ಯೋನಿ ಶಿಲೀಂಧ್ರ ಸೋಂಕು ಸಮಸ್ಯೆಗೆ-‘ತೆಂಗಿನ ಎಣ್ಣೆ’ ಬಳಸಿದರೆ ನಿವಾರಣೆಯಾಗುವುದು

ತೆಂಗಿನೆಣ್ಣೆಯ ಉಪಯೋಗಗಳು ಹಲವಾರು ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರಕೃತಿದತ್ತವಾಗಿ ಸಿಗುವಂತಹ ತೆಂಗಿನ ಕಾಯಿ ಯಾವುದೇ ಕಲಬೆರಕೆ ಇಲ್ಲದೆ ಇರುವಂತದ್ದಾಗಿದೆ. ಆದರೆ ಮಾರುಕಟ್ಟೆಗೆ ಬಂದು ಅದರ ಎಣ್ಣೆ ತೆಗೆದ ಬಳಿಕ ಅದರಲ್ಲಿ ಕಲಬೆರಕೆ ಆರಂಭವಾಗುತ್ತದೆ. ತೆಂಗಿನ ಎಣ್ಣೆಯನ್ನು ಭಾರತೀಯ ಹಲವಾರು ಶತಮಾನಗಳಿಂದಲೂ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಇದರ ಬಳಕೆ ಹೆಚ್ಚು. ತೆಂಗಿನೆಣ್ಣೆಯನ್ನು ತೆಂಗಿನ ಕಾಯಿಯ ಬಿಳಿ ಭಾಗದಿಂದ ತೆಗೆಯಲಾಗುವುದು. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಹಾಗೂ ಸೌಂಧರ್ಯ ಲಾಭಗಳು ಇವೆ. ಅದಾಗ್ಯೂ, ತೆಂಗಿನ ಎಣ್ಣೆ ಬಳಸಿಕೊಂಡು ಶಿಲೀಂಧ್ರ ಸೋಂಕು ನಿವಾರಣೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ?

ಹೌದು, ಶಿಲೀಂಧ್ರ ಸೋಂಕು ನಿವಾರಣೆ ಮಾಡಲು ತೆಂಗಿನ ಎಣ್ಣೆಯು ಸರಿಯಾದ ಸಾಮಗ್ರಿಯಾಗಿದ್ದು, ಇದು ನೀವು ಇದುವರೆಗೆ ಪ್ರಯತ್ನಿಸದೆ ಇರುವಂತಹ ನೈಸರ್ಗಿಕ ಮನೆಮದ್ದಿನಲ್ಲಿ ಒಂದಾಗಿದೆ. ತೆಂಗಿನ ಎಣ್ಣೆಯಲ್ಲಿ ಮೂರು ವಿಧದ ಕೊಬ್ಬಿನಾಮ್ಲ ಆಗಿರುವಂತಹ ಕ್ಯಾಪ್ರಿಲಿಕ್ ಆಮ್ಲ, ಕ್ಯಾಪ್ರಿಕ್ ಆಮ್ಲ ಮತ್ತು ಲಾರಿಕ್ ಆಮ್ಲ ಇದೆ. ಶಿಲೀಂಧ್ರ ಸೋಂಕು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಆಗಿದೆ. ಇದಕ್ಕೆ ಮೊದಲು ಶಿಲೀಂಧ್ರ ಸೋಂಕು ಏನು ಎಂದು ನಾವು ತಿಳಿದುಕೊಳ್ಳುವ.

 

ಶಿಲೀಂಧ್ರದ ಸೋಂಕು ಎಂದರೇನು?

