fbpx

ದೇವಾಡಿಗ ಸಂಘ ಹೆಬ್ರಿ ಕಾರ್ಯಕಕ್ರಮ ಯಶಸ್ವೀ ಯಾಗಿ ಜರುಗಿತು.

ದೇವಾಡಿಗ ಸಂಘ ಹೆಬ್ರಿ : ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಶ ಡಾ ದೇವರಾಜ್ ಕೆ, ಹೆಬ್ರಿ ಸಂಘದ ಅಧ್ಯಕ್ಶ ಶಂಕರ ದೇವಾಡಿಗ ಹಾಗೂ ಇತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ,ಮಾಜಿ ಶಾಸಕ ಶ್ರೀ ಗೋಪಾಲ್ ಭಂಡಾರಿ ಉಪಸ್ಥಿತರಿದ್ದರು, ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದ ಶಾಸಕ ಶ್ರೀ ಸುನಿಲ್ ಕುಮಾರ್ ,ಸಮಾಜ ಬಾಂಧವರನ್ನು ಒಟ್ಟು ಸೇರಿಸಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತೋಷದ ಸಂಗತಿ. ಸಂಘವು ಕುಟುಂಬಗಳನ್ನು ಒಗ್ಗೂಡಿಸಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮುನ್ನಡೆಯುತ್ತಿದೆ. ಶಿಕ್ಷ ಣದಲ್ಲಿ ನಮ್ಮ ಜಿಲ್ಲೆ ಮುಂದಿದ್ದರೂ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಹೋಗುವ ಕೊರತೆ ಇದೆ. ಶಿಕ್ಷ ಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಹೆಬ್ರಿ ಸಂಘದ ಕಟ್ಟಡ ಕಾಮಗಾರಿಗೆ ಶಾಸಕರ ನಿಧಿಯಿಂದ 5ಲಕ್ಷ ಅನುದಾನ ನೀಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ನಾಗಸ್ವರ ವಾದಕ ಅಣ್ಣುದೇವಾಡಿಗ ಧರ್ಮಸ್ಧಳ, ಗುರುಪ್ರಸಾದ್‌ ಗುಳಿಬೆಟ್ಟು, ಕ್ರೀಡಾಸಾಧನೆ ಮಾಡಿದ ವಿದ್ಯಾರ್ಥಿಗಳಾದ ಗೌರವ್‌, ವಿಕ್ರಮಾರ್ಜುನ, ಸೈನಿಕ ಎಚ್‌. ಪ್ರದೀಪ್‌ ದೇವಾಡಿಗ ಪೋಷಕರನ್ನು ಗೌರವಿಸಲಾಯಿತು.

ಸಾಮೂಹಿಕ ಸತ್ಯನಾರಾಯಣ ಪೂಜೆ, ಪುರಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ವೈವಿಧ್ಯ, ಸ್ಯಾಕ್ಸೋಫೋನ್‌ ವಾದನ ಸಮಾಜ ಬಾಂಧವರಿಂದ ನಡೆಯಿತು. ಕಟ್ಟಡ ಸಮಿತಿಯ ಅಧ್ಯಕ್ಷ ಎಚ್‌. ಜನಾದನ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಿ.ಜಿ. ರಾಘವೇಂದ್ರ, ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *