊಂಡಿರುತ್ತದೆ. ಇದು ದೇಹದ ಚಯಾಪಚಯ ವ್ಯವಸ್ಥೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತಿಯಾದ ಒತ್ತಡದಿಂದ ಬರುವಂತಹ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹ ರೋಗ ವಿರುದ್ಧ ಹೋರಾಡಲು ಅಳು ನೆರವಾಗುತ್ತದೆ.

Leave a Reply

Your email address will not be published. Required fields are marked *