ಗಡ್ಡ ಬೆಳೆಸುವುದರಿಂದಾಗುವ ಆರೋಗ್ಯಕಾರಿ ಲಾಭಗಳೆಷ್ಟು ಗೊತ್ತೆ?

ಕೆಲವೊಂದು ವಿಷಯಗಳು ಯಾವಾಗ ಜನಪ್ರಿಯಗೊಳ್ಳತೊಡತ್ತವೆಯೋ ಆಗಲೇ ಇದರ ಬಗ್ಗೆ ಟೀಕೆ ಟಿಪ್ಪಣಿಗಳೂ ಪ್ರಾರಂಭಗೊಳ್ಳತೊಡಗುತ್ತವೆ. ಸಾಮಾನ್ಯವಾಗಿ ಹೀಗೆ ಟೀಕೆ ಮಾಡುವವರಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ ಅಥವಾ ಇದು ಇಷ್ಟವಿರುವುದಿಲ್ಲ. ಪುರುಷರ ಗಡ್ಡದ ಬಗ್ಗೆಯೂ ಹೀಗೇ, ಕಾಲಾಂತರದಲ್ಲಿ ಗಡ್ಡದ ಬಗ್ಗೆ ಧನಾತ್ಮಕ ಮತ್ತು ಋಣಾತ್ಮಕ ಧೋರಣೆ ಕಾಣಬರುತ್ತಲೇ ಇದೆ. ವಿಶ್ವದ ಬಹುತೇಕ ದೇಶಗಳಲ್ಲಿ ಇದುವರೆಗೆ ಗಡ್ಡ ಮೀಸೆಗಳಿಗೆ ಇರದಿದ್ದ ಮನ್ನಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ವಾಸ್ತವದಲ್ಲಿ, ಹೆಚ್ಚಿನವರಿಗೆ ಇಂದಿನ ದಿನಗಳಲ್ಲಿರುವ ಧೋರಣೆ ಅಥವಾ ಫ್ಯಾಷನ್ / ಟ್ರೆಂಡ್ ಗಳನ್ನು ಅನುಸರಿಸುವುದೇ ಹೊರತು ಗಡ್ಡದ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯೇ ಇರುವುದಿಲ್ಲ. ಖ್ಯಾತನಾಮರನ್ನು ಅನುಸರಿಸುವ ಇಂದಿನ ಪೀಳಿಗೆ ತಾವೇಕೆ ಗಡ್ಡ ಬಿಡಬೇಕೆಂಬ ಅರಿವೇ ಇಲ್ಲದೇ ಕ್ರಿಕೆಟ್ ಕಪ್ತಾನನ ಗಡ್ಡದಂತೆಯೇ ಗಡ್ಡವಿರಿಸಿ ತಮ್ಮ ಮುಖಾರವಿಂದದ ಚೆಲುವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಆದರೆ ಗಡ್ಡ ಬಿಡುವ ನಿಜವಾದ ಅರ್ಥವನ್ನು ಅರಿತಿರುವ ಮತ್ತು ತಮ್ಮ ಗಡ್ಡದ ಬಗ್ಗೆ ನಿಜವಾದ ಅರ್ಥ ಹೊಂದಿರುವ ವ್ಯಕ್ತಿಗಳಿಗೆ ಗಡ್ಡದ ನಿರ್ವಹಣೆಗೆ ಸೌಂದರ್ಯದ ಹೊರತಾಗಿ ಇನ್ನೂ ಹೆಚ್ಚಿನ ಕಾರಣಗಳಿವೆ. ಗಡ್ಡವಿರುವವರನ್ನು ಟೀಕಿಸುವ ವ್ಯಕ್ತಿಗಳಿಗೆ ಒಂದು ವೇಳೆ ಈ ಪ್ರಯೋಜಗಳ ಬಗ್ಗೆ ಗೊತ್ತಾದರೆ ಟೀಕಿಸುವುದನ್ನು ನಿಲ್ಲಿಸುವುದು ಮಾತ್ರವಲ್ಲ, ಸ್ವತಃ ಗಡ್ಡ ಬಿಡುಗ ಬಗ್ಗೆಯೋ ಅವರು ಯೋಚಿಸಬಹುದು. ಗಡ್ಡವಿರುವ ವ್ಯಕ್ತಿಗಳು ಇತರ ವ್ಯಕ್ತಿಗಳಿಗಿಂತ ಉತ್ತಮ ಆರೋಗ್ಯ ಹೊಂದಿರುವುದನ್ನು ಇವರು ಗಮನಿಸಿದ ಬಳಿಕವಂತೂ ಟೀಕಿಸುವ ಬದಲು ಇತರರನ್ನೂ ಪ್ರೋತ್ಸಾಹಿಸಬಹುದು, ಬನ್ನಿ, ಈ ಮಹತ್ವದ ಗುಣಗಳು ಯಾವುವು ಎಂಬುದನ್ನು ನೋಡೋಣ:

