ಶಿಶುಗಳಿಗೆ ಬರುವ ಕಂಜಕ್ಟಿವಿಟೀಸ್ (ಪಿಂಕ್ ಐ) ಕಣ್ಣು ಬೇನೆಗೆ ಪರಿಣಾಮಕಾರಿ ಮನೆಮದ್ದುಗಳು.

ಕಂಜಕ್ಟಿವಿಟೀಸ್ ಅಥವಾ ಪಿಂಕ್ ಐ (ಕಣ್ಣು ಕೆಂಪಗಾಗುವ ಮದ್ರಾಸ್ ಐ) ಎಂದು ರೂಢಿಯಲ್ಲಿ ಕರೆಯಲಾಗುವ ಕಣ್ಣು ಬೇನೆ ಶಿಶುಗಳು ಹಾಗೂ ಚಿಕ್ಕ ಮಕ್ಕಳಿಗೆ ಬರುವುದು ಅಸಹಜವೇನಲ್ಲ. ಕಂಜಕ್ಟಿವಾದಲ್ಲಿನ ಉರಿಯೂತದಿಂದ ಈ ಬೇನೆ ಬರುತ್ತದೆ. ಕಂಜಕ್ಟಿವಾ ಇದು ಕಣ್ಣು ಗುಡ್ಡೆಯ ಬಿಳಿ ಭಾಗ ಮತ್ತು ರೆಪ್ಪೆಗಳ ಮಧ್ಯೆ ಇರುವ ಅತಿ ತೆಳುವಾದ ಪದರಾಗಿದೆ. ಈ ಪರದೆಗೆ ಸೋಂಕು ತಗುಲಿದಾಗ ಉರಿಯೂತದಿಂದ ರಕ್ತನಾಳಗಳು ಹೆಚ್ಚು ಕೆಂಪಾಗುತ್ತವೆ. ಇದೇ ಕಾರಣದಿಂದ ಕಣ್ಣು ಕೆಂಪಾಗಿ ಅಥವಾ ಗುಲಾಬಿಯಾಗಿ ಕಾಣತೊಡಗುತ್ತವೆ. ಈ ಸ್ಥಿತಿಯನ್ನು ಕಂಜಕ್ಟಿವಿಟೀಸ್ ಎಂದು ಕರೆಯಲಾಗುತ್ತದೆ.

ಯಾವುದಾದರೂ ಉರಿ ಬರಿಸುವ ವಸ್ತು, ಸೋಂಕು ಅಥವಾ ಅಲರ್ಜಿಯಿಂದ ಕಂಜಕ್ಟಿವಾದಲ್ಲಿ ಉರಿಯೂತ ಉಂಟಾಗಬಹುದು. ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದ ಬರುವ ಪಿಂಕ್ ಐ ಬೇನೆ ಸಾಂಕ್ರಾಮಿಕವಾಗಿದೆ. ಹೀಗಾಗಿ ಈ ಬೇನೆ ಇತರರಿಗೆ ಹರಡದಂತಿರಲು ಬೇನೆ ಬಂದಿರುವ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಬೆರೆಯಲು ಬಿಡಬಾರದು.

ಶಿಶುಗಳಲ್ಲಿ ಪಿಂಕ್ ಐ ಬೇನೆಗೆ ಕಾರಣಗಳು

ವೈರಸ್ ಸೋಂಕಿನಿಂದ ಪಿಂಕ್ ಐ ಬರಬಹುದಾಗಿದ್ದು, ಹೀಗಾದಾಗ ಚಳಿ ಜ್ವರದ ಲಕ್ಷಣಗಳು ಕಂಡು ಬರಬಹುದು.

ನವಜಾತ ಶಿಶುಗಳಿಗೆ ನೀಡುವ ಕಣ್ಣಿನ ಔಷಧಿ (ಐ ಡ್ರಾಪ್ಸ್) ಯಿಂದ ಕಣ್ಣುಗಳಲ್ಲಿ ಉರಿಯೂತ ಉಂಟಾಗಿ ಕೆಮಿಕಲ್ ಕಂಜಕ್ಟಿವಿಟೀಸ್ ಉಂಟಾಗಬಹುದು. ಕಣ್ಣೀರು ನಾಳಗಳು ಬ್ಲಾಕ್ ಆಗುವುದರಿಂದಲೂ ಕಂಜಕ್ಟಿವಿಟೀಸ್ ರೀತಿಯ ಲಕ್ಷಣಗಳು ಕಾಣಿಸಬಹುದು.

