ಪುಟ್ಟ ಮಕ್ಕಳೇಕೆ ರಾತ್ರಿ ಹೊತ್ತು ಅಳುತ್ತವೆ? ಇಲ್ಲಿವೆ ಹತ್ತು ಕಾರಣಗಳು

ಮಕ್ಕಳ ಅಳುವಿಕೆಗೆ ಕೆಲವಾರು ಕಾರಣಗಳಿದ್ದು ಕೇವಲ ಮಗುವಿನ ತಾಯಿ ಅಥವಾ ಆರೈಕೆಯ ಹೊಣೆ ಹೊತ್ತಿರುವ ದಾದಿಯರು ಮಾತ್ರವೇ ಈ ಕಾರಣಗಳನ್ನು ಗುರುತಿಸಬಲ್ಲರು. ಆದರೆ ಪ್ರತಿ ಅಗತ್ಯಕ್ಕೂ ವಿಶಿಷ್ಟ ಬಗೆಯ ಅಳುವಿಕೆಯಿಂದ ಮಗು ತನ್ನ ತಾಯಿಯ ಬಳಿ ನಿವೇದನೆ ಮಾಡಿಕೊಳ್ಳುತ್ತದೆ ಎಂಬುದು ಮಾತ್ರ ಅಚ್ಚರಿಯ ವಿಷಯವಾಗಿದೆ. ಪುಟ್ಟ ಮಗುವಿನ ಅಳು ಕೇಳಿದ ಯಾರಿಗೇ ಆದರೂ ಮನ ಕಲಕಿದಂತಾದರೂ ವಾಸ್ತವವಾಗಿ ಪ್ರತಿ ಅಳುವಿಗೂ ಒಂದು ಕಾರಣವಿದ್ದೇ ಇರುತ್ತದೆ. ಇಂತಹ ಹತ್ತು ಬಗೆಯ ಕಾರಣಗಳನ್ನು ಇಂದು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದೆ.

ಕೆಲವು ಬಾರಿ ಆಹಾರ ಬೇಕೆಂದು ಅತ್ತರೆ, ಕೆಲವು ಬಾರಿ ತನಗೆ ಇಷ್ಟವಿಲ್ಲದ ಯಾವುದೋ ಸದ್ದು ಅಥವಾ ಬೆಳಕು ಬೇಡವೆಂದು ಅಳಬಹುದು. ಕೆಲವೊಮ್ಮೆ ತನ್ನ ಬಟ್ಟೆ ಬದಲಿಸಲು ಅಥವಾ ಕೆಲವೊಮ್ಮೆ ಭಯದಿಂದ ಅಳಬಹುದು ಹಾಗೂ ಕಣ್ಣೀರು ಸುರಿಸಬಹುದು. ಬನ್ನಿ, ಈ ಅಚ್ಚರಿಯ ಕಾರಣಗಳು ಯಾವುವು ಎಂಬುದನ್ನು ನೋಡೋಣ:

ಅನಾರೋಗ್ಯ

ಮಕ್ಕಳಿಗೆ ಅನಾರೋಗ್ಯವುಂಟಾದರೆ ಅವರ ಮನೋಭಾವ ತೀವ್ರವಾಗಿ ಭಂಗವಾಗುತ್ತದೆ. ರಾತ್ರಿ ಅಳಲು ಇದು ಪ್ರಮುಖವಾದ ಕಾರಣವಾಗಿದೆ.

ಸ್ವಚ್ಛತೆಗೆ ಬೇಡಿಕೆ

ಮಕ್ಕಳು ರಾತ್ರಿ ಹೊತ್ತು ಗಲೀಜು ಮಾಡಿಕೊಂಡಾಗ ಒಂದು ನಿಮಿಷವೂ ಸುಮ್ಮನಿರಲು ಇಚ್ಛಿಸುವುದಿಲ್ಲ. ಆದ್ದರಿಂದ ಮಕ್ಕಳನ್ನು ಮಲಗಿಸುವ ಬಟ್ಟೆಯ ಬದಲು ಮುನ್ನ ಉತ್ತಮ ಗುಣಮಟ್ಟದ ಹಗ್ಗೀಸ್ ಅಥವಾ ಇತರ ಉತ್ಪನ್ನಗಳನ್ನು ತೊಡಿಸಿ ಮಲಗಿಸಬೇಕು.