1. ಅತಿನೇರಳೆ ಕಿರಣಗಳನ್ನು ತಡೆಯುತ್ತದೆ ಶೇಕಡಾ 95ರಷ್ಟು ಸೂರ್ಯನ ಅತಿನೇರಳೆ ಕಿರಣಗಳನ್ನು ಗಡ್ಡದ ಕೂದಲುಗಳು ತಡೆಯುತ್ತವೆ ಎಂದು ಸಂಶೋಧನೆಗಳು ಈಗಾಗಲೇ ಸಾಬೀತುಪಡಿಸಿವೆ. ಈ ಮೂಲಕ ಸೂಕ್ಷ್ಮವಾದ ಕೆನ್ನೆಯ ಚರ್ಮ ಸೂರ್ಯನ ಕಿರಣಗಳಿಂದ ಪ್ರಭಾವಿತಗೊಳ್ಳುವುದನ್ನು ತಪ್ಪಿಸುವುದು ಮಾತ್ರವಲ್ಲ, ಚರ್ಮದ ಕ್ಯಾನ್ಸರ್ ಬರುವುದರಿಂದಲೂ ರಕ್ಷಣೆ ಒದಗಿಸುತ್ತದೆ.

2. ಶೇವಿಂಗ್ ನಿಂದ ಮೊಡವೆಗಳು ಮೂಡುತ್ತವೆ ಒಂದು ವೇಳೆ ನಿಮಗೆ ಗಡ್ಡವಿದ್ದರೆ, ನಿಮ್ಮ ಕೆನ್ನೆಯ ಚರ್ಮ ಅತಿ ಸೂಕ್ಷ್ಮವಾಗಿರುವ ಸಾಧ್ಯತೆಗಳು ಹೆಚ್ಚು. ಕೆನ್ನೆಯ ಕೂದಲುಗಳನ್ನು ಶೇವಿಂಗ್ ಮೂಲಕ ಈ ಕೂದಲುಗಳನ್ನು ಕತ್ತರಿಸುವಾಗ ಚರ್ಮದ ಅಡಿಯಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ಇತರ ಭಾಗಕ್ಕೆ ಹರಡಿಸಬಹುದಾಗಿದೆ. ಈ ಬ್ಯಾಕ್ಟೀರಿಯಾಗಳೇ ಮೊಡವೆ ಮೂಡಲು ಪ್ರಮುಖ ಕಾರಣವಾಗಿದ್ದು ಚಿಕ್ಕ ಮೊಡವೆಯೊಂದು ಈಗಾಗಲೇ ಆಗಿದ್ದರೆ ಇಡಿಯ ಮುಖಕ್ಕೆ ಹರಡುವ ಸಾಧ್ಯತೆ ಇದರಿಂದ ಅಪಾರವಾಗಿ ಹೆಚ್ಚುತ್ತದೆ. ಆದ್ದರಿಂದ ಗಡ್ಡ ಬಿಟ್ಟರೆ, ಹೀಗೆ ಹರಡುವ ಸಂಭವವನ್ನು ತಪ್ಪಿಸಿದಂತಾಗುತ್ತದೆ ಹಾಗೂ ತ್ವಚೆಯೂ ಆರೋಗ್ಯಕರವಾಗಿರುತ್ತದೆ.

3. ಗಡ್ಡವಿದ್ದವರ ಧನಾತ್ಮಕ ಧೋರಣೆ ಅಧ್ಯಯನವೊಂದರಲ್ಲಿ, ಎಂಟು ಪುರುಷರನ್ನು ಮೊದಲು ಪೂರ್ಣ ಗಡ್ಡ ಬೋಳಿಸಿ ನಂತರ ಪೂರ್ಣಪ್ರಮಾಣದಲ್ಲಿ ಗಡ್ಡ ಬೆಳೆಸಲು ಸೂಚಿಸಲಾಯ್ತು. ಪ್ರತಿ ಹಂತದಲ್ಲಿಯೂ ಇವರ ಭಾವಚಿತ್ರವನ್ನು ಪಡೆದು ಗಡ್ಡವಿಲ್ಲದ ಮುಖದಿಂದ ಹಿಡಿದು ಪೂರ್ಣ ಗಡ್ಡದವರೆಗೆ ಇರುವ ಚಿತ್ರಗಳನ್ನು ಸಂಗ್ರಹಿಸಿ ಒಂದು ಆಲ್ಬಮ್ ರಚಿಸಲಾಯ್ತು. ಬಳಿಕ, ಈ ಆಲ್ಬಂ ಅನ್ನು ಈ ಪುರುಷರ ಪರಿಚಯವೇ ಇಲ್ಲದಿದ್ದ 64 ಪುರುಷರು ಮತ್ತು 64 ಮಹಿಳೆಯರಿಗೆ ತೋರಿಸಿ ಇವರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಸೂಚಿಸಲಾಯ್ತು. ಬಳಿಕ ಈ ಅಭಿಪ್ರಾಯಗಳನ್ನು ವಿಶ್ಲೇಷಿಸಿ ಫಲಿತಾಂಶವನ್ನು ಗಮನಿಸಲಾಯಿತು. ಅಚ್ಚರಿ ಎಂಬಂತೆ, ಗಡ್ಡವಿಲ್ಲದೇ ಇದ್ದಾಗ ಇದ್ದ ಅಭಿಪ್ರಾಯಗಳು ಗಡ್ಡ ಬೆಳೆದಂತೆಲ್ಲಾ ಬದಲಾಗುತ್ತಾ ಪೂರ್ಣಗಡ್ಡದವರೆಗೆ ಬಂದಾಗ ಹೆಚ್ಚು ಧನಾತ್ಮಕವಾಗಿತ್ತು. ಪೂರ್ಣಗಡ್ಡದ ಪುರುಷರನ್ನು ಹೆಚ್ಚು ಜವಾಬ್ದಾರಿಯುತ, ಆಕರ್ಷಕ ಮತ್ತು ಆರೋಗ್ಯಕರ ಎಂಬ ಅಭಿಪ್ರಾಯ ಆಗಿತ್ತು.

4. ಹೆಚ್ಚುವ ಆತ್ಮವಿಶ್ವಾಸ ತಮ್ಮ ಜೀವನದ ಎಲ್ಲಾ ಹಂತಗಳಲ್ಲಿಯೂ ಹೆಚ್ಚಿನ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ತೋರುವ ಪುರುಷರು ಗಡ್ಡಧಾರಿಗಳಾಗಿರುತ್ತಾರೆ ಎಂದು ಕಂಡುಬಂದಿದೆ. ಪುರುಷರಿಗೆ ಗಡ್ಡ ಒಂದು ಬಗೆಯ ಆತ್ಮವಿಶ್ವಾಸ ಮತ್ತು ಶಕ್ತಿಯ ಅವಗಾಹನೆಯನ್ನು ನೀಡುತ್ತದೆ ಹಾಗೂ ಇದು ಸುತ್ತಮುತ್ತ ಇರುವವರೆಲ್ಲರಿಗೂ ತಕ್ಷಣವೇ ಕಾಣಬರುತ್ತದೆ. ಹಾಗಾಗಿ, ಗಡ್ಡ ಬಿಡುವ ನಿರ್ಧಾರ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವ ಮತ್ತು ಹೆಚ್ಚಿನ ಯಶಸ್ಸನ್ನು ಪಡೆಯುವ ನಿರ್ಧಾರವೂ ಆಗಿರುತ್ತದೆ.