ಶಿಶುಗಳಲ್ಲಿ ಪಿಂಕ್ ಐ ಬೇನೆ ಲಕ್ಷಣಗಳು

ಗುಡ್ಡೆಯ ಬಿಳಿ ಭಾಗ ಗುಲಾಬಿ ಅಥವಾ ತುಸು ಕೆಂಪಾಗಿರುವುದು.

*ಕಣ್ಣಿನಲ್ಲಿ ನೀರಾಡುವುದು ಅಥವಾ ಚುಚ್ಚುವಿಕೆಯ ಅನುಭವ.

*ಕಣ್ಣು ಗುಡ್ಡೆಯ ಕೆಳ ವರ್ತುಲಗಳು ಕೆಂಪಾಗುವುದು.

ಶಿಶುಗಳಿಗೆ ಬರುವ ಪಿಂಕ್ ಐ ಬೇನೆ ನಿವಾರಣೆಗೆ ಉಪಯೋಗಿಸಬಹುದಾದ ಮನೆ ಮದ್ದು ವಿಧಾನಗಳು ಹೀಗಿವೆ:

ಎದೆ ಹಾಲು

ತಾಯಿಯ ಎದೆ ಹಾಲಿನಲ್ಲಿ ಸಾಕಷ್ಟು ನೋವು ನಿವಾರಕ ಅಂಶಗಳಿರುತ್ತವೆ. ಎದೆ ಹಾಲಿನಲ್ಲಿರುವ ಕೊಲೊಸ್ಟ್ರಮ್ ನಲ್ಲಿ ಮೈಕ್ರೊನ್ಯೂಟ್ರಿಯೆಂಟ್ಸ್ ಯಥೇಚ್ಛವಾಗಿರುತ್ತವೆ. ಶಿಶುಗಳಿಗೆ ಬರುವ ಸಾಮಾನ್ಯ ಕಾಯಿಲೆಗಳೆಲ್ಲವನ್ನೂ ಗುಣಪಡಿಸುವ ಶಕ್ತಿ ತಾಯಿ ಹಾಲಿನಲ್ಲಿದೆ ಎಂಬುದನ್ನು ತಜ್ಞ ವೈದ್ಯರು ಸಹ ದೃಢೀಕರಿಸಿದ್ದಾರೆ.

ಬಳಸುವ ವಿಧಾನ : ಪಿಂಕ್ ಐ ನಿವಾರಣೆಗೆ ಶಿಶುವಿನ ಎರಡೂ ಗುಡ್ಡೆಗಳ ಮೇಲೆ ದಿನಕ್ಕೆ ೨ ರಿಂದ ೩ ಬಾರಿ ಎದೆ ಹಾಲನ್ನು ಸವರಬೇಕು. ಡ್ರಾಪರ್ ಮೂಲಕ ಅಥವಾ ನೇರವಾಗಿ ಎದೆ ಹಾಲನ್ನು ಕಣ್ಣುಗಳಿಗೆ ಹಾಕಬಹುದು.

ಒಂದೇ ಕಣ್ಣಲ್ಲಿ ಬೇನೆ ಇದ್ದರೂ ಎರಡೂ ಕಣ್ಣುಗಳಿಗೆ ಎದೆ ಹಾಲು ಹಾಕಬೇಕು. ಇದರಿಂದ ಬೇನೆ ಮತ್ತೊಂದು ಕಣ್ಣಿಗೆ ಹರಡದಂತೆ ತಡೆಯಬಹುದು.

