Devadiga Portal

ಬ್ರಹ್ಮಾವರ: ಪೆಜಮಂಗೂರು ಗ್ರಾಮದ ಪೊಮ್ಮ ಸೇರಿಗಾರ್ತಿಗೆ ನೆರೆ ಪರಿಹಾರ.

ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಸೂರಾಲು ಉಜಿರ್ಗುಳಿ. ಪೊಮ್ಮ ಸೇರಿಗಾರ್ತಿಯವರ ಮನೆ ಭೀಕರಗಾಳಿ ಮಳೆಗೆ ಸಂಪೂರ್ಣ ಕುಸಿದು ಬಿದ್ದು ಹೋಗಿರುತ್ತದೆ.ಮನೆಕಳೆದುಕೊಂಡ ಸಂತ್ರಸ್ತೆಗೆ ಮುಂಬಯಿ ದೇವಾಡಿಗ ಸಂಘದ ವತಿಯಿಂದ ಅಧ್ಯಕ್ಷರಾದ ರವಿ.ಎಸ್.ದೇವಾಡಿಗರು * ಕೊಡಮಾಡಿದ 10000ರೂಪಾಯಿಗಳ ಚೆಕ್ಕನ್ನು ಬ್ರಹ್ಮಾವರ ದೇವಾಡಿಗ ಸಂಘದ ಅಧ್ಯಕ್ಷರಾದ ಎಸ್.ಶಂಭು ಸೇರಗಾರರು ಸಂತ್ರಸ್ತೆ ಪೂಮ್ಮ ಸೇರಿಗಾರ್ತಿಯವರಿಗೆ ಹಸ್ತಾಂತರಿಸಿದರು.ಸಂಘದ ಸದಸ್ಯರಾದ ನಾಗರಾಜ ಸೇರಿಗಾರ್,ಕೃಷ್ಣ ಸೇರಿಗಾರ್,ಅಣ್ಣಯ ಸೇರಿಗಾರ್,,ಪ್ರಕಾಶ ಸೇರಿಗಾರ್ ಸಂತ್ರಸ್ತೆಯ ಮಕ್ಕಳು,ಮೊಮ್ಮಕ್ಕಳು ಉಪಸ್ಥಿತರಿದ್ದರು.

Comment here