ಇಪ್ಪತ್ತರ ಆಸುಪಾಸಿನ ಹುಡುಗ : ಒಂದೇ ದಿನ ನೆಡೆದ ಮೂರು ಕಂಬಳದಲ್ಲಿ ಆರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ.

ವಿಶ್ವನಾಥ್ ದೇವಾಡಿಗ ಮೂಲತ ಕೃಷಿ ಕುಟುಂಬದಲ್ಲಿ ಹುಟ್ಟಿದ 20 ತರ ಹರೆಯದ, ಈತ ಹತ್ತನೆಯ ತರಗತಿಯ ತನಕ ಊರಿನಲ್ಲಿ ವಿದ್ಯಾಭ್ಯಾಸ ಮಾಡಿ. ಮುಂದಿನ ವಿದ್ಯಾಭ್ಯಾಸ ಮುಂಬೈ ನಲ್ಲಿ ಕೆಲಸದ ಜೊತೆಗೇ ಮುಂದುವರೆಸಿ ದ್ವಿತೀಯ ಪಿಯುಸಿ ಯನ್ನು ಮುಗಿಸಿದ ಅವರು. ಕೃಷಿಯಮೇಲಿನ ಆಸಕ್ತಿಯಿಂದ ಮತ್ತೆ ತನ್ನ ಪಯಣವನ್ನು ಊರಿನ ಕಡೆ ಬೆಳೆಸುತ್ತಾರೆ. ಕೃಷಿಯ ಜೊತೆ ಕೋಣಗಳನ್ನು ಸಾಕುವ ಛಲ ಇವರದ್ದು
ಪ್ರತಿಯೊಬ್ಬರಿಗೂ ಸದಿಸುವ ಛಲ ಇರುತ್ತದೆ ಅದಕ್ಕೆ ಇವರು ಆಯ್ಕೆ ಮಾಡಿಕೊಂಡ ಕ್ಷೇತ್ರ ಕಂಬಳ. ಆದರೆ ಮೊದ ಮೊದಲು ಅವಕಾಶಗಳ ಕೊರತೆ ಇವರನ್ನು ಕಾಡಿತು, ಚಿಕ್ಕ ಹುಡುಗ ಇವನ ಹತ್ತಿರ ಏನು ಆಗೋಲ್ಲ ಎಂಬ ಕೊಂಕುನುಡಿಗಳಿಗೆ ಕಿವಿಗೊಡದೇ ಚಲಕ್ಕೆ ಬಿದ್ದ ಛಲದಂಕ ಎಂದರೇ ತಪ್ಪಿಲ್ಲ. ಜನಾರ್ದನ ದೇವಾಡಿಗ, ಹರೀಶ್ ದೇವಾಡಿಗರ ಜಯ ವಿಜಯ ಕೋಣದ ಹಗ್ಗ ಹೀಡಿದು ಕಂಬಳಕ್ಕೆ ಇಟ್ಟ ಮೊದಲ ಹೆಜ್ಜೆ ಇವರದು
ರಾಘವೇಂದ್ರ ಪೂಜಾರಿ ಕಾಮನ ಮನೆ, ರವಿ ದೇವಾಡಿಗ, ರಾಘವೇಂದ್ರ ದೇವಾಡಿಗ ಕಂಚಿಕಾನ್, ಸುರೇಶ್ ಕಾಡಿನತಾರ್ ಅವರ ಗರಡಿಯಲ್ಲಿ ಪಳಗಿದ ಇವರು, ಈ ದಿನ ಮುಂಚೂಣಿಯ ಯುವ ಬಹು ಬೇಡಿಕೆಯ ಕಂಬಳ ಓಟಗಾರ.

ಇವರ ಏಳಿಗೆಗೆ ಸುರೇಶ್ ಕಾಡಿನತಾರ್ ಅವರ ಪರಿಶ್ರಮ ತುಂಬಾ ಇದೆ. ಈತನನ್ನು ತೆಂಕುತಿಟ್ಟಿನ ಕಂಬಳಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಹಲವಾರು ದೊಡ್ಡ ದೊಡ್ಡ ಮಾಲೀಕರ ಕೋಣಗಳ ಹಗ್ಗ ಸವಾರಿ, ನೇಗಿಲ ಸವಾರಿ ಮಾಡುತ್ತ ಮುಂದೇ ಸಾಗುತ್ತಿರುವ ಇವರ ವಿಜಯಯಾತ್ರೆ ಇನ್ನು ಎತ್ತರಕ್ಕೆ ಸಾಗಲಿ ಇನ್ನು ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಕಂಬಳ ಅಭಿಮಾನಿಗಳು ಹಾರೈಸಿದ್ದಾರೆ.

Leave a Reply

Your email address will not be published. Required fields are marked *