fbpx

ಸಪ್ತ ಸ್ವರ ವಿವಿದೋದ್ದೇಶ ಸಹಕಾರಿ ಸಂಘ ನಿ. ತಲ್ಲೂರು : ನೂತನ ಸಭಾ ಕೊಠಡಿಯ ಉದ್ಘಾಟನೆ .

ಸಪ್ತ ಸ್ವರ ವಿವಿದೋದ್ದೇಶ ಸಹಕಾರಿ ಸಂಘ ನಿ. ತಲ್ಲೂರು ಇದರ ನೂತನ ಕೇಂದ್ರ ಕಚೇರಿಯನ್ನು ಶಿವಮೊಗ್ಗ ಲೋಕಸಭಾ ಸಂಸದರಾದ ಬಿ ವೈ. ರಾಘವೇಂದ್ರ ಉದ್ಘಾಟಿಸಿದರು.ನೂತನ ಸಭಾ ಕೊಠಡಿಯನ್ನು ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿಯವರು. ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಭದ್ರತಾ ಕೊಠಡಿಯನ್ನು ಮುಂಬೈ ದೇವಾಡಿಗ ಸಂಘದ ಅಧ್ಯಕ್ಷರಾದ ರವಿ ದೇವಾಡಿಗ ಉದ್ಘಾಟಿಸಿದರು.ದುಬೈ ಉದ್ಯಮಿ ನಾಗೂರಿನ ದಿನೇಶ್ ಚಂದ್ರ ಶೇಖರ್ ದೇವಾಡಿಗ ನೀಡಿದ ಹೊಸ ಭದ್ರತಾ ಕೋಶವನ್ನು(ಸೇಫ್ ಲಾಕರ್)ನ್ನು ಯುವರಾಜ್ ಕೆ ದೇವಾಡಿಗ ದುಬೈ ಉದ್ಘಾಟಿಸಿದರು.ಕಚೇರಿಯ ಗಣಕಯಂತ್ರವನ್ನು(ಕಂಪ್ಯೂಟರ್)ನ್ನು ಕೈಗಾರಿಕೋದ್ಯಮಿ ರಮೇಶ್ ದೇವಾಡಿಗ ವಂಡ್ಸೆ ಉದ್ಘಾಟಿಸಿದರು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ವಹಿಸಿದ್ದರು.ನಿರಖು ಠೇವಣಿ ಪತ್ರವನ್ನು ಲೆಕ್ಕಪರಿಶೋಧನ ಉಪನಿರ್ದೇಶಕರಾದ ಶ್ರೀ ವಿಠಲ್ ರವರು ಹಸ್ತಾಂತರಿಸಿದರು.ಕಾರ್ಪೊರೇಷನ್ ಬ್ಯಾoಕನ ಮುಖ್ಯ ಪ್ರಭಂಧಕರಾದ ಮಹಾಲಿಂಗ ದೇವಾಡಿಗ ಉಪ್ಪುಂದ ಇವರು ಸಪ್ತ ಸ್ವರ ಸಹಕಾರಿ ಸಂಘದ 260 ಸ್ವಸಹಾಯ ಗುಂಪುಗಳಿಗೆ ಬ್ಯಾಗ್ ವಿತರಣೆ ಮಾಡಿದರು.ಕಾರ್ಪೊರೇಷನ್ ಬ್ಯಾoಕ್ ವಡೇರ್ ಹೋಬಳಿ ಶಾಖೆಯ ಮುಖ್ಯ ಪ್ರಭಂಧಕರಾದ ಸುಧೀರ್ ಕಾಮತ್ ಸಾಲ ಪತ್ರ ವಿತರಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ,ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಬಿಲ್ಲವ,ಗುತ್ತಿಗೆದಾರರಾದ ರಾಜೇಶ್ ಕಾರಂತ್,ವಕೀಲರಾದ ರಾಜಕುಮಾರ್ ನೆಂಪು. ಸೇವಾ ಸಂಘಮ ಶಿಸುಮಂದಿರ ಗಂಗೊಳ್ಳಿ ಇದರ ಅಧ್ಯಕ್ಷರಾದ ಶ್ರೀ ಸವಿತಾ ದೇವಾಡಿಗ,ಸದಾನಂದ್ ಶೇರುಗಾರ್, ಉದ್ಯಮಿ ಕಿರಣ್ ದೇವಾಡಿಗ ಹೊಸ್ಕಳಿ,ಏರ್ಟೆಲ್ ಕಂಪೆನಿ ವಲಾಯಾಧ್ಯಕ್ಷರಾದ ಸುಧಾಕರ್ ದೇವಾಡಿಗ,ದೇವಾಡಿಗ ಸಂಘ ತಲ್ಲೂರು ಇದರ ಅಧ್ಯಕ್ಷರಾದ ಬಸವ ದೇವಾಡಿಗ,ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇದರ ಗೌರವಾಧ್ಯಕ್ಷರಾದ ಶೀನ ದೇವಾಡಿಗ ಮರವಂತೆ,ಬ್ರಹ್ಮಾವರ ಸಂಘದ ಅಧ್ಯಕ್ಷರಾದ ಸುರಾಲು ಶಂಭು ಶೇರಿಗಾರ್, ಏಕಾನಾಥೇಶ್ವರಿ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಗಣೇಶ್ ದೇವಾಡಿಗ ಉಡುಪಿ, ನಿವೃತ್ತ ಉಪು ಪ್ರಾಂಶುಪಾಲರಾದ ಎಮ್ ಎನ್ ಶೇರಿಗಾರ್,ನಿವೃತ್ತ ಲೆಕ್ಕ ಪರಿಶೋಧಕರಾದ ಮಂಜುನಾಥ್ ಖಾರ್ವಿ,ಸಂಘದ ನಿರ್ದೇಶಕರಾದ ಚಂದ್ರ ದೇವಾಡಿಗ, ಚಂದ್ರಶೇಖರ್ ದೇವಾಡಿಗ, ಶೋಭಾ ದೇವಾಡಿಗ, ರಾಘವೇಂದ್ರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.ಸೂರ್ಯ ವಾದ್ಯ ಕಲಾವಿದರಾದ ಸುಬ್ಬ ದೇವಾಡಿಗ ಸೌಕೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಆರ್ ಮಂಜುನಾಥ್ ದೇವಾಡಿಗ,ಹೆಮ್ಮಾಡಿ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಉದಯ್ ಕುಮಾರ್,ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ನೆಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚಂದ್ರ ದೇವಾಡಿಗ ಬಿಜೂರು,ಅಭಿಷೇಕ್ ದೇವಾಡಿಗ ಆಲೂರು,ಮೇಘ ಧೂತ ಪ್ರಶಸ್ತಿ ವಿಜೇತರಾದ ಸುಧಾಕರ್ ದೇವಾಡಿಗ, ಸ್ಯಾಕ್ಸೋಫೋನ್ ವಾದನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಭಾರತಿ ದೇವಾಡಿಗ ಶಿವಪುರ,ನೆಟ್ ಬಾಲ್ ಬ್ಯಾಡಿಮಿಟನ್ ಅಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಅಭಿಷೇಕ್ ದೇವಾಡಿಗ ಮೊದಲಾದವರನ್ನು ಅಭಿನಂಧಿಸಲಾಯಿತು.ಸಭೆಗೆ ಆಗಮಿಸಿದ ಅತಿಥಿಗಳನ್ನು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ರವಿ ದೇವಾಡಿಗ ಸ್ವಾಗತಿಸಿದರು. ಮಹೇಶ್ ದೇವಾಡಿಗ ಹಟ್ಟಿಯಂಗಡಿ ಹಾಗೂ ಸುನಿಲ್ ಕಾರ್ಯಕ್ರಮ ನಿರೂಪಿಸಿದರು.ಸಂಘದ ನಿರ್ದೇಶಕರಾದ ರಾಜೇಶ್ ದೇವಾಡಿಗ ವಂದಿಸಿದರು.

Leave a Reply

Your email address will not be published. Required fields are marked *