ಆಹಾರದ ಬೇಡಿಕೆ

ಮಕ್ಕಳು ದಿನದಲ್ಲಿ ಹಲವಾರು ಬಾರಿ ಆಹಾರ ಸೇವಿಸಬೇಕಾಗುತ್ತದೆ. ಇದರಲ್ಲಿ ರಾತ್ರಿಯಲ್ಲಿಯೂ ಒಂದೆರಡು ಬಾರಿ ಇರುತ್ತದೆ. ಒಂದು ವೇಳೆ ತಾಯಿ ಮಗುವಿಗೆ ಕಾಲ ಕಾಲಕ್ಕೆ ಆಹಾರ ನೀಡದೇ ಇದ್ದರೆ, ವಿಶೇಷವಾಗಿ ರಾತ್ರಿ ಹೊತ್ತು, ಆಹಾರದ ಬೇಡಿಕೆ ಇರಿಸಿ ಮಕ್ಕಳು ಅಳುತ್ತವೆ.

ನೋವು ಎದುರಾದರೆ

ಮಕ್ಕಳಿಗೂ ಆರೋಗ್ಯದ ನಿಮಿತ್ತ ಏನಾದರೂ ತೊಂದರೆಯಾದರೆ ಉಂಟಾಗುವ ನೋವಿನಿಂದ ಅಳುತ್ತವೆ. ಮಕ್ಕಳ ಚರ್ಮವೂ ಅತಿ ಸೌಮ್ಯವಾಗಿರುವ ಕಾರಣ ಚಿಕ್ಕ ಸೊಳ್ಳೆಯ ಕಡಿತವೂ ಮಗುವಿಗೆ ಅತಿಯೇ ಎನಿಸುವಷ್ಟು ತರಿಸಬಹುದು. ಅಥವಾ ಹೊಟ್ಟೆನೋವು ಮೊದಲಾದ ಕಾರಣದಿಂದಲೂ ಮಕ್ಕಳು ಇಡೀ ರಾತ್ರಿ ಅಳಬಹುದು.

ತಾಯಿಯ ಅನುಪಸ್ಥಿತಿ

ಒಂದು ವೇಳೆ ತಾಯಿ ತನ್ನ ಕಣ್ಣಿಗೆ ಕಾಣದೇ ಇದ್ದಾಗಲೂ ಮಗು ಅತಿ ಹೆಚ್ಚಿನ ಅಸುರಕ್ಷತಾ ಭಾವನೆಯನ್ನು ಅನುಭವಿಸುತ್ತದೆ ಹಾಗೂ ಭಯಭೀತಗೊಂಡು ಅಳುತ್ತದೆ. ರಾತ್ರಿಯಿಡೀ ಅಳಲು ಇದು ಪ್ರಮುಖ ಕಾರಣವಾಗಿದೆ.

ಗಮನವನ್ನು ಸೆಳೆಯಲು

ಪ್ರತಿ ಮಗುವೂ ತನ್ನ ತಾಯಿ, ತಂದೆ ಅಥವಾ ಇತರ ಆಪ್ತರ ಗಮನವನ್ನು ತನ್ನೆಡೆಗೆ ಸೆಳೆಯಲು ಯತ್ನಿಸುತ್ತದೆ. ಇದನ್ನು ಪಡೆಯದೇ ಇದ್ದಾಗ ಇದನ್ನು ಪಡೆಯಲು ಅಳುವಿನ ಮೂಲಕ ಗಮನ ಸೆಳೆಯಲು ಯತ್ನಿಸುತ್ತವೆ. ಆಗ ಮಗುವನ್ನು ಅಪ್ಪಿಕೊಂಡು ಸಂತೈಸುವ ಮೂಲಕ ಅಳು ತಕ್ಷಣವೇ ಕಡಿಮೆಯಾಗುತ್ತದೆ.

ಒಂದು ವೇಳೆ ಚರ್ಮದಲ್ಲಿ ಉರಿಯುಂಟಾದರೆ

ಕೆಲವೊಮ್ಮೆ ಸೋಂಕು ಅಥವಾ ಇತರ ಕಾರಣಗಳಿಂದ ಮಕ್ಕಳ ಕೋಮಲ ಚರ್ಮದಲ್ಲಿ ಸೂಕ್ಷ್ಮ ಗೆರೆಗಳು ಮೂಡುತ್ತವೆ ಹಾಗೂ ಇದು ಭಾರೀ ಉರಿ ತರಿಸುತ್ತದೆ. ವಿಶೇಷವಾಗಿ ಹೆಚ್ಚಿನ ಹೊತ್ತು ಡಯಾಪರ್ ಗಳನ್ನು ತೊಡಿಸಿದ್ದರೆ ಇದರ ಅಂಚುಗಳು ಸತತವಾಗಿ ಘರ್ಷಿಸುವ ಮೂಲಕ ಅಥವಾ ಪ್ರಷ್ಟಭಾಗವನ್ನು ಹೆಚ್ಚು ಹೊತ್ತು ತೇವವಾಗಿರಿಸಿ ಸೋಂಕು ಹರಡಿಸುತ್ತದೆ. ಈ ತೊಂದರೆಗೆ ಶಮನ ನೀಡುವ ಕ್ರೀಮುಗಳನ್ನು ಅಥವಾ ಇತರ ಮನೆಮದ್ದುಗಳನ್ನು ಅನುಸರಿಸಬೇಕು.

ಆಯಾಸಗೊಂಡಿದ್ದಾಗ

ಒಂದು ವೇಳೆ ಮಕ್ಕಳು ಆಯಾಸಗೊಂಡು ಮಲಗಲು ಕಷ್ಟವಾದಾಗಲೂ ಸಾಮಾನ್ಯವಾಗಿ ಅಳುತ್ತವೆ. ಈ ಹೊತ್ತಿನಲ್ಲಿ ಮಕ್ಕಳಿಗೆ ಬಾಲಗೀತೆಯನ್ನು ಹಾಡಿ ಮಲಗಿಸಬೇಕು.

ಆಯಾಸಗೊಂಡಿದ್ದಾಗ

ಒಂದು ವೇಳೆ ಮಕ್ಕಳು ಆಯಾಸಗೊಂಡು ಮಲಗಲು ಕಷ್ಟವಾದಾಗಲೂ ಸಾಮಾನ್ಯವಾಗಿ ಅಳುತ್ತವೆ. ಈ ಹೊತ್ತಿನಲ್ಲಿ ಮಕ್ಕಳಿಗೆ ಬಾಲಗೀತೆಯನ್ನು ಹಾಡಿ ಮಲಗಿಸಬೇಕು.

ವಾತಾವರಣದಲ್ಲಿ ಬದಲಾವಣೆ

ಕೆಲವೊಮ್ಮೆ ನಿದ್ದೆಯ ಸಮಯದಲ್ಲಿ ಬದಲಾಗುವ ವಾತಾವರಣ, ಉದಾಹರಣೆಗೆ ಯಾವುದೋ ಸದ್ದು, ಬೆಳಕು, ಗಾಳಿ ಇಲ್ಲದೇ ಸೆಖೆ ಹೆಚ್ಚುವುದು ಮೊದಲಾದ ಯಾವುದೇ ಕಾರಣ ಮಗುವಿನ ನಿದ್ದೆಗೆ ಭಂಗ ಉಂಟುಮಾಡಬಹುದು. ನಿದ್ದೆಯಿಂದ ಏಳುವ ಮಕ್ಕಳು ಅಳಲು ತೊಡಗುವುದು ಸಾಮಾನ್ಯ.

Leave a Reply

Your email address will not be published. Required fields are marked *