ಕಚ್ಚಾ ಜೇನು ತುಪ್ಪ

ಜೇನಿನಲ್ಲಿ ಬ್ಯಾಕ್ಟೀರಿಯಾ ನಿರೋಧಕ ಹಾಗೂ ಸೋಂಕು ನಿರೋಧಕ ಗುಣಗಳಿರುವುದರಿಂದ ಇದನ್ನು ಅನೇಕ ಸಂದರ್ಭಗಳಲ್ಲಿ ಆಂಟಿ ಬಯಾಟಿಕ್ ಆಗಿ ಬಳಸಲಾಗುತ್ತದೆ. ಇದು ಹಲವಾರು ರೀತಿಯ ಕಣ್ಣು ಬೇನೆ ಸೋಂಕು ನಿವಾರಣೆಗೂ ಸಹಕಾರಿಯಾಗಿದೆ.

ಬಳಸುವ ವಿಧಾನ : ಒಂದು ಚಿಕ್ಕ ಬಟ್ಟಲಿನಲ್ಲಿ ಅದರ ಕಾಲು ಭಾಗದಷ್ಟು ಜೇನು ತುಪ್ಪ ತೆಗೆದುಕೊಂಡು ಅಷ್ಟೇ ಪ್ರಮಾಣದ ಉಗುರು ಬೆಚ್ಚನೆಯ ಡಿಸ್ಟಿಲ್ಡ್ ವಾಟರ್ ಬೆರೆಸಿ. ಈ ಮಿಶ್ರಣದ ಒಂದರಿಂದ ಎರಡು ಹನಿ ಎರಡೂ ಕಣ್ಣುಗಳಿಗೆ ಹಾಕಿ. ಸೋಂಕು ಕಡಿಮೆ ಆಗುವವರೆಗೆ ಕೆಲ ಗಂಟೆಗಳ ಅಂತರದಲ್ಲಿ ಈ ಉಪಚಾರವನ್ನು ಮುಂದುವರಿಸಬಹುದು.

ಅರಿಶಿನ

ಅರಿಶಿನ ಇದು ನೈಸರ್ಗಿಕವಾದ ಶ್ರೇಷ್ಠ ಆಂಟಿ ಬಯಾಟಿಕ್ ಆಗಿದೆ. ಉರಿಯನ್ನು ಕಡಿಮೆಗೊಳಿಸಿ ನೋವು ನಿವಾರಣೆಯನ್ನು ಶೀಘ್ರಗೊಳಿಸುವ ಶಕ್ತಿ ಅರಿಶಿಣದಲ್ಲಿದೆ. ಇದು ಪಿಂಕ್ ಐಗೆ ಕಾರಣವಾಗುವ ಅಲರ್ಜಿಕಾರಕ ಅಂಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ.

ಬಳಸುವ ವಿಧಾನ : ಒಂದು ಚಮಚದಷ್ಟು ಅರಿಶಿನ ಪುಡಿಯನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಅದರಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು.

ಬಿಸಿ ನೀರಲ್ಲಿ ಒಂದು ಚಮಚೆ ಅರಿಶಿಣ ಪುಡಿ ಮಿಕ್ಸ್ ಮಾಡಬೇಕು. ಸ್ವಚ್ಛ ಹತ್ತಿ ಬಟ್ಟೆಯನ್ನು ಇದರಲ್ಲಿ ನೆನೆಸಿ ಅದನ್ನು ಕಣ್ಣುಗಳ ಮೇಲಿಡಬೇಕು. ಇದು ಸಹ ಪಿಂಕ್ ಐ ಬೇನೆ ನಿವಾರಣೆಗೆ ಸಹಕಾರಿಯಾಗಿದೆ.

ಕಾಫಿ

ಪಿಂಕ್ ಐ ಬೇನೆ ನಿವಾರಣಗೆ ಕಾಫಿ ಪುಡಿ ಅತ್ಯುತ್ತಮ ಮನೆ ಔಷಧಿಗಳಲ್ಲೊಂದಾಗಿದೆ. ಈ ವಿಧಾನದಲ್ಲಿ ಕಾಫಿ ಪುಡಿಯಿಂದ ಕಣ್ಣು ತೊಳೆದುಕೊಳ್ಳಲಾಗುತ್ತದೆ.