5. ನೈಸರ್ಗಿಕ ಸೋಸುಕ ಗಡ್ಡ ಮತ್ತು ಮೀಸೆಗಳ ಕೂದಲು ನಿಸರ್ಗ ಸುಮ್ಮಸುಮ್ಮನೇ ನೀಡಿಲ್ಲ, ಇದಕ್ಕೂ ಕೆಲವು ಉದ್ದೇಶಗಳಿವೆ. ನಮ್ಮ ಮೂಗಿನ ಹೊಳ್ಳೆಗಳ ಒಳಗೂ ದಟ್ಟವಾಗಿ ಕೂದಲುಗಳಿವೆ. ಈ ಕೂದಲುಗಳು ಸೂಕ್ಷ್ಮ ಅಲರ್ಜಿಕಾರಕ ಕಣಗಳನ್ನು ಆಕರ್ಷಿಸಿ ದೇಹದ ಒಳಹೋಗುವುದರಿಂದ ತಡೆಯುತ್ತದೆ. ಮೀಸೆಯ ಮತ್ತು ಗಡ್ಡದ ಕೂದಲುಗಳಿಗೂ ಈ ಗುಣಗಳಿವೆ. ಗಡ್ಡ ಮತ್ತು ಮೀಸೆಯ ಕೂದಲುಗಳು ಗಾಳಿಯಲ್ಲಿರುವ ಅಲರ್ಜಿಕಾರಕ ಗಳಗಳನ್ನು ಬಾಯಿಯತ್ತ ಹೋಗಗೊಡದೇ ಅಲರ್ಜಿಯಿಂದ ರಕ್ಷಣೆ ಒದಗಿಸುತ್ತದೆ. ಗಡ್ಡ ಮೀಸೆ ಎರಡೂ ಇರುವವರಿಗೆ ಈ ರಕ್ಷಣೆ ದುಪ್ಪಟ್ಟಾಗುತ್ತದೆ. ಆದರೆ, ಇವನ್ನು ಸ್ವಚ್ಛವಾಗಿರಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಗಡ್ಡ ಆರೈಕೆಗೆ ಈಗ ಮಾರುಕಟ್ಟೆಯಲ್ಲಿ ಗಡ್ಡದ ಎಣ್ಣೆ (ಬಿಯರ್ಡ್ ಆಯಿಲ್) ಎಂಬ ಪ್ರಸಾದನ ಭಾರೀ ಪ್ರಮಾಣದಲ್ಲಿ ದೊರಕುತ್ತಿರುವುದೇ ಗಡ್ಡದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

6. ಮುಂದುವರೆಯುವ ತಾರುಣ್ಯ ಗಡ್ಡ ನೀಡುವ ರಕ್ಷಣೆಯ ಮೂಲಕ ಆರೋಗ್ಯ ವೃದ್ಧಿಸುತ್ತದೆ ಹಾಗೂ ತ್ವಚೆಯನ್ನು ಕ್ಯಾನ್ಸರ್ ಕಾರಕ ರೋಗಗಳು ಮತ್ತು ಇತರ ತೊಂದರೆಗಳಿಂದ ರಕ್ಷಿಸುತ್ತದೆ. ಗಡ್ಡವಿದ್ದವರಿಗೆ ಮೊಡವೆ, ಚರ್ಮ ಗಾಢವಾಗುವುದು ಮೊದಲಾದ ತೊಂದರೆಗಳೂ ಗಡ್ಡವಿಲ್ಲದಿದ್ದಾಗ ಇರುವುದಕ್ಕಿಂತ ಅತಿ ಕಡಿಮೆ ಇರುತ್ತದೆ. ಗಡ್ಡ ಮೀಸೆಯ ಕೂದಲುಗಳಿಗೆ ಅಲರ್ಜಿಕಾರಕ ಕಣಗಳನ್ನು ಆಕರ್ಷಿಸಿ ದೇಹವನ್ನು ರಕ್ಷಿಸುವ ಗುಣವಿದ್ದು ಇದು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಮೂಲಕ ತಾರುಣ್ಯ ಹೆಚ್ಚು ಕಾಲ ಮುಂದುವರೆಯುತ್ತದೆ ಹಾಗೂ ಇದು ಮಾನಸಿಕವಾಗಿ ಹೆಚ್ಚಿನ ಹುರುಪನ್ನು ನೀಡುತ್ತದೆ.

7. ಕಡಿಮೆ ನೆರಿಗೆಗಳು ಸೂರ್ಯನ ಕಿರಣಗಳು ಚರ್ಮದ ಮೇಲೆ ಕಡಿಮೆ ಬಿದ್ದರೆ ಎದುರಾಗುವ ಅಡ್ಡಪರಿಣಾಮಗಳಲ್ಲಿ, ವ್ಯತಿರಿಕ್ತವಾಗಿ ಉಪಯೋಗಕಾರಿಯಾಗಿರುವ ಪರಿಣಾಮವೆಂದರೆ ನೆರಿಗೆ ಮೂಡುವುದು ಕಡಿಮೆಯಾಗುವುದು. ಇದರ ಅರ್ಥ ನೆರಿಗೆಗಳು ಮೂಡದಂತೆ ತಡೆಯುವ ಅತಿ ಸುಲಭ ಮಾರ್ಗವೆಂದರೆ ಗಡ್ಡ ಬಿಡುವುದಾಗಿದೆ. ಹಾಗಾಗಿ, ಗಡ್ಡಬಿಡಲು ಸಾಧ್ಯವಿಲ್ಲದವರಿಗೆ ಈ ಸೌಭಾಗ್ಯವಿಲ್ಲವೆಂದೇ ಹೇಳಬಹುದು. ಹಾಗಾಗಿ, ಈಗ ಗಡ್ಡವಿಲ್ಲದಿದ್ದರೂ ಗಡ್ಡಬಿಡುವ ಅವಕಾಶವಿದ್ದರೆ ಇದನ್ನು ಸದುಪಯೋಗಪಡಿಸಿಕೊಳ್ಳಿ.

8. ಒಸಡುಗಳ ಕಾಯಿಲೆಗಳು ಆವರಿಸುವ ಸಾಧ್ಯತೆ ಕಡಿಮೆಗೊಳಿಸಲು ನೆರವಾಗುತ್ತದೆ. ಗಡ್ಡಮೀಸೆಯ ಕೂದಲುಗಳು ಗಾಳಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತಡೆದು ಆರೋಗ್ಯವನ್ನು ಕಾಪಾಡುವ ಜೊತೆಗೇ ಒಸಡುಗಳಿಗೆ ಕಾಯಿಲೆ ಎದುರಾಗುವ ಸಾದ್ಯತೆಯನ್ನೂ ತಗ್ಗಿಸುತ್ತವೆ. ಆದರೆ ಗಡ್ಡವಿದೆ ಎಂದಾಕ್ಷಣ ಹಲ್ಲುಜ್ಜುವುದೇ ಬೇಕಾಗಿಲ್ಲ ಎಂದರ್ಥವಲ್ಲ. ಇವರೂ ಎಂದಿನಂತೆ ಹಲ್ಲುಜ್ಜುವ ಪೇಸ್ಟ್ ಮತ್ತು ಬ್ರಶ್ ಉಪಯೋಗಿಸಲೇಬೇಕಾಗುತ್ತದೆ. ಆದರೂ, ಗಡ್ಡಧಾರಿಗಳಿಗೆ ಇತರ ವ್ಯಕ್ತಿಗಳಿಗೆ ಇಲ್ಲದ ರಕ್ಷಣೆ ಕೊಂಚವೇ ಪ್ರಮಾಣದಲ್ಲಿಯಾದರೂ ಸರಿ, ಹೆಚ್ಚುತ್ತದೆ ಎಂದೇ ಹೇಳಬಹುದು.