ಶಿಲೀಂಧ್ರ ಎನ್ನುವುದು ಯೋನಿಯ ಭಾಗದಲ್ಲಿ ಯಾವಾಗಲೂ ಸಣ್ಣ ಮತ್ತು ಹಾನಿಕಾರಕವಲ್ಲದ ಪ್ರಮಾಣದಲ್ಲಿ ಕಂಡುಬರುವುದು. ಆದರೆ ಇದು ನಿಯಂತ್ರಣ ಮೀರಿ ಬೆಳೆದ ವೇಳೆ ಅದರಿಂದ ತುರಿಕೆ, ಸುಟ್ಟಂತೆ ಆಗುವುದು ಮತ್ತು ಕೆಂಪಾಗುವ ಸಮಸ್ಯೆ ಕಾಣಿಸಬಹುದು. ಕೆಲವೊಂದು ಸಂದರ್ಭದಲ್ಲಿ ದಪ್ಪಗಿನ, ಬಿಳಿ ದ್ರವ ಹೊರಬರುವಂತಹ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಯೋನಿಯ ಒಳಗಡೆ ಶಿಲೀಂಧ್ರವು ಅತಿಯಾಗಿ ಬೆಳವಣಿಗೆ ಆಗುವ ಕಾರಣದಿಂದಾಗಿ ಈ ಪರಿಸ್ಥಿತಿ ಉಂಟಾಗುವುದು. ಶಿಲೀಂಧ್ರ ಸೋಂಕಿಗೆ ತೆಂಗಿನ ಎಣ್ಣೆಯಿಂದ ಆಗುವ ಲಾಭಗಳು ಏನು ಎಂದು ನೀವು ತಿಳಿಯಿರಿ.

ತೆಂಗಿನ ಎಣ್ಣೆ ಯಾಕೆ? ಪ್ರಯೋಗಾಲಯಗಳಲ್ಲಿ ನಡೆಸಿರುವಂತಹ ಪರೀಕ್ಷೆಯ ಪ್ರಕಾರ ತೆಂಗಿನ ಎಣ್ಣೆಯ ತುಂಬಾ ಸುಲಭವಾಗಿ ಶಿಲೀಂಧ್ರ ಕೋಶದ ನ್ಯೂಕ್ಲಿಯಸ್ ನ್ನು ಸ್ಫೋಟ ಮಾಡಬಲ್ಲದು. ಇದರಿಂದ ಯೋನಿ ಭಾಗದ ಕಿರಿಕಿರಿ ಮತ್ತು ಉರಿಯೂತವನ್ನು ಇದು ಕಡಿಮೆ ಮಾಡುವುದು. ಮೇಲೆ ಹೇಳಿರುವಂತಹ ಮೂರು ರೀತಿಯ ಕೊಬ್ಬಿನಾಮ್ಲವು ವೈರಲ್ ವಿರೋಧಿ, ಸೂಕ್ಷ್ಮಾಣು ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶ ಮಾಡುವುದು. ಅದಾಗ್ಯೂ, ಇವುಗಳು ಒಳ್ಳೆಯ ಬ್ಯಾಕ್ಟೀರಿಯಾಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯಲ್ಲೂ ಬ್ಯಾಕ್ಟೀರಿಯಾದ ಸಮತೋಲನ ಮಾಡಲು ನೆರವಾಗುವದು.

ಕ್ಯಾಪ್ರಿಲಿಕ್ ಆಮ್ಲ ತೆಂಗಿನ ಎಣ್ಣೆಯಲ್ಲಿ ಇರುವಂತಹ ಕ್ಯಾಪ್ರಿಲಿಕ್ ಆಮ್ಲವು ಯೋನಿಯ ಶಿಲಿಂಧ್ರ ಸೋಂಕಿಗೆ ಕಾರಣವಾಗುವ ಶಿಲೀಂಧ್ರದ ಕೋಶ ಪೊರೆಯನ್ನು ವಿಘಟಿಸುವುದು. ಇದು ಶಿಲೀಂಧ್ರ ಬೆಳೆಯುವುದನ್ನು ತಡೆಯವುದು ಮಾತ್ರವಲ್ಲದೆ, ಅದು ಮರಳದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಪರಿಶುದ್ಧವಾಗಿರುವ ತೆಂಗಿನ ಎಣ್ಣೆಯನ್ನು ಬಳಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಯಾಕೆಂದರೆ ಇದರಲ್ಲಿ ಇರುವಂತಹ ಲೌರಿಕ್ ಆಮ್ಲ ಅಧಿಕವಾಗಿದ್ದು, ಇದು ಶಿಲೀಂಧ್ರ ಸೋಂಕಿನ ವಿರುದ್ಧ ಹೋರಾಡಲು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಬೆಂಬಲಿಸುವುದು.