ಬಳಸುವ ವಿಧಾನ : ಅರ್ಧ ಕಪ್ ನೀರಲ್ಲಿ ಒಂಚೂರು ಕಾಫಿ ಪುಡಿ ಹಾಕಿ ಕುದಿಸಿ. ಇದು ಪೂರ್ಣ ತಣ್ಣಗಾದ ನಂತರ ಈ ನೀರಿನಿಂದ ಕಣ್ಣುಗಳನ್ನು ತೊಳೆಯಬೇಕು.

ಬೇನೆ ಉಪಶನವಾಗುವವರೆಗೆ ದಿನಕ್ಕೆ ನಾಲ್ಕು ಬಾರಿ ಈ ವಿಧಾನ ಅನುಸರಿಸಬಹುದು.

ಚಮೋಮಿಲ್ ಟೀ

ಚಮೋಮಿಲ್ ಟೀ ಇದೊಂದು ಚಮೋಮಿಲ್ ಹೂವಿನಿಂದ ತಯಾರಿಸಿದ ಚಹಾ ಪುಡಿ ಆಗಿದೆ. ಇದು ನೋವಿಗೆ ತಂಪು ನೀಡಿ ಗುಣಪಡಿಸುವ ಶಕ್ತಿ ಹೊಂದಿದೆ. ಸುಮಧುರ ಪರಿಮಳ ಹೊಂದಿರುವ ಇದು ಕಣ್ಣು ಬೇನೆ ನಿವಾರಣೆಗೂ ಉಪಯುಕ್ತವಾಗಿದೆ.

ಬಳಸುವ ವಿಧಾನ : ನೀರಲ್ಲಿ ಚಮೋಮಿಲ್ ಹೂಗಳನ್ನು ಹಾಕಿ ಕುದಿಸಿ. ಇದು ಸಂಪೂರ್ಣ ತಣ್ಣಗಾದ ನಂತರ ಹೂಗಳನ್ನು ಮುಚ್ಚಿದ ಕಣ್ಣು ರೆಪ್ಪೆಗಳ ಮೇಲೆ ಇಡಿ. ಹತ್ತಿಯ ಗುಂಡುಗಳನ್ನು ಸಹ ಇದಕ್ಕಾಗಿ ಉಪಯೋಗಿಸಬಹುದು. ನಿಯಮಿತ ಅವಧಿಯ ಅಂತರದಲ್ಲಿ ಈ ವಿಧಾನವನ್ನು ಪುನರಾವರ್ತಿಸಬಹುದು.

ನೋವು ನಿವಾರಣೆಗೆ ಚಮೋಮಿಲ್ ಎಣ್ಣೆಯನ್ನು ಸಹ ಬಳಸಬಹುದು. ಕೆಲ ಹನಿಗಳಷ್ಟು ಚಮೋಮಿಲ್ ಎಣ್ಣೆಯನ್ನು ಡಿಸ್ಟಿಲ್ಡ್ ವಾಟರ್‌ನಲ್ಲಿ ಬೆರೆಸಿ. ಇದರಲ್ಲಿ ಹತ್ತಿಯನ್ನು ಅದ್ದಿ ಸುಮಾರು ೧೦ ನಿಮಿಷ ಕಣ್ಣುಗಳ ಮೇಲಿಡಿ.

ಒಂದು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಈ ವಿಧಾನ ಬಳಸಬಹುದು ಎಂಬುದು ಗಮನದಲ್ಲಿರಲಿ.

ಕಚ್ಚಾ ಆಲೂಗಡ್ಡೆ

ಜೀವ ಕೋಶಗಳನ್ನು ಸಂಕೋಚನಗೊಳಿಸುವ ಅಂಶ ಬಟಾಟೆಗಳಲ್ಲಿರುತ್ತದೆ. ಇದರಿಂದ ಕಣ್ಣಿನ ನೋವು ಹಾಗೂ ಉರಿ ಶಮನವಾಗುತ್ತದೆ. ಆಲೂಗಡ್ಡೆಯನ್ನು ಹೋಳು ಮಾಡಿ ಅಥವಾ ತುರಿದು ಉಪಯೋಗಿಸಬಹುದಾಗಿದೆ.

ಬಳಸುವ ವಿಧಾನ : ಆಲೂಗಡ್ಡೆಯೊಂದನ್ನು ತೊಳೆದು ಒಂದು ತೆಳುವಾದ ಸ್ಲೈಸ್ ಮಾಡಿಕೊಳ್ಳಿ. ಬೇನೆ ಇರುವ ಕಣ್ಣಿನ ಮೇಲೆ ಈ ಹೋಳನ್ನು ಇಡಿ. ತುರಿದ ಆಲೂಗಡ್ಡೆಯನ್ನು ಸಹ ಕಣ್ಣುಗಳ ಮೇಲೆ 10 ನಿಮಿಷ ಇಟ್ಟರೆ ಪರಿಣಾಮಕಾರಿಯಾಗಿರುತ್ತದೆ. ದಿನದಲ್ಲಿ ಕೆಲ ಬಾರಿ ಈ ವಿಧಾನವನ್ನು ಅನುಸರಿಸಬಹುದು. ಆದರೆ ಪ್ರತಿ ಬಾರಿ ಹೊಸ ಆಲೂಗಡ್ಡೆ ಹೋಳನ್ನು ಮಾತ್ರ ಬಳಸಬೇಕು.

ಕೊಲಾಯ್ಡಲ್ ಸಿಲ್ವರ್ ಡ್ರಾಪ್ಸ್

ಕೊಲಾಯ್ಡಲ್ ಸಿಲ್ವರ ಇದು ಮಾರುಕಟ್ಟೆಯಲ್ಲಿ ದೊರಕುವ ಔಷಧಿಯಾಗಿದೆ. ಇದು ಕಣ್ಣುಗಳಿಗೆ ಆರಾಮ ನೀಡಿ ಉರಿಯನ್ನು ನಿವಾರಿಸುವ ಗುಣ ಹೊಂದಿದೆ. ಶಿಶುಗಳ ಕಣ್ಣು ಬೇನೆ ನಿವಾರಣೆಗಾಗಿ ಬಹು ಹಿಂದಿನಿಂದಲೇ ಇದನ್ನು ಬಳಸಲಾಗುತ್ತಿದೆ. ಇದನ್ನು ಬಾಹ್ಯವಾಗಿ ಬಳಸಬಹುದು.

ಬಳಸುವ ವಿಧಾನ : ಡ್ರಾಪರ್ ಮೂಲಕ ೨ ರಿಂದ ೩ ಕೊಲಾಯ್ಡಲ್ ಸಿಲ್ವರ್ ಹನಿಗಳನ್ನು ಕಣ್ಣುಗಳಿಗೆ ಹಾಕಿ.

ನೋವು ಕಡಿಮೆಯಾಗುವವರೆಗೆ ದಿನದಲ್ಲಿ ೩ ರಿಂದ ೪ ಬಾರಿ ಈ ವಿಧಾನ ಅನುಸರಿಸಬಹುದು. ಒಂದು ಕಣ್ಣಿಗೆ ಮಾತ್ರ ಸೋಂಕು ಇದ್ದರೂ ಎರಡೂ ಕಣ್ಣುಗಳಿಗೆ ಉಪಚಾರ ಮಾಡಿ. ಇದರಿಂದ ಮತ್ತೊಂದು ಕಣ್ಣಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು.

ವಿಟಮಿನ್ ಎ, ಸಿ ಮತ್ತು ಝಿಂಕ್ ಸೇವನೆ

ವಿಟಮಿನ್ ಎ, ಸಿ ಮತ್ತು ಸತುವಿನ ಅಂಶ ಹೆಚ್ಚಾಗಿರುವ ಆಹಾರ ನೀಡುವುದರಿಂದ ಶಿಶುಗಳಲ್ಲಿನ ಕಣ್ಣಿನ ಸೋಂಕು ನಿವಾರಿಸಬಹುದು ಎಂಬುದು ಸಂಶೋಧನೆಗಳಿಂದ ದೃಢ ಪಟ್ಟಿದೆ. ವಿಟಮಿನ್ ಎ ಅಂಶಗಳು ಹೇರಳವಾಗಿರುವ ಆಹಾರ (ಗಜ್ಜರಿ ಅಥವಾ ಪಾಲಕ ಸೊಪ್ಪು) ಸೇವನೆಯಿಂದ ಆರೋಗ್ಯಕರ ಜೀವಕೋಶಗಳ ಬೆಳವಣಿಗೆ ಹೆಚ್ಚಾಗಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಶಿಶುಗಳಿಗೆ ಸತುವು ಹಾಗೂ ವಿಟಮಿನ್ ಸಿ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು (ಸಿಟ್ರಸ್ ಹಣ್ಣುಗಳು, ತರಕಾರಿ, ಮೀನು ಮತ್ತು ಮೊಟ್ಟೆ ಇತ್ಯಾದಿ) ನೀಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಉಪ್ಪು ನೀರಿನ ಬಳಕೆ