9. ತ್ವಚೆಯಲ್ಲಿ ಆರ್ದ್ರತೆಯನ್ನು ಉಳಿಸುತ್ತದೆ. ಶೇವಿಂಗ್ ಮಾಡುವ ಮೂಲಕ ತ್ವಚೆಯ ಹೊರಪದರಲ್ಲಿರುವ ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತವೆ ಹಾಗೂ ಸೂಕ್ಷ್ಮಗೀರುಗಳು ಮೂಡುತ್ತವೆ. ಪರಿಣಾಮವಾಗಿ ತ್ವಚೆಯ ಅಡಿಯಲ್ಲಿದ್ದ ತೈಲ ಆವಿಯಾಗುತ್ತದೆ ಹಾಗೂ ತ್ವಚೆ ಒಣಗುತ್ತದೆ. ವಿಶೇಷವಾಗಿ ಬೇಸಿಗೆ ಮತ್ತು ಚಳಿಗಾಲದಲ್ಲಿ ಹೀಗೆ ತೆರೆಯಲ್ಪಟ್ಟ ಸೂಕ್ಷ್ಮರಂಧ್ರಗಳ ಮೂಲಕ ಆರ್ದ್ರತೆ ನಷ್ಟವಾಗುತ್ತದೆ ಹಾಗೂ ತ್ವಚೆಯ ಹೊರಪದರ ಪಕಳೆಯೇಳತೊಡಗಬಹುದು. ಆದರೆ ಗಡ್ಡವಿದ್ದವರಿಗೆ ಈ ತೊಂದರೆಗಳೆಲ್ಲಾ ಇರುವುದೇ ಇಲ್ಲ.

10. ಬ್ಯಾಕ್ಟೀರಿಯಾಗಳ ಇತರ ಸೋಂಕುಗಳಿಂದ ರಕ್ಷಿಸುತ್ತದೆ. ಗಡ್ಡವಿದ್ದರೆ ಸಾಕು, ತ್ವಚೆಯ ಸೂಕ್ಷ್ಮರಂಧ್ರಗಳು ಅತಿ ಕಡಿಮೆ ತೆರೆಯಲ್ಪಡುವ ಕಾರಣ ನೈಸರ್ಗಿಕ ರೂಪದಲ್ಲಿಯೇ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಒದಗುತ್ತದೆ. ತನ್ಮೂಲಕ ಹಲವಾರು ಸೋಂಕುಗಳಿಂದ ರಕ್ಷಣೆ ದೊರಕುತ್ತದೆ. ಒಂದು ವೇಳೆ ಈ ಬ್ಯಾಕ್ಟೀರಿಯಾಗಳು ಸೂಕ್ಷ್ಮರಂಧ್ರಗಳ ಮೂಲಕ ದೇಹ ಪ್ರವೇಶಿಸಿದರೆ ದೇಹಕ್ಕೂ ಪ್ರವೇಶಿಸಬಹುದು. ಶೇವಿಂಗ್ ನಿಂದ ಈ ಸೂಕ್ಷ್ಮರಂಧ್ರಗಳು ತೆರೆದು ಈ ಸೋಂಕು ಎದುರಾಗುವ ಸಾಧ್ಯತೆಗೆಗಳು ಹೆಚ್ಚುತ್ತದೆ. ಗಡ್ಡ ಬೆಳೆಸಿ, ಈ ತೊಂದರೆಯಿಂದ ತಪ್ಪಿಸಿಕೊಳ್ಳಿ.

11. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತದೆ. ಚಳಿ ಹೆಚ್ಚುತ್ತಿದ್ದಂತೆಯೇ ಗಾಳಿಗೆ ಎದುರಾಗುವ ತ್ವಚೆ ಹೆಚ್ಚು ಚಳಿಗೆ ಒಡ್ಡಲ್ಪಡುತ್ತದೆ. ಗಡ್ಡ ಈ ಭಾಗವನ್ನು ಬೆಚ್ಚಗಿರಿಸುತ್ತದೆ. ಗಡ್ಡದ ಇರುವಿಕೆ ಚಳಿಗಾಲದಲ್ಲಿ ಹೆಚ್ಚು ರಕ್ಷಣೆ ದೊರಕುತ್ತದೆ. ಒಂದರ್ಥದಲ್ಲಿ ಗಡ್ಡ ತ್ವಚೆಗೆ ಒಂದು ಬಗೆಯ ಕವಚದಂತೆ ಇರುತ್ತದೆ.

12. ಅಸ್ತಮಾ ಇರುವ ವ್ಯಕ್ತಿಗಳಿಗೆ ನೆರವಾಗುತ್ತದೆ. ಗಂಟಲಿಗೆ ಎದುರಾಗುವ ತೊಂದರೆಗಳನ್ನು ರಕ್ಷಣೆ ನೀಡುವಂತೆಯೇ ಗಡ್ಡ ಇತರ ವಿಷಕಾರಿ ವಸ್ತುಗಳಿಂದ ರಕ್ಷಣೆ ನೀಡುತ್ತದೆ. ವಿಶೇಷವಾಗಿ ಅಸ್ತಮಾ ಇರುವ ವ್ಯಕ್ತಿಗಳು ಉಸಿರಾಡುವ ಗಾಳಿಯಲ್ಲಿರುವ ಕಣಗಳನ್ನು ಗಡ್ಡ ಸೋಸುವ ಕಾರಣ ಹೆಚ್ಚಿನ ರಕ್ಷಣೆ ದೊರಕುತ್ತದೆ. ಗಡ್ಡವು ಕೇವಲ ತಂಪಾದ ಮುಖದ ಪರಿಕರಕ್ಕಿಂತ ಹೆಚ್ಚಾಗಿದೆ, ಇದು ಜೀವ ಉಳಿಸುವ ಸಾಧನವೂ ಆಗಿದೆ. ಗಡ್ಡವು ನೀಡುವ ಎಲ್ಲಾ ಆರೋಗ್ಯ ಪ್ರಯೋಜನಗಳೊಂದಿಗೆ, ಹೆಚ್ಚು ಪುರುಷರು ಗಡ್ಡವನ್ನು ಬೆಳೆಸುತ್ತಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಮುಂದಿನ ಬಾರಿ ಯಾರಾದರೂ ನೀವು ಗಡ್ಡ ಬಿಡಬೇಕು ಎಂದು ಹೇಳಲು ಪ್ರಯತ್ನಿಸಿದಾಗ, ನೀವು ಮಾಡಬೇಕಾಗಿರುವುದು ನಿಮ್ಮ ಗಡ್ಡವು ನಿಮಗೆ ದೀರ್ಘಾವಧಿಯ ಜೀವನ ಮತ್ತು ಆರೋಗ್ಯಕರ ಚರ್ಮವನ್ನು ನೀಡುತ್ತದೆ ಎಂಬುದನ್ನು ನೆನಪಿಸುತ್ತದೆ. ವಿಮರ್ಶಕರನ್ನು ಮೌನಗೊಳಿಸಲು ವೈಜ್ಞಾನಿಕ ಮಾರ್ಗವನ್ನು ಹೊಂದಿರುವುದು ಯಾವಾಗಲೂ ಒಳ್ಳೆಯದು.

Leave a Reply

Your email address will not be published. Required fields are marked *