ಶ್ರೀ ಪೊಳಲಿ ಷಷ್ಟಿ ರಥಕ್ಕೆ ದೇಣಿಗೆ ಸಂಗ್ರಹ ಹಾಗೂ ಹೊರೆಕಾಣಿಕೆ ಸಂಗ್ರಹ.

ತಾ.22.12.2019ನೇ ಆದಿತ್ಯವಾರದಂದು ಬೆಳಿಗ್ಗೆ 8.00ರಿಂದ ರಾತ್ರಿ 8.00ರವರೆಗೆ ವಿಟ್ಲ ದೇವಾಡಿಗ ಸಂಘದ ವ್ಯಾಪ್ತಿಯ ನಗ್ರಿ ಪುತ್ತೂರು ಮುಂತಾದ ಕಡೆಗಳ ದೇವಾಡಿಗ ಪ್ರಮುಖರನ್ನು ಬೇಟಿ ಮಾಡಿ ಶ್ರೀ ಪೊಳಲಿ ಷಷ್ಟಿ ರಥಕ್ಕೆ ದೇಣಿಗೆ ಸಂಗ್ರಹ ಹಾಗೂ ಹೊರೆಕಾಣಿಕೆ ಸಂಗ್ರಹ ಬಗ್ಗೆ ಮಾಹಿತಿ ನೀಡಲಾಯಿತು. ಹೋದೆಲ್ಲಾ ಕಡೆಗಳಲ್ಲಿ ದೇವಾಡಿಗ ಬಂಧುಗಳಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು. ರಾಮದಾಸ್ ಬಂಟ್ವಾಳ, ಪ್ರವೀಣ್ ತುಂಬೆ, ಕರುಣಾಕರ್ ಎಮ್. ಎಚ್. ಸದಾಶಿವ ಮೊೖಲಿ ಬೆಂಜನಪದವು, ನಾಗೇಶ್ ದೇವಾಡಿಗ ಪೊಳಲಿ, ಪ್ರಶಾಂತ್ ದೇವಾಡಿಗ ಪೊಳಲಿ, ಹಾಗೂ ವಿಶೇಷವಾಗಿ ನಗ್ರಿಯ ಚಂದ್ರಶೇಖರ ದೇವಾಡಿಗರವರು, ನಮ್ಮ ಸಮಿತಿಯ ಸಂಘಟನಾ ಕಾರ್ಯದರ್ಶಿಗಳೂ,ವಿಟ್ಲ ದೇವಾಡಿಗ ಸಂಘದ ಅಧ್ಯಕ್ಷರೂ ಆದ ರಮಾನಾಥ ದೇವಾಡಿಗರವರು ಇಡೀ ದಿನ ನಮ್ಮೊಡನೆ ಇದ್ದು ಸಮಯಕ್ಕೆ ಸರಿಯಾಗಿ ದೇವಾಡಿಗ ಬಂಧುಗಳ ಮನೆಯಲ್ಲಿಯೇ ಊಟೋಪಚಾರದ ವ್ಯವಸ್ಥೆ ಮಾಡಿ, ಹೆಚ್ಚಿನ ಸಂಖ್ಯೆಯ ದೇವಾಡಿಗರ ಬೇಟಿಗೆ ಅನುಕೂಲ ಮಾಡಿದರು. ಇಡೀ ದಿನದ ಕಾರ್ಯಕ್ರಮ ಸ್ಮರಣೀಯ ಕಾರ್ಯಕ್ರಮ. ದೇಣಿಗೆ ನೀಡಿದವರಿಗೂ, ಸಂಗ್ರಹಿಸಲು ಸಹಕರಿಸಿದವರಿಗೂ, ಶ್ರೀ ದೇವಿಯು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.

Leave a Reply

Your email address will not be published. Required fields are marked *