ಉಪ್ಪು ನೀರಿನ ಬಳಕೆಯು ಕಣ್ಣಿನ ಸೋಂಕು ನಿವಾರಣೆಗೆ ಅತಿ ಕಡಿಮೆ ವೆಚ್ಚದ ಆದರೂ ಹೆಚ್ಚು ಪರಿಣಾಮಕಾರಿ ವಿಧಾನವಾಗಿದೆ. ಇದು ಬಳಸಲು ಅತಿ ಸರಳವಾಗಿದ್ದು, ಕಣ್ಣಿನ ಸೋಂಕಿಗೆ ಕಾರಣವಾದ ಕಲ್ಮಶಗಳನ್ನು ತೊಡೆದು ಹಾಕುತ್ತದೆ. ಬಳಸುವ ವಿಧಾನ : ಕುದಿಯುವ ನೀರಿಗೆ ಒಂಚೂರು ಉಪ್ಪು ಹಾಕಿ. ಇದು ಆರಿದ ನಂತರ ಇದರಲ್ಲಿ ಹತ್ತಿಯ ಉಂಡೆಗಳನ್ನು ಅದ್ದಿ ಕಣ್ಣುಗಳ ಮೇಲಿಡಿ. ಪ್ರತಿ ಬಾರಿ ಈ ವಿಧಾನ ಅನುಸರಿಸುವಾಗ ಹೊಸ ಹತ್ತಿ ಉಂಡೆಯನ್ನೇ ಬಳಸಿ.

ಪಾರ್ಸಲೇ

ಪಾರ್ಸಲೇ ಇದೊಂದು ತರಕಾರಿ ಸಸಿ ಆಗಿದ್ದು ಕನ್ನಡದಲ್ಲಿ ಅಚ್ಚು ಮೂಡಾ ಎಂದು ಕರೆಯಲಾಗುತ್ತದೆ. ಇದು ನೋಡಲು ಕೊತ್ತಂಬರಿ ಸೊಪ್ಪಿನ ರೀತಿ ಇರುತ್ತದೆ. ಗಜ್ಜರಿಯ ಜ್ಯೂಸ್‌ನೊಂದಿಗೆ ಪಾರ್ಸಲೇ ಜ್ಯೂಸ್ ಮಿಕ್ಸ ಮಾಡಿ ಸೇವಿಸಿದರೆ ಪಿಂಕ್ ಐ ನಂತಹ ಕಣ್ಣು ಬೇನೆ ಬೇಗ ನಿವಾರಣೆಯಾಗುತ್ತವೆ. ಒಂದು ವರ್ಷ ಮೇಲ್ಪಟ್ಟ ಶಿಶುಗಳಿಗೆ ಮಾತ್ರ ಈ ವಿಧಾನ ಅನುಸರಿಸಬಹುದು ಎಂಬುದು ಗೊತ್ತಿರಲಿ.