ನೈಸರ್ಗಿಕ ಸಿಹಿಕಾರಕ ತೆಂಗಿನೆಣ್ಣೆಯು ನೈಸರ್ಗಿಕ ಸಿಹಿಕಾರಕ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಮತ್ತು ಇದು ಸಕ್ಕರೆಗೆ ಪರ್ಯಾಯವಾಗಿ ವರ್ತಿಸಿ ಶಿಲೀಂಧ್ರ ಸೋಂಕು ಬೆಳೆಯದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ತೆಂಗಿನ ಎಣ್ಣೆಯು ಪ್ರತಿರೋಧಕ ವ್ಯವಸ್ಥೆಗೆ ತಕ್ಷಣವೇ ಶಕ್ತಿ ನೀಡುವುದು. ಇದರೊಂದಿಗೆ ಶಿಲೀಂಧ್ರ ಅತಿಯಾಗಿ ಬೆಳೆದಿರುವಂತಹ ತುಂಬಾ ಕಿರಿಕಿರಿ, ಸೂಕ್ಷ್ಮವಾದ ಚರ್ಮದಲ್ಲಿ ರಕ್ಷಣಾ ಕವಚವಾಗಿ ಕಾರ್ಯ ನಿರ್ವಹಿಸಿ, ಶಿಲೀಂಧ್ರ ಸೋಂಕನ್ನು ನಿವಾರಣೆ ಮಾಡುವುದು.

ಶಿಲೀಂಧ್ರ ಸೋಂಕಿಗೆ ಇದನ್ನು ಬಳಸುವುದು ಹೇಗೆ? ಶಿಲೀಂಧ್ರ ಸೋಂಕಿನ ವಿರುದ್ಧ ಹೋರಾಡಲು ಬಾಹ್ಯ ಹಾಗೂ ಆಂತರಿಕವಾಗಿ ಹೋರಾಡಲು ತೆಂಗಿನ ಎಣ್ಣೆಯು ನೆರವಾಗುವುದು. ತೆಂಗಿನ ಎಣ್ಣೆಯನ್ನು ನೀವು ಬಾಧಿತ ಜಾಗಕ್ಕೆ ಹಚ್ಚಬಹುದು ಅಥವಾ ತೆಂಗಿನ ಎಣ್ಣೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು. ನೀವು ಏನು ಮಾಡಬಹುದು ಎಂದು ತಿಳಿಯಿರಿ.

ಇದನ್ನು ಹಚ್ಚಿಕೊಳ್ಳುವುದು ಹೇಗೆ? ಮೊದಲಿಗೆ ನೀವು ಶಿಲೀಂಧ್ರ ಸೋಂಕು ಇರುವಂತಹ ಜಾಗವನ್ನು ಸ್ವಚ್ಛ ಮಾಡಿಕೊಳ್ಳಿ ಮತ್ತು ಅದು ಒಣಗಲು ಬಿಡಿ. ಇದರ ಬಳಿಕ ಕೆಲವು ಹನಿ ತೆಂಗಿನ ಎಣ್ಣೆ ತೆಗೆದುಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ದಿನದಲ್ಲಿ ಎರಡರಿಂದ ಮೂರು ಸಲ ನೀವು ಹೀಗೆ ಮಾಡಿದರೆ ಅದರಿಂದ ಶಿಲೀಂಧ್ರ ಸೋಂಕು ನಿವಾರಣೆ ಆಗುವುದು. ಉತ್ತಮ ಫಲಿತಾಂಶಕ್ಕಾಗಿ ನೀವು ಕೆಲವು ವಾರಗಳ ತನಕ ಇದನ್ನು ನಿಯಮಿತವಾಗಿ ಹಚ್ಚಿಕೊಳ್ಳಿ.

ತೆಂಗಿನ ಎಣ್ಣೆಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಹೇಗೆ? ನೀವು ತಯಾರಿಸುವಂತಹ ಆಹಾರಕ್ಕೆ 1-2 ಚಮಚ ತೆಂಗಿನ ಎಣ್ಣೆ ಹಾಕಿಕೊಂಡು ಅದನ್ನು ಬೆಳಗ್ಗೆ ಸೇವಿಸಿ. ನಿಮಗೆ ಇದರಿಂದ ಸ್ವಲ್ಪವೂ ಆರಾಮ ಕಂಡುಬರದೇ ಇದ್ದರೆ ಆಗ ನೀವು ದಿನಕ್ಕೆ ಐದು ಚಮಚ ಬಳಸಿಕೊಳ್ಳಿ. ಬೇರೆ ಯಾವುದೇ ಅಡುಗೆ ಎಣ್ಣೆ ಅಥವಾ ಎಣ್ಣೆ ಬದಲಿಗೆ ಇದನ್ನು ಬಳಸಿಕೊಳ್ಳಿ.

Leave a Reply

Your email address will not be published. Required fields are marked *