ಟೀ ಬ್ಯಾಗ್

ಚಹಾದಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಮೈಕ್ರೊಬಿಯಲ್ ಗುಣಗಳಿರುತ್ತವೆ. ಹೀಗಾಗಿ ಕಣ್ಣಿ ಬೇನೆ ನಿವಾರಣೆಯಲ್ಲಿ ಚಹಾ ಉಪಯೋಗಿಸಲಾಗುತ್ತದೆ. ಸೋಂಕಿನಿಂದ ಉಂಟಾದ ಕಣ್ಣು ಬೇನೆ ನಿವಾರಣೆಗೆ ಟೀ ಬ್ಯಾಗ್ ವಿಧಾನ ಉಪಯುಕ್ತವಾಗಿದೆ. ಬಳಸುವ ವಿಧಾನ : ಬಿಸಿ ನೀರಲ್ಲಿ ಟೀ ಬ್ಯಾಗ್ ಅದ್ದಿ, ಇದನ್ನು ತಣ್ಣಗಾಗಲು ಬಿಡಿ. ಟೀ ಬ್ಯಾಗ್ ಅನ್ನು ಬಿಸಿ ನೀರಲ್ಲಿ ಅದ್ದಿ ತಣ್ಣಗಾಗುವವರೆಗೆ ಬಿಡುವುದರಿಂದ ಚಹಾದಲ್ಲಿನ ಅಂಶಗಳು ಹೊರ ಬರುತ್ತವೆ. ತಣ್ಣಗಾದ ಈ ಟೀ ಬ್ಯಾಗ್‌ಗಳನ್ನು ಕಣ್ಣುಗಳ ಮೇಲೆ ಇಡಿ.

ಅಲೋವೆರಾ

ಪಿಂಕ್ ಐ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಲೇ ಕಣ್ಣಿನ ಸುತ್ತ ಅಲೋ ವೆರಾ ಜೆಲ್ ಹಚ್ಚಲು ಆರಂಭಿಸಬೇಕು. ಅಲೋ ವೆರಾ ಗಿಡದ ರೆಂಬೆಯನ್ನು ಮುರಿದು ನೇರವಾಗಿ ಅದರ ಜೆಲ್ ಬಳಸಬೇಕು.

ಬಳಸುವ ವಿಧಾನ : ಒಂದೆರಡು ಹನಿ ಅಲೋ ವೆರಾ ಜೆಲ್ ಅನ್ನು ಎರಡೂ ಕಣ್ಣುಗಳಲ್ಲಿ ಹಾಕಿ. ದಿನಕ್ಕೆ ಕನಿಷ್ಠ ೨ ರಿಂದ ೩ ಮೂರು ಬಾರಿ ಇದನ್ನು ಪುನರಾವರ್ತಿಸಬಹುದು.

ಬಿಸಿ ಅಥವಾ ತಣ್ಣನೆಯ ಒತ್ತುವಿಕೆ

ಬೆಚ್ಚಗಿನ ಅಥವಾ ತಣ್ಣೀರಿನ ಒತ್ತುವಿಕೆಯಿಂದ ಕಣ್ಣುಗಳಲ್ಲಿನ ಜಿಗುಟಾದ ಅಂಶವನ್ನು ನಿವಾರಿಸಿ ಸೋಂಕು ಕಡಿಮೆ ಮಾಡಬಹುದು. ಸ್ವಚ್ಛವಾದ ಬಟ್ಟೆಯೊಂದನ್ನು ಬೆಚ್ಚಗಿನ ಅಥವಾ ತಣ್ಣೀರಿನಲ್ಲಿ ಅದ್ದಿ ಬಹಳಷ್ಟು ನೀರು ಉಳಿಯದಂತೆ ಹಿಂಡಿದ ನಂತರ ಇದನ್ನು ಕಣ್ಣುಗಳ ಮೇಲೆ ಇಡಬೇಕು. ಪ್ರತಿ ಬಾರಿಯೂ ಬೇರೆ ಬಟ್ಟೆ ಬಳಸುವುದು ಸೂಕ್ತ.

ಆಂಟಿ ಬಯಾಟಿಕ್ಸ್

ಒಂದು ವೇಳೆ ಕಣ್ಣಿನ ಸೋಂಕು ಹಾಗೂ ನೋವು ಕಡಿಮೆಯಾಗದೇ ಇದ್ದಲ್ಲಿ ತಕ್ಷಣ ವೈದ್ಯರನ್ನು ಕಾಣುವುದು ಸೂಕ್ತ. ಸೋಂಕಿನ ಪ್ರಮಾಣವನ್ನು ಆಧರಿಸಿ ವೈದ್ಯರು ಸೂಕ್ತ ಔಷಧಿಯನ್ನು ನೀಡುತ್ತಾರೆ. ಆದರೆ ನೇರವಾಗಿ ಮೆಡಿಕಲ್ ಶಾಪ್‌ಗೆ ಹೋಗಿ ಔಷಧಿ ಪಡೆಯುವುದು ಸರಿಯಲ್ಲ.

ನಿಮ್ಮ ಮಗುವಿಗೆ ಪಿಂಕ್ ಐ ಬಂದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು:

– ಆಗಾಗ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿ

– ಮಗು ಕಣ್ಣುಗಳನ್ನು ತಿಕ್ಕಿಕೊಳ್ಳದಂತೆ ಎಚ್ಚರ ವಹಿಸಿ

– ಉಪಯೋಗಿಸಿದ ಟವೆಲ್, ಬಟ್ಟೆ ಮುಂತಾದುವುಗಳನ್ನು ಮತ್ತೆ ಬಳಸಬೇಡಿ

-ಉಪಯೋಗಿಸಿದ ಬಟ್ಟೆಗಳನ್ನು ಮತ್ತೆ ಬಳಸುವ ಮುನ್ನ ಸ್ವಚ್ಛವಾಗಿ ಒಗೆದು ಸೋಂಕು ರಹಿತಗೊಳಿಸಿ

-ಮಗುವಿಗೆ ಡ್ರಾಪ್ಸ್ ಹಾಕುವಾಗ ಅಥವಾ ಕಣ್ಣುಗಳನ್ನು ಮುಟ್ಟುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ

-ಮಗುವಿನ ಟವೆಲ್ ಅಥವಾ ದಿಂಬುಗಳನ್ನು ಮತ್ತೊಬ್ಬರು ಬಳಸಬೇಡಿ

*ಮಗು ಶಾಲೆ ಅಥವಾ ಡೇ ಕೇರ್ ಸೆಂಟರ್‌ಗೆ ಹೋಗುತ್ತಿದ್ದಲ್ಲಿ, ಅಲ್ಲಿಗೆ ಕಳಿಸಬೇಕಾ ಅಥವಾ ಬೇಡವಾ ಎಂದು ವೈದ್ಯರಿಂದ ಸಲಹೆ ಪಡೆದುಕೊಳ್ಳಿ. ಅನೇಕ ಶಾಲೆಗಳು ಸಾಂಕ್ರಾಮಿಕ ರೋಗ ಕಡಿಮೆಯಾಗುವವರೆಗೆ ಮಗುವಿಗೆ ಶಾಲೆಗೆ ಪ್ರವೇಶ ನೀಡುವುದಿಲ್ಲ. ಸೋಂಕು ಜಾಸ್ತಿ ಇದ್ದರೆ ಅದು ಕಡಿಮೆಯಾಗುವವರೆಗೆ ಮಗುವನ್ನು ಶಾಲೆಗೆ ಕಳುಹಿಸದಿರುವುದೇ ಲೇಸು.

ಸೋಂಕು ಎಷ್ಟು ಅವಧಿಯವರೆಗೆ ಇರುತ್ತದೆ?

ಪಿಂಕ್ ಐ ಇದು ಸಾಂಕ್ರಾಮಿಕವಾಗಿದ್ದರೂ ಸಾಮಾನ್ಯವಾಗಿ ಎರಡು ವಾರಗಳಲ್ಲಿ (ಬಹುತೇಕ ಸಂದರ್ಭಗಳಲ್ಲಿ ಯಾವುದೇ ಉಪಚಾರ ನೀಡದಿರುವಾಗಲೂ) ತಾನಾಗಿಯೇ ಗುಣವಾಗುತ್ತದೆ. ಆದಾಗ್ಯೂ ಬ್ಯಾಕ್ಟೀರಿಯಾ ಸೋಂಕು ಆಗಿದ್ದರೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ.. ಅಗತ್ಯವಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಬೇಗ ಉಪಚರಿಸದಿದ್ದಲ್ಲಿ ಕಣ್ಣಿನ ದೃಷ್ಟಿಗೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.

Leave a Reply

Your email address will not be published. Required fields are marked *